Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಂದಿನಿ ಹಾಲು ಕುಡಿಯುವವರಿಗೆ ಗುಡ್ ನ್ಯೂಸ್: ಶೇ.100% ಸುರಕ್ಷಿತ, ಸುಳ್ಳು ಹೇಳಿಕೆಯನ್ನು ತಳ್ಳಿಹಾಕಿದ KMF

17/02/2026 2:23 PM

ಶೂ ರ್‍ಯಾಕ್ ನಲ್ಲಿ ಕೀ ಇಡುವವರೇ ಹುಷಾರ್ : ಬೆಂಗಳೂರಿನಲ್ಲಿ 55 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಆರೋಪಿ ಅರೆಸ್ಟ್!

17/02/2026 2:22 PM

BREAKING : ನಂದಿನಿ ಹಾಲು ಕುಡಿಯಲು ಶೇ.100% ಸುರಕ್ಷಿತ : ‘ಸುಳ್ಳು’ ಹೇಳಿಕೆಗಳನ್ನು ತಳ್ಳಿಹಾಕಿದ ‘KMF’

17/02/2026 2:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: : ಜಾತಿಗಣತಿ ವರದಿ ಬಗ್ಗೆ ಯಾವುದೇ ನಿರ್ಣಯ ಅಂಗೀಕರಿಸದೆ ಸಚಿವ ಸಂಪುಟ ಸಭೆ ಮುಕ್ತಾಯ…!
KARNATAKA

BREAKING: : ಜಾತಿಗಣತಿ ವರದಿ ಬಗ್ಗೆ ಯಾವುದೇ ನಿರ್ಣಯ ಅಂಗೀಕರಿಸದೆ ಸಚಿವ ಸಂಪುಟ ಸಭೆ ಮುಕ್ತಾಯ…!

By kannadanewsnow0917/04/2025 7:11 PM

ಬೆಂಗಳೂರು: ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಜಾತಿಗಣತಿ ವರದಿ ಸಂಬಂಧ ವಿಶೇಷ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಜಾತಿಗಣತಿ ವರದಿ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಯಾವುದೇ ತೀರ್ಮಾನ ಕೈಗೊಳ್ಳದೇ ಮುಂದಿನ ಸಭೆಯಲ್ಲಿ ಚರ್ಚೆಗೆ ಇರಿಸಿ ಅಂತ್ಯಗೊಂಡಿರೋದಾಗಿ ತಿಳಿದು ಬಂದಿದೆ.

ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ವಿಶೇಷ ಸಚಿವ ಸಂಪುಟ ಸಭೆ ವಿಧಾನಸೌಧದಲ್ಲಿ ನಡೆಯಿತು. ಸಂಪುಟ ಸಭೆಯ ಮುಂದೆ 6 ಪುಟಗಳ ಟಿಪ್ಪಣಿಯನ್ನು ಆಯೋಗದ ಶಿಫಾರಸ್ಸುಗಳನ್ನು ಒಳಗೊಂಡು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೀಡಿತು. ಜಾತಿಗಣತಿ ವರದಿಯಲ್ಲಿರುವ ಶಿಫಾರಸ್ಸುಗಳ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು.

ಈಗಿರುವ ಒಬಿಸಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು. ಒಬಿಸಿ ಮೀಸಲಾತಿ ಪ್ರಮಾಣ ಶೇ.32ರಿಂದ 51ಕ್ಕೆ ಹೆಚ್ಚಿಸಬೇಕು ಅಂತ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯಿಂದ ವಿಶೇಷ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಮಂಡನೆ ಮಾಡಲಾಯಿತು.

ತಮಿಳುನಾಡಿನಲ್ಲಿ ಒಬಿಸಿ ಮೀಸಲಾತಿ ಶೇಕಡಾ 69ರಷ್ಟಿದೆ. ಜಾರ್ಖಂಡ್ ನಲ್ಲಿ ಹಿಂದುಳಿದ ವರ್ಗಕ್ಕೆ ಶೇ.77ರಷ್ಟು ಮೀಸಲಾತಿ ಇದೆ. ಆ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಒಬಿಸಿ ವರ್ಗಕ್ಕೆ ಮೀಸಲಾತಿ ಹೆಚ್ಚಿಸಿ ಅಂತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸ್ತಾವನೆಯನ್ನು ಸಂಪುಟದ ಮುಂದೆ ಇಡಲಾಯಿತು.

ಯಾವ ವರ್ಗಕ್ಕೆ ಎಷ್ಟು ಮೀಸಲಾತಿ ಹೆಚ್ಚಾಗಬೇಕೆಂದು ಕೂಡ ಪ್ರಸ್ತಾಪ ಮಾಡಲಾಗಿದೆ. ಶೇಕಡಾ 32ರಷ್ಟು ಮೀಸಲಾತಿ ಉಳಿಸಿಕೊಳ್ಳುವ ಒಂದು ಶಿಫಾರಸ್ಸು ಮಾಡಲಾಗಿತ್ತು. ಶೇ.51ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ಮತ್ತೊಂದು ಶಿಫಾರಸ್ಸು ಮಾಡಲಾಗಿತ್ತು. 32% ಮೀಸಲಾತಿ ಉಳಿಸಿಕೊಂಡರೇ ಮೀಸಲಾತಿ ಪ್ರಮಾಣ ಅದಲು ಬದಲು ಎನ್ನುವ ಬಗ್ಗೆಯೂ ಮಾಹಿತಿ ನೀಡಲಾಯಿತು.

ಪ್ರವರ್ಗ-1ಎಗೆ ಶೇ.4, ಪ್ರವರ್ಗ-1ಬಿಗೆ ಶೇ.7ರಷ್ಟು, ಪ್ರವರ್ಗ-2ಎ ಮೀಸಲಾತಿಯಲ್ಲಿ ಕಡಿತಗೊಳಿಸಬೇಕು. ಶೇ.15ರಿಂದ ಶೇ.7ಕ್ಕೆ ಕಡಿತ ಮಾಡಬೇಕೆಂಬ ಪ್ರಸ್ತಾವನೆಯನ್ನು ಇಡಲಾಗಿತ್ತು. ಪ್ರವರ್ಗ-2ಬಿ ಮುಸ್ಲೀಂರಿಗೆ ಶೇ.4ರಿಂದ 5ಕ್ಕೆ ಏರಿಕೆ ಮಾಡುವಂತೆಯೂ ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು.

ಪ್ರವರ್ಗ-3ಎಗೆ ಶೇ.4ರಷ್ಟು, 3ಬಿಗೆ ಶೇ.5ರಷ್ಟು ಮೀಸಲಾತಿ ಹಂಚಿಕೆಗೆ ಪ್ರಸ್ತಾವನೆ ಮಾಡಲಾಗಿತ್ತು. ಪ್ರವರ್ಗ-1ಎ, ಬಿ ಸೇರಿ ಎಲ್ಲಾ ಪ್ರವರ್ಗಗಳಿಗೆ ಕೆನೆಪದರ ನೀತಿ ಅಳವಡಿಕೆ ಮಾಡಬೇಕು. ಶಿಫಾರಸ್ಸಿನಂತೆ ಶೇ.51 ಮೀಸಲಾತಿ ಅಳವಡಿಸಿದ್ರೇ ಒಬಿಸಿಗೆ ಹೆಚ್ಚು ಮೀಸಲಾತಿ ಲಭ್ಯವಾಗಲಿದೆ ಎಂದಿತ್ತು.

ಕೆಲ ಸಚಿವರು ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿ ಏರು ಧ್ವನಿಯಲ್ಲೇ ಮಾತನಾಡಿದ್ದರಿಂದ ಸಚಿವರಿಂದ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸೋದಕ್ಕೂ ಸಿಎಂ ಸಿದ್ಧರಾಮಯ್ಯ ಮುಂದಾದರು. ಅಂತಿಮವಾಗಿ ಕ್ಯಾಬಿನೆಟ್ಟಿನಲ್ಲಿ ಜಾತಿಗಣತಿ ವಿಷಯ ಮುಂದೂಡಿಕೆ ಮಾಡಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗಲಿದೆ ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಜೆಇಇ ಮೇನ್ 2025 ಸೆಷನ್ 2 ಅಂತಿಮ ಕೀ ಉತ್ತರಗಳನ್ನು NTA ಬಿಡುಗಡೆ | JEE Main 2025

JJM, ಸ್ವಚ್ಛ ಭಾರತ್ ಮಿಷನ್ ಅಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಹಿಸುದ್ದಿ

Share. Facebook Twitter LinkedIn WhatsApp Email

Related Posts

ನಂದಿನಿ ಹಾಲು ಕುಡಿಯುವವರಿಗೆ ಗುಡ್ ನ್ಯೂಸ್: ಶೇ.100% ಸುರಕ್ಷಿತ, ಸುಳ್ಳು ಹೇಳಿಕೆಯನ್ನು ತಳ್ಳಿಹಾಕಿದ KMF

17/02/2026 2:23 PM1 Min Read

ಶೂ ರ್‍ಯಾಕ್ ನಲ್ಲಿ ಕೀ ಇಡುವವರೇ ಹುಷಾರ್ : ಬೆಂಗಳೂರಿನಲ್ಲಿ 55 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಆರೋಪಿ ಅರೆಸ್ಟ್!

17/02/2026 2:22 PM1 Min Read

BREAKING : ನಂದಿನಿ ಹಾಲು ಕುಡಿಯಲು ಶೇ.100% ಸುರಕ್ಷಿತ : ‘ಸುಳ್ಳು’ ಹೇಳಿಕೆಗಳನ್ನು ತಳ್ಳಿಹಾಕಿದ ‘KMF’

17/02/2026 2:15 PM1 Min Read
Recent News

ನಂದಿನಿ ಹಾಲು ಕುಡಿಯುವವರಿಗೆ ಗುಡ್ ನ್ಯೂಸ್: ಶೇ.100% ಸುರಕ್ಷಿತ, ಸುಳ್ಳು ಹೇಳಿಕೆಯನ್ನು ತಳ್ಳಿಹಾಕಿದ KMF

17/02/2026 2:23 PM

ಶೂ ರ್‍ಯಾಕ್ ನಲ್ಲಿ ಕೀ ಇಡುವವರೇ ಹುಷಾರ್ : ಬೆಂಗಳೂರಿನಲ್ಲಿ 55 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಆರೋಪಿ ಅರೆಸ್ಟ್!

17/02/2026 2:22 PM

BREAKING : ನಂದಿನಿ ಹಾಲು ಕುಡಿಯಲು ಶೇ.100% ಸುರಕ್ಷಿತ : ‘ಸುಳ್ಳು’ ಹೇಳಿಕೆಗಳನ್ನು ತಳ್ಳಿಹಾಕಿದ ‘KMF’

17/02/2026 2:15 PM

BIG NEWS : ಹಾಸನದಲ್ಲಿ ಭೀಕರ ಅಪಘಾತ : ಸ್ಕೂಟಿ-ಬೈಕ್ ಮುಖಾಮುಖಿ ಡಿಕ್ಕಿಯಾಗಿ, ಇಬ್ಬರು ಯುವಕರ ಸಾವು!

17/02/2026 2:13 PM
State News
KARNATAKA

ನಂದಿನಿ ಹಾಲು ಕುಡಿಯುವವರಿಗೆ ಗುಡ್ ನ್ಯೂಸ್: ಶೇ.100% ಸುರಕ್ಷಿತ, ಸುಳ್ಳು ಹೇಳಿಕೆಯನ್ನು ತಳ್ಳಿಹಾಕಿದ KMF

By kannadanewsnow0917/02/2026 2:23 PM KARNATAKA 1 Min Read

ಬೆಂಗಳೂರು: ನಂದಿನಿ ಉತ್ಪನ್ನಗಳನ್ನು ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರದ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪಾಲಿಸಿ ತಯಾರಿಸಲಾಗುತ್ತಿದೆ. ನಂದಿನಿ…

ಶೂ ರ್‍ಯಾಕ್ ನಲ್ಲಿ ಕೀ ಇಡುವವರೇ ಹುಷಾರ್ : ಬೆಂಗಳೂರಿನಲ್ಲಿ 55 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಆರೋಪಿ ಅರೆಸ್ಟ್!

17/02/2026 2:22 PM

BREAKING : ನಂದಿನಿ ಹಾಲು ಕುಡಿಯಲು ಶೇ.100% ಸುರಕ್ಷಿತ : ‘ಸುಳ್ಳು’ ಹೇಳಿಕೆಗಳನ್ನು ತಳ್ಳಿಹಾಕಿದ ‘KMF’

17/02/2026 2:15 PM

BIG NEWS : ಹಾಸನದಲ್ಲಿ ಭೀಕರ ಅಪಘಾತ : ಸ್ಕೂಟಿ-ಬೈಕ್ ಮುಖಾಮುಖಿ ಡಿಕ್ಕಿಯಾಗಿ, ಇಬ್ಬರು ಯುವಕರ ಸಾವು!

17/02/2026 2:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.