ಬೆಂಗಳೂರು: ಕೇಂದ್ರ ಸರ್ಕಾರದ ಮೂರು ಪ್ರಮುಖ ತೀರ್ಮಾನಗಳನ್ನು ವಿರೋಧಿಸುವಂತ ನಿರ್ಣಯಕ್ಕೆ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ತೀರ್ಮಾನಗಳನ್ನು ವಿರೋಧಿಸುವ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರದ ಮೂರು ಪ್ರಮುಖ ತೀರ್ಮಾನಗಳನ್ನು ವಿರೋಧಿಸುವಂತ ನಿರ್ಣಯಕ್ಕೆ ಅನುಮೋದನೆಯನ್ನು ನೀಡಲಾಗಿದೆ.
ಅವುಗಳೆಂದ್ರೇ 1. ಕೇಂದ್ರ ಸರ್ಕಾರದ ನೀಟ್ ಪರೀಕ್ಷೆಯನ್ನು ವಿರೋಧಿಸುವ ನಿರ್ಣಯವಾದ್ರೇ, 2. ವಿಧಾನಸಭೆ ಮತ್ತು ಲೋಕಸಭೆಯ ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡುವಂತದ್ದನ್ನು ವಿರೋಧಿಸುವಂತ ನಿರ್ಣಯವಾಗಿದೆ. 3. ಒನ್ ನೇಷನ್ ಒನ್ ಎಲೆಕ್ಷನ್ ತೀರ್ಮಾನವನ್ನು ರಾಜ್ಯ ಸರ್ಕಾರ ವಿರೋಧಿಸುವಂತ ನಿರ್ಣಯವನ್ನು ಇಂದಿನ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಇಂದಿನ ರಾಜ್ಯ ಸಂಪುಟ ಸಭೆಯ ತೀರ್ಮಾನಗಳನ್ನು ವಿಧಾನಸಭೆಯಲ್ಲಿ ಸರ್ಕಾರ ಮಂಡಿಸಲಿದೆ. ಉಭಯ ಸದನಗಳಲ್ಲಿ ಇಂತಹ ನಿರ್ಣಯ ನಿರ್ಧಾರಕ್ಕೆ ಅನುಮೋದನೆ ದೊರೆಯುತ್ತಾ ಅಂತ ಕಾದು ನೋಡಬೇಕಿದೆ.
BREAKING: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ‘ಬೆಂಗಳೂರು ಮಹಾನಗರ ವಿಭಜಿಸುವ ವಿಧೇಯಕ’ಕ್ಕೆ ಅನುಮೋದನೆ
‘ಭಾರತೀಯ ಕಾರ್ಪೊರೇಟ್ ವಲಯ’ದ ಲಾಭ ಹೆಚ್ಚುತ್ತಿದೆ, ನೇಮಕಾತಿ ಮತ್ತು ಸಂಬಳಗಳು ಅಷ್ಟು ಉತ್ತಮವಾಗಿಲ್ಲ : ಕೇಂದ್ರ ಸರ್ಕಾರ