Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮೆಟ್ರೋದಲ್ಲಿ ಪ್ರಯಾಣಿಸುವ ಹೆಣ್ಮಕ್ಕಳೇ ಹುಷಾರ್ : ಮಹಿಳೆಯರ ಆಕ್ಷೇಪಾರ್ಹ ವಿಡಿಯೋ ತೆಗೆದು ಅಪ್ಲೋಡ್!

21/05/2025 5:31 PM

BREAKING : ತುಮಕೂರಲ್ಲಿ ಘೋರ ದುರಂತ : ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು!

21/05/2025 5:20 PM

BREAKING: ತುಮಕೂರಲ್ಲಿ ಧಾರುಣ ಘಟನೆ: ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು

21/05/2025 5:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘ನೂತನ ಪ್ರವಾಸೋದ್ಯಮ ನೀತಿ-2024’ಕ್ಕೆ ‘ರಾಜ್ಯ ಸಚಿವ ಸಂಪುಟ’ ಅನುಮೋದನೆ: ಏನಿದು.? ಇಲ್ಲಿದೆ ಪುಲ್ ಡೀಟೆಲ್ಸ್
KARNATAKA

BREAKING: ‘ನೂತನ ಪ್ರವಾಸೋದ್ಯಮ ನೀತಿ-2024’ಕ್ಕೆ ‘ರಾಜ್ಯ ಸಚಿವ ಸಂಪುಟ’ ಅನುಮೋದನೆ: ಏನಿದು.? ಇಲ್ಲಿದೆ ಪುಲ್ ಡೀಟೆಲ್ಸ್

By kannadanewsnow0928/10/2024 4:00 PM

ಬೆಂಗಳೂರು: ಇಂದು ಕರ್ನಾಟಕ ನೂತನ ಪ್ರವಾಸೋದ್ಯಮ ನೀತಿ-2024ಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ಬರಲಿದೆ. ಹಾಗಾದ್ರೇ ಏನಿದು ನೂತನ ಪ್ರವಾಸೋದ್ಯಮ ನೀತಿ-2024.? ಮುಂದೆ ಸಂಪೂರ್ಣ ಮಾಹಿತಿ ಓದಿ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಸಚಿವ ಹೆಚ್.ಕೆ ಪಾಟೀಲ್ ಮಾಹಿತಿ ಹಂಚಿಕೊಂಡಿದ್ದು, ಆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಅನ್ನು ರೂಪಿಸಿದೆ

ಕರ್ನಾಟಕ ಪ್ರವಾಸೋದ್ಯಮದ ಹೊಸ ನೀತಿಯು ಪ್ರವಾಸೋದ್ಯಮ ಕ್ಷೇತ್ರವನ್ನು ಅತ್ಯಂತ ಆದ್ಯತೆಯ ಉತ್ಸಾಹದಾಯಕ ಮತ್ತು ಪುಷ್ಟಿಕರಿಸಿದ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಸಮಾಜದ ಎಲ್ಲಾ ಸ್ಥರಗಳ ಬಡ, ಮಧ್ಯಮ ವರ್ಗದ ಮತ್ತು ಮೇಲ್ಮಧ್ಯಮ ವರ್ಗದ ಹಾಗೂ ಗಣ್ಯ ವರ್ಗದ ಪ್ರವಾಸಿ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಹೊಸ ನೀತಿಯನ್ನು ರಚಿಸಲಾಗಿದೆ.

ಶಾಲಾ-ಬಾಲಕರ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ, ಕೃಷಿ ಪ್ರವಾಸ, ಆರೋಗ್ಯ ಕ್ಷೇತ್ರದ ಹೊಸ ಅನುಭವಗಳ Wellness ಪ್ರವಾಸೋದ್ಯಮ, ಆಧ್ಯಾತ್ಮಿಕ, ಯಾತ್ರಾತೀರ್ಥಗಳ ಪ್ರವಾಸ, ಪಾರಂಪರಿಕ ತಾಣಗಳ ಭೇಟಿ ಅಧ್ಯಯನ ಪ್ರವಾಸ, ಸಾಹಸ ಪ್ರವಾಸೋದ್ಯಮದ ಜೊತೆಗೆ ವಿರಾಮ, ವಿನೋದ, ಜ್ಞಾನಾರ್ಜನೆ, ಮನ:ಶಾಂತಿ, ವಿಶ್ರಾಂತಿ ಮುಂತಾದವುಗಳಿಗಾಗಿ ಸಮಗ್ರವಾದ ನೀತಿಯೊಂದನ್ನು ರೂಪಿಸಲಾಗಿದೆ.

•ಈ ನೀತಿಯು ಕರ್ನಾಟಕದಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತಿದೆ.
•ಉತ್ತಮ ಗುಣಮಟ್ಟದ ಪ್ರವಾಸಿ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸುತ್ತದೆ. ಆಕರ್ಷಣಿಯ ಮತ್ತು ವಿಹಾರದಾಯಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. •ಪ್ರವಾಸೋದ್ಯಮ ವಲಯದಲ್ಲಿ ಸಾರ್ವಜನಿಕ ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸಲಾಗುವುದು. ಅದಕ್ಕಾಗಿ ಕರ್ನಾಟಕವನ್ನು ಆದ್ಯತೆಯ ತಾಣವನ್ನಾಗಿ ಪರಿವರ್ತಿಸಲು ಹೂಡಿಕೆ ಸ್ನೇಹಿ ನೀತಿಗಳೊಂದಿಗೆ ಅನುಕೂಲಕರ ವಾಣಿಜ್ಯ ವಾತಾವರಣವನ್ನು ಉತ್ತೇಜಿಸಲಾಗುವುದು.
•ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಲಾಗುವುದು.
•9 ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳನ್ನು ಗುರುತಿಸಿದೆ.
•ಪ್ರವಾಸೋದ್ಯಮ ಅನುಭವಗಳ ಅಭಿವೃದ್ಧಿಗಾಗಿ 25 ವಿಷಯಾಧಾರಿತ ಕ್ಷೇತ್ರಗಳನ್ನು ಅರ್ಹ ಪ್ರವಾಸೋದ್ಯಮ ಯೋಜನೆಯಡಿ 44 ವಿವಿಧ ರೀತಿಯ ಪ್ರವಾಸೋದ್ಯಮ ಯೋಜನೆಗಳನ್ನು ಗುರುತಿಸಲಾಗಿದೆ.
•ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.
•30000 ಜನರಿಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉದ್ಯೋಗಾವಕಾಶ ಒದಗಿಸಲಾಗುವುದು.
• ರೂ.1500 ಕೋಟಿ ಹೂಡಿಕೆ ಯೋಜಿಸಿದೆ.
• ಆತೀಥೆಯ ಉದ್ಯಮ ಉತ್ತೇಜನಕ್ಕೆ ಶೇ.5 ರಷ್ಟು ಬಂಡವಾಳ ಹೂಡಿಕೆಗೆ ಸಹಾಯಧನವನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು.

• 09 ಪ್ರೋತ್ಸಾಹಕಗಳನ್ನು ಎರಡು ರೀತಿಯ ಸಹಾಯಧನಗಳನ್ನು, 07 ರೀತಿಯ ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ.
ಹೊಸ ನೀತಿಯು
• ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು, ವಿದೇಶಿ ವಿನಿಮಯ ಗಳಿಕೆಯನ್ನು ಹೆಚ್ಚಿಸಲು, ಉದ್ಯೋಗವನ್ನು ಸೃಷ್ಟಿಸಲು, ಕರ್ನಾಟಕದ ಜನರಿಗೆ ಸಾಮಾಜಿಕ-ಆರ್ಥಿಕ ಉನ್ನತಿಯನ್ನು ಸುಗಮಗೊಳಿಸಲು ಮತ್ತು ರಾಜ್ಯದ ಜಿ.ಎಸ್.ಡಿ.ಪಿ ಗೆ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆಯನ್ನು ಹೆಚ್ಚಿಸಲು ಮೂಲಭೂತ ಬಲವಾದ ಅಡಿಪಾಯವನ್ನು ಒದಗಿಸುತ್ತದೆ.

ಈ ನೀತಿಯು 5ನೇ ವರ್ಷದ ಅಂತ್ಯಕ್ಕೆ ಸಾಧಿಸಲು ನಿಗಧಿಪಡಿಸಿರುವ ಗುರಿಗಳು ಈ ಕೆಳಕಂಡಂತಿವೆ:

1. ದೇಶಿಯ ಪ್ರವಾಸಿಗರ ಭೇಟಿಯಲ್ಲಿ ದೇಶದಲ್ಲಿಯೇ ಪ್ರಥಮ 3 ರಾಜ್ಯಗಳಲ್ಲಿ ಒಂದಾಗುವುದು (48 ಕೋಟಿ).
2. ವಿದೇಶಿ ಪ್ರವಾಸಿಗರ ಭೇಟಿಯಲ್ಲಿ ದೇಶದಲ್ಲಿಯೇ ಪ್ರಥಮ 5 ರಾಜ್ಯಗಳಲ್ಲಿ ಒಂದಾಗುವುದು (20 ಲಕ್ಷ).
3. ಕನಿಷ್ಟ 47000 ಜನರಿಗೆ ನೇರ ಉದ್ಯೋಗವನ್ನು ಸೃಜಿಸುವುದು.
4. ಒಂದು ಲಕ್ಷ ಜನರಿಗೆ ಪರೋಕ್ಷ ಮತ್ತು ಪ್ರೇರಿತ ಉದ್ಯೋಗವನ್ನು ಸೃಷ್ಟಿಸುವುದು. 5. ರೂ.7,800/- ಕೋಟಿ ಹೂಡಿಕೆಯನ್ನು ಆಕರ್ಷಿಸುವುದು.
6. ರಾಜ್ಯಾದ್ಯಂತ ಇಲಾಖೆಯ ಮಾಲೀಕತ್ವದಲ್ಲಿರುವ 680 ಎಕರೆ ಭೂಮಿಯನ್ನು ಪ್ರವಾಸೋದ್ಯಮ ಯೋಜನೆಗಳಿಗಾಗಿ Monetize ಮಾಡುವುದು.
7. ಒಂದು ಜಿಲ್ಲೆ ಒಂದು ತಾಣ ಯೋಜನೆಯಡಿ ಪ್ರತಿ ಜಿಲ್ಲೆಗೆ ಒಂದರಂತೆ ಕನಿಷ್ಟ 30 ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದು.
8. ಕರ್ನಾಟಕವನ್ನು ಕನಿಷ್ಠ 50 ಅಂತಾರಾಷ್ಟ್ರೀಯ ಪ್ರವಾಸಿ ಮೇಳಗಳಲ್ಲಿ ಪ್ರಚಾರಪಡಿಸುವುದು.
ಈ ಕೆಳಕಂಡ ವಿಷಯಾಧಾರಿತ ಕ್ಷೇತ್ರಗಳನ್ನು ಗುರುತಿಸಿದೆ:
1 ಸಾಹಸ ಪ್ರವಾಸೋದ್ಯಮ
2 ಕೃಷಿ ಪ್ರವಾಸೋದ್ಯಮ
3 ಕಾರವಾನ್ ಪ್ರವಾಸೋದ್ಯಮ
4 ಕರಾವಳಿ ಪವಾಸೋದ್ಯಮ ಮತ್ತು ಬೀಚ್ ಪ್ರವಾಸೋದ್ಯಮ
5 ಪಾಕಪದ್ಧತಿ(Cuisine) ಪ್ರವಾಸೋದ್ಯಮ
6 ಸಾಂಸ್ಕೃತಿಕ ಪ್ರವಾಸೋದ್ಯಮ
7 ಪಾರಂಪರಿಕ ಪ್ರವಾಸೋದ್ಯಮ
8 ಪರಿಸರ ಪ್ರವಾಸೋದ್ಯಮ (ಪಕೃತಿ ಪ್ರವಾಸೋದ್ಯಮ ಮತ್ತು ವನ್ಯಜೀವಿ ಪ್ರವಾಸೋದ್ಯಮ ಸೇರಿದಂತೆ)
9 ಶೈಕ್ಷಣಿಕ ಪ್ರವಾಸೋದ್ಯಮ

10 ಚಲನಚಿತ್ರ ಪ್ರವಾಸೋದ್ಯಮ
11.ಗಾಲ್ಫ್ ಪ್ರವಾಸೋದ್ಯಮ
12 ಒಳನಾಡಿನ ಜಲ ಪ್ರವಾಸೋದ್ಯಮ 13 ಸಾಹಿತ್ಯ ಪ್ರವಾಸೋದ್ಯಮ
14 ಕಡಲ (Maritime) ಪ್ರವಾಸೋದ್ಯಮ
15 ವೈದ್ಯಕೀಯ ಪ್ರವಾಸೋದ್ಯಮ
16 MICE ಪ್ರವಾಸೋದ್ಯಮ ಮತ್ತು ವ್ಯಾಪಾರ ಪ್ರವಾಸೋದ್ಯಮ 17 ಗಣಿಗಾರಿಕೆ ಪ್ರವಾಸೋದ್ಯಮ
18 ಗ್ರಾಮೀಣ ಪ್ರವಾಸೋದ್ಯಮ
19 ಆಧ್ಯಾತ್ಮಿಕ ಪ್ರವಾಸೋದ್ಯಮ (ಧಾರ್ಮಿಕ ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ದೃಶ್ಯವೀಕ್ಷಣೆಯು ಸೇರಿದಂತೆ)
20 ಕ್ರೀಡಾ ಪ್ರವಾಸೋದ್ಯಮ
21 ಬುಡಕಟ್ಟು ಪ್ರವಾಸೋದ್ಯಮ
22 ವಿವಾಹ (Wedding) ಪ್ರವಾಸೋದ್ಯಮ
23 ವಾರಾಂತ್ಯದ ಪ್ರವಾಸೋದ್ಯಮ
24 ಸ್ವಾಸ್ಥ್ಯ ಪ್ರವಾಸೋದ್ಯಮ
25 ಇತರೆ NICHE ಪ್ರವಾಸೋದ್ಯಮ ಥೀಮ್‌ಗಳು
ಈ ಕೆಳಕಂಡ 44 ಅರ್ಹ ಪ್ರವಾಸೋದ್ಯಮ ಯೋಜನೆಗಳನ್ನು ಗುರುತಿಸಲಾಗಿದೆ:
1) ಸಾಹಸ ಪ್ರವಾಸೋದ್ಯಮ ಯೋಜನೆ
2) ಕೃಷಿ ಪ್ರವಾಸೋದ್ಯಮ ಯೋಜನೆ
3) ಅಪಾರ್ಟ್‌ ಮೆಂಟ್ ಹೋಟೆಲ್ / ಸೇವಾ ಅಪಾರ್ಟ್‌ಮೆಂಟ್
4) ಅಕ್ಟೇರಿಯಂ/ಓಷನೇರಿಯಂ
5) ಬೀಚ್ ಶ್ಯಾಕ್‌ಗಳು
6) ಬೆಡ್ ಮತ್ತು ಉಪಹಾರ
7) ಅಮ್ಯೂಸ್‌ಮೆಂಟ್ ಪಾರ್ಕ್
8) ಕಾರವಾನ್ ಪಾರ್ಕ್
9) ಕಾರವಾನ್ ಪ್ರವಾಸೋದ್ಯಮ ಯೋಜನೆ
10) ಸಮಾವೇಶ ಕೇಂದ್ರ
11) ಕ್ರೂಸ್ ಪ್ರವಾಸೋದ್ಯಮ ಯೋಜನೆ
12) ಸಾಂಸ್ಕೃತಿಕ ಕೇಂದ್ರ
13) ಸಾಂಸ್ಕೃತಿಕ ಗ್ರಾಮ / ಪ್ರವಾಸಿ ಗ್ರಾಮ 14) ಪರಿಸರ ಪ್ರವಾಸೋದ್ಯಮ ಯೋಜನೆ 15) ಫಾರಂ ಸ್ಟೇ
16) ಚಲನಚಿತ್ರ ನಗರ
17) ಗಾಲ್ಫ್ ಕೋರ್ಸ್
18) ಅತಿಥಿಗೃಹ

19) ಪಾರಂಪರಿಕ ಹೋಟೆಲ್
20) ಪಾರಂಪರಿಕ ಪ್ರವಾಸೋದ್ಯಮ ಯೋಜನೆ
21) ಪಾರಂಪರಿಕ ನಡಿಗೆ / Guided Tour 22) ಹೋಂ ಸ್ಟೇ
23) ಹೋಟೆಲ್ ಬಜೆಟ್
24) ಹೋಟೆಲ್-ಪ್ರೀಮಿಯಂ 25) ಹೌಸ್ ಬೋಟ್
26) MICE ಕೇಂದ್ರಗಳು
27) ವಸ್ತು ಸಂಗ್ರಹಾಲಯಗಳು ಮತ್ತು ಗ್ಯಾಲರಿಗಳು
28) ಪ್ರವಾಸಿ ಸ್ನೇಹಿ ಸಂಕೀರ್ಣ (ಪ್ರವಾಸಿ ಸೌಲಭ್ಯ ಕೇಂದ್ರ) 29) ರೋಪ್-ವೇ
30) ಧ್ವನಿ ಮತ್ತು ಬೆಳಕಿನ ಪ್ರದರ್ಶನ
31) ಟೆಂಟೆಡ್ ಸೌಲಭ್ಯಗಳು 32) ಥೀಮ್ ಪಾರ್ಕ್
33) ಟೈಮ್ ಶೇರ್ ರೆಸಾರ್ಟ್
34) ಪ್ರವಾಸಿ ಮಾರ್ಗದರ್ಶಿ
35) ಪ್ರವಾಸೋದ್ಯಮ ಮತ್ತು ಆತಿಥ್ಯ ತರಬೇತಿ ಸಂಸ್ಥೆ
36) ಪ್ರವಾಸೋದ್ಯಮ ಸ್ಮಾರ್ಟ್ ಅಪ್
37) ಪ್ರವಾಸ ಆಯೋಜಕರು
38) ಪ್ರವಾಸಿ ಸಾರಿಗೆ ಆಯೋಜಕರು
39) ಪ್ರವಾಸಿ ವ್ಯಾಖ್ಯಾನ ಕೇಂದ್ರ
40) ಟ್ರಾವೆಲ್ ಏಜೆಂಟ್
41) ಯಾತ್ರಿನಿವಾಸ
42) ಕ್ಷೇಮ ಕೇಂದ್ರ
43) ರಸ್ತೆ ಬದಿ ಸೌಕರ್ಯಗಳು
44) ಯುವ ಪ್ರವಾಸೋದ್ಯಮ ಕ್ಲಬ್

ಪ್ರವಾಸೋದ್ಯಮ ನೀತಿಯ ಧೈಯೋದ್ದೇಶಗಳ ಪ್ರಮುಖ ಅಂಶಗಳು

1. ಕರ್ನಾಟಕ ಜನತೆಗೆ ಕರ್ನಾಟಕ ಪ್ರವಾಸೋದ್ಯಮವನ್ನು ಹೆಮ್ಮೆಯ ಮೂಲವನ್ನಾಗಿಸಲು ವೈವಿಧ್ಯಮಯವಾದ ಶ್ರೇಷ್ಠ ಗುಣಮಟ್ಟದ ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಸೇವೆಗಳ ಮೂಲಕ ವಿಶ್ವದರ್ಜೆಯ ಅನುಭವಗಳನ್ನು ಒದಗಿಸಿ ಜಾಗತಿಕ ಮತ್ತು ಭಾರತೀಯ ನಕಾಶೆಯಲ್ಲಿ ಕರ್ನಾಟಕವನ್ನು ಆಕರ್ಷಣೀಯ ಪ್ರವಾಸಿ ತಾಣವನ್ನಾಗಿ ಉತ್ತೇಜಿಸುವುದು.

2. ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಮೂಲಕ ಮಹಿಳೆಯರು ಮತ್ತು ಯುವಕರನ್ನು ಅಧಿಕಾರಯುಕ್ತಗೊಳಿಸುವ ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಹಿಸುವ ತನ್ಮೂಲಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸೇರ್ಪಡೆ ಕಾರ್ಯಕ್ರಮ ಮಹತ್ವದ ವಾಹಕವನ್ನಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು.

3. ದೃಢವಾದ ಮತ್ತು ಶ್ರೇಷ್ಠ ಗುಣಮಟ್ಟದ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮತ್ತು ಸೇವಾ ಗುಣಮಟ್ಟವನ್ನು ಉನ್ನತಿಕರಿಸುವ ಮೂಲಕ ಎಲ್ಲಾ ಪ್ರವಾಸಿಗರಿಗೂ ಪ್ರವಾಸಿ ತಾಣಗಳ ಭೆಟ್ಟಿಯನ್ನು ಸ್ಮರಣೀಯ ತೃಪ್ತಿದಾಯಕ ಮತ್ತು ಸುರಕ್ಷಿತವೆಂದು ಸುನಿಶ್ಚಿತಗೊಳಿಸಲು ಪ್ರವಾಸಿ ಕೇಂದ್ರಿತ ಪರಿಸರವನ್ನು ನಿರ್ಮಿಸಲಾಗುವುದು.

4. ಪ್ರವಾಸೋದ್ಯಮ ಚಟುವಟಿಕೆಗಳಿಂದ ಜನಸಾಮಾನ್ಯರು ಮತ್ತು ಸ್ಥಳೀಯ ಸಮುದಾಯಗಳಿಗೆ ಪ್ರತಿಫಲ ದೊರೆಯುವುದನ್ನು ಸುನಿಶ್ಚಿತಗೊಳಿಸಲು ಎಲ್ಲರಿಗೂ ಪ್ರವಾಸೋದ್ಯಮ ನಿಲುಕುವಂತೆ ಸಾಮರ್ಥ್ಯ ಸೃಷ್ಟಿಸುವ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗವುದು.

5. ಪ್ರವಾಸೋದ್ಯಮವನ್ನು ಜ್ಞಾನಾರ್ಜನೆಯ ಸಾಧನವಾಗಿ ಕೋಮುಸೌಹಾರ್ದ, ಶಾಂತಿ ಮತ್ತು ಜ್ಞಾನವಿಕಾಸದ ಸಾಧನವಾಗಿ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಅರ್ಥೈಸಲಾಗುವುದು.

6. ಯುನೆಸ್ಕೋ ಮಾನ್ಯತೆ ಪಡೆದ ವಿಶ್ವ ಪಾರಂಪರಿಕ ತಾಣಗಳು ಸೇರಿದಂತೆ ಪಾರಂಪರಿಕ ಆಸ್ತಿಗಳ ಮಾನ್ಯತೆ, ಸಂರಕ್ಷಣೆ, ದತ್ತುಪಡೆಯುವಿಕೆಯನ್ನು ಮುನ್ನಡೆಸುವ ಮೂಲಕ ಈ ಪಾರಂಪರಿಕ ತಾಣಗಳ ಮೌಲ್ಯವೃದ್ಧಿಯನ್ನು ನೈಜ ಅರ್ಥದಲ್ಲಿ ಕೈಗೊಳ್ಳಲಾಗುವುದು.

7. ಜವಾಬ್ದಾರಿಯುತ ಪ್ರವಾಸೋದ್ಯಮದ ಮೂಲಕ ಆಧ್ಯಾತ್ಮಿಕ ಯಾತ್ರಾ ತಾಣಗಳ ಪ್ರವಾಸೋದ್ಯಮ ಉತ್ತೇಜಿಸಿ ಧಾರ್ಮಿಕ ವಿವಿಧತೆಯನ್ನು ಮತ್ತು ಶ್ರದ್ಧಾ ಕೇಂದ್ರಗಳ ಜ್ಞಾನೋದಯ, ಅಂತರಾಳದ ಶಾಂತಿ ಮತ್ತು ಕೋಮು ಸೌಹಾರ್ಧವನ್ನು ಪ್ರಮುಖವಾಗಿ ಪರಿಗಣಿಸಿ ಕರ್ನಾಟಕ ಸಿರಿವಂತ- ಆಧ್ಯಾತ್ಮಿಕ ಪರಂಪರೆಯನ್ನು ಮುನ್ನೆಲೆಗೆ ತರಲಾಗುವುದು.

BREAKING NEWS: ಕರ್ನಾಟಕದಲ್ಲಿ ‘ಒಳ ಮೀಸಲಾತಿ ಜಾರಿ’ಗೆ ‘ರಾಜ್ಯ ಸಚಿವ ಸಂಪುಟ ಸಭೆ’ಯಲ್ಲಿ ಅನುಮೋದನೆ

ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ : ಬೆಳಗಾವಿಯಲ್ಲಿ ಗೋಮಾಳ ಜಾಗಕ್ಕಾಗಿ ದಲಿತರ ಗುಡಿಸಲುಗಳಿಗೆ ಬೆಂಕಿ!

Share. Facebook Twitter LinkedIn WhatsApp Email

Related Posts

SHOCKING : ಮೆಟ್ರೋದಲ್ಲಿ ಪ್ರಯಾಣಿಸುವ ಹೆಣ್ಮಕ್ಕಳೇ ಹುಷಾರ್ : ಮಹಿಳೆಯರ ಆಕ್ಷೇಪಾರ್ಹ ವಿಡಿಯೋ ತೆಗೆದು ಅಪ್ಲೋಡ್!

21/05/2025 5:31 PM1 Min Read

BREAKING : ತುಮಕೂರಲ್ಲಿ ಘೋರ ದುರಂತ : ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು!

21/05/2025 5:20 PM1 Min Read

BREAKING: ತುಮಕೂರಲ್ಲಿ ಧಾರುಣ ಘಟನೆ: ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು

21/05/2025 5:10 PM1 Min Read
Recent News

SHOCKING : ಮೆಟ್ರೋದಲ್ಲಿ ಪ್ರಯಾಣಿಸುವ ಹೆಣ್ಮಕ್ಕಳೇ ಹುಷಾರ್ : ಮಹಿಳೆಯರ ಆಕ್ಷೇಪಾರ್ಹ ವಿಡಿಯೋ ತೆಗೆದು ಅಪ್ಲೋಡ್!

21/05/2025 5:31 PM

BREAKING : ತುಮಕೂರಲ್ಲಿ ಘೋರ ದುರಂತ : ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು!

21/05/2025 5:20 PM

BREAKING: ತುಮಕೂರಲ್ಲಿ ಧಾರುಣ ಘಟನೆ: ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು

21/05/2025 5:10 PM

BIG NEWS : ಉತ್ತರಕನ್ನಡದಲ್ಲಿ ಮುಂದುವರೆದ ಮಳೆ : ಕುಮಟಾದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ

21/05/2025 5:07 PM
State News
KARNATAKA

SHOCKING : ಮೆಟ್ರೋದಲ್ಲಿ ಪ್ರಯಾಣಿಸುವ ಹೆಣ್ಮಕ್ಕಳೇ ಹುಷಾರ್ : ಮಹಿಳೆಯರ ಆಕ್ಷೇಪಾರ್ಹ ವಿಡಿಯೋ ತೆಗೆದು ಅಪ್ಲೋಡ್!

By kannadanewsnow0521/05/2025 5:31 PM KARNATAKA 1 Min Read

ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಯಾವಾಗಲೂ ಒಂದಿಲ್ಲೊಂದು ಕಿರಿಕ್ ಆಗುತ್ತಲೇ ಇರುತ್ತದೆ. ಇದೀಗ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಮಹಿಳೆಯರ ಆಕ್ಷೇಪಾರ್ಹ…

BREAKING : ತುಮಕೂರಲ್ಲಿ ಘೋರ ದುರಂತ : ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು!

21/05/2025 5:20 PM

BREAKING: ತುಮಕೂರಲ್ಲಿ ಧಾರುಣ ಘಟನೆ: ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವು

21/05/2025 5:10 PM

BIG NEWS : ಉತ್ತರಕನ್ನಡದಲ್ಲಿ ಮುಂದುವರೆದ ಮಳೆ : ಕುಮಟಾದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ

21/05/2025 5:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.