ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2024-25ನೇ ಸಾಲಿನ ರಾಜ್ಯ ಬಜೆಟ್ ಮಡಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳ ಮುಂದುವರಿಕೆಗೆ ಸಂಪನ್ಮೂಲ ಕ್ರೂಢೀಕರಣದೊಂದಿಗೆ, ಅಭಿವೃದ್ಧಿಯ ಕನಸಿನ ಅಯವ್ಯಯವನ್ನು ಮಂಡನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರಾಜ್ಯದ ಜನತೆಯ ಚಿತ್ತ, ಇಂದಿನ 2024-25ನೇ ಸಾಲಿನ ಅಯವ್ಯಯದತ್ತ ನೆಟ್ಟಿದೆ.
ಕಳೆದ ವರ್ಷ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 3.25 ಲಕ್ಷ ಕೋಟಿ ಬೃಹತ್ ಗಾತ್ರದ ಬಜೆಟ್ ಮಂಡಿಸಿದ್ದರು. ಇಂದು ಮಂಡಿಸಲಿರುವಂತ ಅಯವ್ಯಯದ ಗಾತ್ರ 3.80 ಲಕ್ಷ ಕೋಟಿ ರೂಪಾಯಿಯ ಬೃಹತ್ ಗಾತ್ರವನ್ನು ದಾಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇಂದು ಬೆಳಿಗ್ಗೆ 10.15ಕ್ಕೆ ವಿಧಾನಸಭೆಯಲ್ಲಿ ತಮ್ಮ ಚೊಚ್ಚಲ 2024-25ನೇ ಸಾಲಿನ ಬಜೆಟ್ ಅನ್ನು ಸಿಎಂ ಸಿದ್ಧರಾಮಯ್ಯ ಸತತ 15ನೇ ಬಾರಿಗೆ ಮಂಡಿಸಲಿದ್ದಾರೆ. ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಘೋಷಿಸಿದ್ದಂತ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದ ನಂತ್ರ, ಅವುಗಳನ್ನು ಮುಂದುವರೆಸೋದಕ್ಕಾಗಿ ಸಂಪನ್ಮೂಲ ಕ್ರೂಢೀಕರಣದತ್ತಲೂ ಬಜೆಟ್ ನಲ್ಲಿ ಗಮನ ಹರಿಸಲಿದ್ದಾರೆ ಎನ್ನಲಾಗುತ್ತಿದೆ.
ಒಂದೆಡೆ ಕೇಂದ್ರದಿಂದ ಅನುದಾನ ತಾರತಮ್ಯ. ತೆರಿಗೆ ಪಾಲಿನ ಕಡಿತ, ರಾಜ್ಯ ತೆರಿಗೆ ಸಂಗ್ರಹ ನಿಗದಿತ ಗುರಿ ಸಾಧನೆಯನ್ನು ತಲುಪದೇ ಇರುವುದು ಸಿಎಂ ಸಿದ್ಧರಾಮಯ್ಯ ರಾಜ್ಯ ಬಜೆಟ್ ಗೆ ಸವಾಲಾಗಿದೆ. ಬರ ಪರಿಸ್ಥಿತಿಯ ಬಗ್ಗೆ, ರಾಜ್ಯದ ಜನರ ಬಗ್ಗೆ ಹಲವು ಸವಾಲುಗಳ ನಡುವೆ ಯಾವ ರೀತಿಯ ಬಜೆಟ್ ನಲ್ಲಿ ಘೋಷಣೆಗಳನ್ನು, ಬಂಪರ್ ಗಿಫ್ಟ್ ಗಳನ್ನು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.