Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ `ಗ್ಯಾಸ್ ಟ್ರಬಲ್’ ಇಳಿಕೆ : ಮೂರೇ ದಿನದಲ್ಲಿ ಸಿಲಿಂಡರ್ ಪೂರೈಕೆ ಶೇ. 20ರಷ್ಟು ಏರಿಕೆ !

16/03/2026 5:50 AM

ಕೆಲಸ ಸಿಕ್ಕಿಲ್ಲ ಎಂದು ಚಿಂತಿಸಬೇಡಿ : 1 ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು4 ಲಕ್ಷ ರೂ.ವರೆಗೆ ಆದಾಯ ಗಳಿಸಿ

16/03/2026 5:42 AM

ಏನಿದು ‘Lazy Girl Jobs’ ಟ್ರೆಂಡ್? ಹೆಚ್ಚು ಸಂಬಳ, ಕಡಿಮೆ ಒತ್ತಡದ ಕೆಲಸಗಳತ್ತ Gen Z ಆಸಕ್ತಿ !

16/03/2026 5:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ‘SSLC’ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್’ಲೈನ್ ನಲ್ಲಿ ನಮೂದು ಮಾಡುವಂತೆ ಪರೀಕ್ಷಾ ಮಂಡಳಿ ಸೂಚನೆ.!
KARNATAKA

ರಾಜ್ಯದ ‘SSLC’ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್’ಲೈನ್ ನಲ್ಲಿ ನಮೂದು ಮಾಡುವಂತೆ ಪರೀಕ್ಷಾ ಮಂಡಳಿ ಸೂಚನೆ.!

By kannadanewsnow5706/02/2025 6:27 PM

ಬೆಂಗಳೂರು : ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್ಲೈನ್ನಲ್ಲಿ ನಮೂದು ಮಾಡುವಂತೆ ಪರೀಕ್ಷಾ ಮಂಡಳಿ ಮಹತ್ವದ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯಲ್ಲಿ ಏನಿದೆ?
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ವತಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯಸ್ಥರಿಗೆ ತಮ್ಮ ಶಾಲೆಯ 2025 ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಣಿಯಾಗಿರುವ ಎಲ್ಲಾ ಶಾಲಾ ವಿದ್ಯಾರ್ಥಿಗಳ (CCERF) ಆಂತರಿಕ ಅಂಕಗಳನ್ನು ಆನ್ಲೈನ್ನಲ್ಲಿ ನಮೂದು ಮಾಡಲು ದಿನಾಂಕ: 05-02-2025 ರಿಂದ ಅವಕಾಶ ಕಲ್ಪಿಸಲಾಗಿದೆ.

ಮಂಡಲಿಯ ಜಾಲತಾಣದಲ್ಲಿ ಲಭ್ಯವಿರುವ ತಂತ್ರಾಂಶವನ್ನು ಬಳಸಿ ಎಲ್ಲಾ ಶಾಲೆಗಳ ಮುಖ್ಯಸ್ಥರು ಆಯಾ ಶಾಲೆಯಲ್ಲಿ ನೋಂದಣಿಯಾಗಿರುವ ಎಲ್ಲಾ, ಶಾಲಾ ವಿದ್ಯಾರ್ಥಿಗಳ (CCERF) ಅಂತರಿಕ ಅಂಕಗಳನ್ನು ಕಡ್ಡಾಯವಾಗಿ ಆನ್ಲೈನ್ನಲ್ಲಿ ನಮೂದು ಮಾಡಲು ಸೂಚಿಸಿದೆ.

1. ಮಂಡಲಿಯ ಜಾಲತಾಣ https://kseab.karnataka.gov.in/ನ ಶಾಲಾ ಲಾಗಿನ್ನಲ್ಲಿ ತಂತ್ರಾಂಶ ಲಭ್ಯವಿದೆ.

2. ಲಾಗಿನ್ ಆದ ನಂತರ ಮೊದಲು Internal Marks Entry – 2025 ಮೇಲೆ ಕ್ಲಿಕ್ ಮಾಡಬೇಕು. ತೆರೆಯಲಾಗುವ ವೆಬ್ಪೇಜ್ನಲ್ಲಿ ವಿದ್ಯಾರ್ಥಿಯ ಎಸ್.ಎ.ಟಿ.ಎಸ್ (SATS NUMBER) ಸಂಖ್ಯೆಯನ್ನು ನಮೂದಿಸಿ Enter ಬಟನ್ನ್ನು ಒತ್ತುವುದು. ಆಗ ಉಲ್ಲೇಖಿತ ಮಾರ್ಗಸೂಚಿಯಲ್ಲಿ ವಿವರಿಸಿರುವಂತೆ, ಪ್ರತಿ ವಿದ್ಯಾರ್ಥಿಯು ಕನಿಷ್ಠ ಶೇಕಡಾ 75 ರಷ್ಟು ಹಾಜರಾತಿಯನ್ನು ಹೊಂದಿರುವ ಬಗ್ಗೆ ‘Yes’ ಎಂದು Select ಮಾಡಲ್ಪಟ್ಟ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ‘No’ ಎಂದು Select ಮಾಡಲ್ಪಟ್ಟ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನಮೂದಿಸಲು ಅವಕಾಶ ನೀಡಿರುವುದಿಲ್ಲ. ಅಂದರೆ ಆ ವಿದ್ಯಾರ್ಥಿಯು 2025ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಪರೀಕ್ಷೆ-2 ಮತ್ತು ಪರೀಕ್ಷೆ – 3ನ್ನು ಬರೆಯಲು ಅರ್ಹನಿರುವುದಿಲ್ಲ. 2025-26ನೇ ಸಾಲಿನಲ್ಲಿ ಶಾಲೆಗೆ ಮರು ದಾಖಲಾಗಿ ಪರೀಕ್ಷೆ ತೆಗೆದುಕೊಳ್ಳುವುದು ಎಂದರ್ಥ. (ಮಾರ್ಚ್ ಮಾಹೆಯಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. 2025 ಪರೀಕ್ಷೆ-1 ರ ಹಿಂದಿನ ದಿನಕ್ಕೆ ಅನ್ವಯವಾಗುವಂತೆ ಶೇ.75 ರಷ್ಟು ಹಾಜರಾತಿಯನ್ನು ಲೆಕ್ಕಾಚಾರ ಮಾಡುವುದು)

3. ನಿಗದಿತ ಹಾಜರಾತಿ ‘No’ಎಂದು select ಮಾಡಲ್ಪಟ್ಟ ವಿದ್ಯಾರ್ಥಿಗಳ ಮಾಹಿತಿಯನ್ನು ಸಹ Save ಮಾಡಿ Freeze ಮಾಡುವುದು ಕಡ್ಡಾಯವಾಗಿರುತ್ತದೆ. ಈ ವಿದ್ಯಾರ್ಥಿಗಳ ನೋಂದಣಿಯನ್ನು ರದ್ದುಪಡಿಸಲಾಗುವುದು ಮತ್ತು ಅಂತಿಮ ಪ್ರವೇಶ ಪತ್ರವನ್ನು ನೀಡಲಾಗುವುದಿಲ್ಲ.

4. ನಿಗದಿತ ಹಾಜರಾತಿ ‘Yes’ ಎಂದು Select ಮಾಡಲ್ಪಟ್ಟ ವಿದ್ಯಾರ್ಥಿಯ ಎಲ್ಲಾ ಮಾಹಿತಿಗಳು Display ಆಗುತ್ತವೆ. ಸದರಿ ಎಲ್ಲಾ ಮಾಹಿತಿಗಳು ಆಂತರಿಕ ಅಂಕಗಳನ್ನು ನಮೂದು ಮಾಡುತ್ತಿರುವ ನಿರ್ದಿಷ್ಟ ವಿದ್ಯಾರ್ಥಿಯದೇ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಆಂತರಿಕ ಅಂಕಗಳನ್ನು ನಮೂದಿಸುವುದು.

5. ವಿದ್ಯಾರ್ಥಿಯು ತೆಗೆದುಕೊಂಡಿರುವ ಭಾಷೆ ಮತ್ತು ವಿಷಯಗಳು ಹಾಗೂ ತಂತ್ರಾಂಶದಲ್ಲಿ Display ಆಗಿರುವ ಭಾಷೆ ಮತ್ತು ವಿಷಯಗಳು ಸಹ ಹೊಂದಾಣಿಕೆಯಾಗುತ್ತಿವೆ ಎಂಬುದನ್ನು ಖಚಿತಪಡಿಸಿಕೊಂಡು, ಆಯಾ ಭಾಷೆ ಮತ್ತು ವಿಷಯಗಳಿಗೆ ಅನುಗುಣವಾಗಿ ಆಂತರಿಕ ಅಂಕಗಳನ್ನು ನಮೂದಿಸುವುದು ಎಂದು ಸೂಚಿಸಿದೆ.

SSLC students in the state have been asked to enter their internal marks online.
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `ಗ್ಯಾಸ್ ಟ್ರಬಲ್’ ಇಳಿಕೆ : ಮೂರೇ ದಿನದಲ್ಲಿ ಸಿಲಿಂಡರ್ ಪೂರೈಕೆ ಶೇ. 20ರಷ್ಟು ಏರಿಕೆ !

16/03/2026 5:50 AM1 Min Read

ಕೆಲಸ ಸಿಕ್ಕಿಲ್ಲ ಎಂದು ಚಿಂತಿಸಬೇಡಿ : 1 ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು4 ಲಕ್ಷ ರೂ.ವರೆಗೆ ಆದಾಯ ಗಳಿಸಿ

16/03/2026 5:42 AM2 Mins Read

ರಾಜ್ಯಾದ್ಯಂತ ಮಾ.18 ರಿಂದ ‘SSLC’ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

16/03/2026 5:30 AM2 Mins Read
Recent News

ರಾಜ್ಯದಲ್ಲಿ `ಗ್ಯಾಸ್ ಟ್ರಬಲ್’ ಇಳಿಕೆ : ಮೂರೇ ದಿನದಲ್ಲಿ ಸಿಲಿಂಡರ್ ಪೂರೈಕೆ ಶೇ. 20ರಷ್ಟು ಏರಿಕೆ !

16/03/2026 5:50 AM

ಕೆಲಸ ಸಿಕ್ಕಿಲ್ಲ ಎಂದು ಚಿಂತಿಸಬೇಡಿ : 1 ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು4 ಲಕ್ಷ ರೂ.ವರೆಗೆ ಆದಾಯ ಗಳಿಸಿ

16/03/2026 5:42 AM

ಏನಿದು ‘Lazy Girl Jobs’ ಟ್ರೆಂಡ್? ಹೆಚ್ಚು ಸಂಬಳ, ಕಡಿಮೆ ಒತ್ತಡದ ಕೆಲಸಗಳತ್ತ Gen Z ಆಸಕ್ತಿ !

16/03/2026 5:33 AM

ರಾಜ್ಯಾದ್ಯಂತ ಮಾ.18 ರಿಂದ ‘SSLC’ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

16/03/2026 5:30 AM
State News
KARNATAKA

ರಾಜ್ಯದಲ್ಲಿ `ಗ್ಯಾಸ್ ಟ್ರಬಲ್’ ಇಳಿಕೆ : ಮೂರೇ ದಿನದಲ್ಲಿ ಸಿಲಿಂಡರ್ ಪೂರೈಕೆ ಶೇ. 20ರಷ್ಟು ಏರಿಕೆ !

By kannadanewsnow5716/03/2026 5:50 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಎಲ್‌ಪಿಜಿ ಸಿಲಿಂಡರ್ ಅಭಾವದ ಸಮಸ್ಯೆ ಸದ್ಯ ತಿಳಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಕೇಂದ್ರ…

ಕೆಲಸ ಸಿಕ್ಕಿಲ್ಲ ಎಂದು ಚಿಂತಿಸಬೇಡಿ : 1 ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು4 ಲಕ್ಷ ರೂ.ವರೆಗೆ ಆದಾಯ ಗಳಿಸಿ

16/03/2026 5:42 AM

ರಾಜ್ಯಾದ್ಯಂತ ಮಾ.18 ರಿಂದ ‘SSLC’ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

16/03/2026 5:30 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಒಂದೇ ಸೂರಿನಡಿ ಸಿಗಲಿವೆ ಜಮೀನಿನ ಈ ಎಲ್ಲಾ ದಾಖಲೆಗಳು !

16/03/2026 5:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.