ಮೈಸೂರು: ಎಸ್‌ಎಸ್ಎಲ್‌ಸಿ-ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಯನ್ನು ತರುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಅವರು ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ಒಮ್ಮೆ ಫೇಲಾದ ನಂತರ ಸಪ್ಲಿಮೆಂಟರಿ ಪರೀಕ್ಷೆ ಇರಲಿದೆ. ಆದರೆ, ಮಾರ್ಕ್ಸ್ ಕಾರ್ಡ್ ನೀಡುವಾಗ ಸಪ್ಲಿಮೆಂಟರಿ ಎಂದು ನಮೂದಿಸಲ್ಲ ಅಂತ ತಿಳಿಸಿದರು.
ಚಕ್ರವರ್ತಿ ಸೂಲಿಬೆಲೆ ತಲೆಹರಟೆ. ಅವನಿಗೆ ಮಾನ-ಮರ್ಯಾದೆ ಇಲ್ಲ ಅಂತ ಅವರು ಕಿಡಿಕಾರಿದರು, ಇನ್ನೂ . ಕಾಮನ್ ಸೆನ್ಸ್ ಇಲ್ಲದೇ ಏನೇನೋ ಹೇಳುತ್ತಿದ್ದಾರೆ. ಯಾವುದೇ ವಿಚಾರವನ್ನು ಭಾವನಾತ್ಮಕ ಮಾಡಿದಷ್ಟೂ ನಿಮ್ಮನ್ನು ಜನ ದೂರ ತಳ್ಳುತ್ತಾರೆ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪಿಯುಸಿ ಪರೀಕ್ಷೆಗಳು ಇರುವ ಕಾರಣಕ್ಕೆ ಸ್ಥಳ ಸರಿದೂಗಿಸಲು ಶುಕ್ರವಾರದ ಪರೀಕ್ಷೆಯ ಸಮಯ ಬದಲಾಗಿದೆ ಅಂತ ಅವರು ಹೇಳಿದರು. ಇದೇ ವೇಳೆ ಅವರು ಇನ್ನು ಶಾಲಾ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ, ಚಿಕ್ಕಿ ನೀಡಲಾಗುವುದು. ವಾರದಲ್ಲಿ ಆರು ದಿನ ಕ್ಷೀರ ಭಾಗ್ಯದ ಹಾಲು ನೀಡಲು ಕ್ರಮ ಕೈಗೊಳ್ಳಲಾಗಿದ್ದು, 3 ದಿನ ಹಾಲಿಗೆ ರಾಗಿ ಮಾಲ್ಟ್ ಮಿಕ್ಸ್ ಮಾಡಿ ಕೊಡಲಾಗುತ್ತದೆ ಅಂತ ಹೇಳಿದರು.