ಶಿವಮೊಗ್ಗ : ಶಿವಮೊಗ್ಗ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಂಘವು 2024ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ., (ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ), ದ್ವಿತೀಯ ಪಿಯುಸಿ (ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ) ಪರೀಕ್ಷೆಯಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದ ಸಹಕಾರಿಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ವಿದ್ಯಾರ್ಥಿಗಳು ಮೇ 31 ರೊಳಗಾಗಿ bit.ly/empsouhardashimoga ಮೂಲಕ ಅರ್ಜಿ ಸಲ್ಲಿಸುವಂತೆ ಸಂಘದ ಗೌರವ ಕಾರ್ಯದರ್ಶಿ ಎನ್.ಎಂ.ರಂಗನಾಥ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸುನಿಲ್-7259618767, ಎನ್.ಎಂ.ರಂಗನಾಥ-9916278470 ಇವರುಗಳನ್ನು ಸಂಪರ್ಕಿಸುವುದು.
ಅಪ್ರೆಂಟಿಶಿಪ್ ಕ್ಯಾಂಪಸ್ ಮೇಳ
ಭದ್ರಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಟೊಯೋಟಾ ಕಿರ್ಲೊಸ್ಕರ್ ಪ್ರೈ.ಲಿ. ಬಿಡದಿ ಇವರು ಮೇ-17 ಮತ್ತು 18 ರಂದು ವಿವಿಧ ವೃತ್ತಿಗಳಾದ ಫಿಟ್ಟರ್, ಟರ್ನರ್, ಎಲೆಕ್ಟ್ರಿಶಿಯನ್, ಎಂ.ಎಂ.ಎ., ಡಿ.ಎಂ., ಟಿ.ಡಿ.ಎಮ್., ವೆಲ್ಡರ್, ಇ.ಎಂ. ಮತ್ತು ಮೆಶಿನಿಸ್ಟ್ ವೃತ್ತಿಗಳಿಗೆ 18 ರಿಂದ 25 ವರ್ಷದೊಳಗಿನವರಿಗೆ ಅಪ್ರೆಂಟಿಶಿಪ್ ಕ್ಯಾಂಪಸ್ ಮೇಳವನ್ನು ಆಯೋಜಿಸಿದ್ದು, ಮೇಳಕ್ಕೆ ಭಾಗವಹಿಸಲು ಇಚ್ಛಿಸುವವರು ಎಸ್.ಎಸ್.ಎಲ್.ಸಿ/ಐಟಿಐ ಅಂಕಪಟ್ಟಿ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಪ್ರತಿ ಹಾಗೂ ಪಾಸ್‍ಪೋರ್ಟ್ ಸೈಜ್ ಪೋಟೋ ಗಳೊಂದಿಗೆ ಹಾಜರಾಗುವಂತೆ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರಜ್ವಲ್ ಎಲ್ಲಿದ್ದೀಯಪ್ಪಾ?: ‘ಜರ್ಮನಿ ಟು ಬೆಂಗಳೂರಿಗೆ’ ಟಿಕೆಟ್ ಬುಕ್ ಮಾಡಿದ್ರೂ ಬಾರದೇ ‘ಕಣ್ಣಾಮುಚ್ಚಾಲೆ ಆಟ’
BREAKING : ಗುಂಡು ಹಾರಿಸಿಕೊಂಡು `ಸಚಿನ್ ತೆಂಡೂಲ್ಕರ್’ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ’ ಆತ್ಮಹತ್ಯೆ