ಬೆಂಗಳೂರು: ಈ ವರ್ಷದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಮೂರು ಬಾರಿ ನಡೆಯಲಿದೆ. ಇದಕ್ಕೂ ಮುಂಚಿತವಾಗಿ ಫೆಬ್ರವರಿ.26ರಿಂದ ಪೂರ್ವಭಾವಿ ಪರೀಕ್ಷೆ ಆರಂಭಗೊಳ್ಳಲಿದೆ. ವಿದ್ಯಾರ್ಥಿಗಳು ವೇಳಾಪಟ್ಟಿ ಸೇರಿದಂತೆ ಇತರೆ ಮಾಹಿತಿಗಾಗಿ ಕ್ಯೂ ಆರ್ ಡೋ ಸ್ಕ್ಯಾನ್ ಮಾಡಿ ನೋಡುವಂತೆ ಶಿಕ್ಷಣ ಇಲಾಖೆ ತಿಳಿಸಿದೆ.
ಈ ಸಂಬಂಧ ಮಾಹಿತಿ ಹಂಚಿಕೊಂಡಿರುವಂತ ಶಿಕ್ಷಣ ಇಲಾಖೆಯು, ಎಸ್ ಎಸ್ ಎಲ್ ಸಿ ಪೂರ್ವಭಾವಿ ಪರೀಕ್ಷೆಯು ಫೆಬ್ರವರಿ 26ರಿಂದ ಮಾರ್ಚ್ 2ರವರೆಗೆ ನಡೆಯಲಿದೆ ಎಂದು ತಿಳಿಸಿದೆ.
ಬೆಳಗಿನ ಅವಧಿಯಲ್ಲಿ ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಸಮಾಜ ವಿಜ್ಞಾನ ಹಾಗೂ ಗಣಿತ ವಿಷಯದ ಪರೀಕ್ಷೆ ನಡೆಯಲಿದೆ ಎಂದು ಹೇಳಿದೆ.
ಇನ್ನೂ ಮಧ್ಯಾಹ್ನದ ಅವಧಿಯಲ್ಲಿ ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ. ಪೂರ್ವಭಾವಿ ಪರೀಕ್ಷೆಯ ವೇಳಾಪಟ್ಟಿ ಸೇರಿದಂತೆ ಮತ್ತಿತರ ವಿವರಗಳಿಗಾಗಿ ಈ ಕೆಳಕಂಡ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪಡೆಯುವಂತೆ ಸೂಚಿಸಿದೆ.
ಫೆಬ್ರವರಿ 26ರಿಂದ ಮಾರ್ಚ್ 2ರ ವರೆಗೆ ಎಸ್‌ಎಸ್‌ಎಲ್ಸಿ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ವೇಳಾಪಟ್ಟಿ ಮತ್ತಿತರ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.#SSLCExam #exams @CMofKarnataka @siddaramaiah @DKShivakumar @Madhu_Bangarapp pic.twitter.com/KDqdruaQRA
— DIPR Karnataka (@KarnatakaVarthe) February 7, 2024
BREAKING : ಶರದ್ ಪವಾರ್ ಪಕ್ಷಕ್ಕೆ ಹೊಸ ಹೆಸರು ಘೋಷಿಸಿದ ಚುನಾವಣಾ ಆಯೋಗ
BREAKING: ‘ಉತ್ತರಾಖಂಡ ವಿಧಾನಸಭೆ’ಯಲ್ಲಿ ‘ಏಕರೂಪ ನಾಗರಿಕ ಸಂಹಿತೆ ಮಸೂದೆ'(UCC) ಅಂಗೀಕಾರ | UCC Bill