ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಿದ್ದಂತ ಸಚಿವ ಸಂಪುಟ ಸಭೆಯಲ್ಲಿ ಎಸ್ ಎಸ್ ಎಲ್ ಸಿ ( SSLC ) ಹಾಗೂ ಪಿಯು ಪರೀಕ್ಷಾ ಮಂಡಳಿಗಳ ವಿಲೀನಕ್ಕೆ ಅನುಮೋದನೆ ನೀಡಲಾಗಿತ್ತು. ಈ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರದಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ( Karnataka Secondary Education Examination Board – KSEEB ) ಹೆಸರು ಬದಲಾವಣೆ ಮಾಡಿದೆ. ಈಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಂಬುದಾಗಿ ಮರುನಾಮಕರಣಗೊಳಿಸಿ, ರಾಜ್ಯ ಸರ್ಕಾರ ( Karnataka Government ) ಗೆಜೆಟ್ ಅಧಿಸೂಚನೆ ( Gazette Notification ) ಹೊರಡಿಸಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರದಿಂದ ವಿಶೇಷ ರಾಜ್ಯಪತ್ರಿಕೆ ಹೊರಡಿಸಲಾಗಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ ) ಅಧಿನಿಯಮಕ್ಕೆ ತಿದ್ದುಪಡಿಯನ್ನು ತರಲಾಗಿದೆ. ಅದರನುಸಾರ ಇನ್ಮುಂದೆ ಮೂಲ ಅಧಿನಿಯಮದಲ್ಲಿದ್ದಂತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಂಬ ಪದಗಳ ಬದಲಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಂಬ ಪದಗಳನ್ನು ಪ್ರತಿಯೋಜಿಸುವಂತೆ ತಿಳಿಸಲಾಗಿದೆ.

ಕರೋನ ಬೆನ್ನಲೇ ‘ಕರ್ನಾಟಕ’ ಸೇರಿದಂತೆ ಭಾರತದಲ್ಲಿ ‘ಡೆಂಗ್ಯೂ ಪ್ರಕರಣ’ಗಳ ಸಂಖ್ಯೆ ಹೆಚ್ಚಳ : ಆತಂಕದಲ್ಲಿ ಜನತೆ | Dengue cases rises in India

ಸಾರ್ವಜನಿಕ ಶಿಕ್ಷಣದ ಕಮೀಷನರು ಮಂಡಳಿಯ ಪದನಿಮಿತ್ತ ಅಧ್ಯಕ್ಷರಾಗಿರತಕ್ಕದ್ದು ಎಂಬ ಪದಗಳ ಬದಲಿಗೆ, ಮಂಡಳಿಯ ಅಧ್ಯಕ್ಷರನ್ನು ಸರ್ಕಾರವು ಐಎಎಸ್ ವೃಂದದಿಂದ ನೇಮಕ ಮಾಡತಕ್ಕದ್ದು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಮಂಡಳಿಯ ವಿಶೇಷ ಆಹ್ವಾನಿತರಾಗಿರತಕ್ಕದ್ದು ಎಂದು ಹೇಳಿದೆ.

ಮಂಡಳಿಯು ರಾಜ್ಯ ಸರ್ಕಾವು ನೇಮಕ ಮಾಡುವ ಇಬ್ಬರು ಕಾರ್ಯದರ್ಶಿಗಳನ್ನು ಹೊಂದಿರತಕ್ಕದ್ದು, ಆ ಪೈಕಿ ಒಬ್ಬರು ಜಂಟಿ ನಿರ್ದೇಶಕರ ದರ್ಜೆಗಿಂತ ಕಡಿಮೆಯಲ್ಲದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯಾಗಿರತಕ್ಕದ್ದು, ಮತ್ತೊಬ್ಬರು ಜಂಟಿ ನಿರ್ದೇಶಕರ ದರ್ಜೆಗೆ ಕಡಿಮೆಯಲ್ಲದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಯಾಗಿರಬೇಕು ಎಂದು ಹೇಳಿದೆ.

BIGG NEWS : ಮೀಸಲಾತಿ ವಿಚಾರ : ಬಿಜೆಪಿಯಿಂದ ಬೆಂಗಳೂರಿನಲ್ಲಿ ಅ.8 ರಂದು ಸರ್ವಪಕ್ಷಗಳ ಸಭೆ |ST Reservation

ಹೀಗೆ ಮಂಡಳಿಗಳ ವಿಲೀನವನ್ನು ಹೊಸ ಶಿಕ್ಷಣ ನೀತಿ 2020ರ ಅನುಸಾರವಾಗಿ ಬದಲಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ಎಸ್ ಎಸ್ ಎಲ್ ಸಿ ( SSLC Exam ) ಮತ್ತು ಇತರೆ ಸಾರ್ವಜನಿಕ ಪರೀಕ್ಷೆಗಳ ಜೊತೆಗೆ ಪದವಿ ಪೂರ್ವ ಪರೀಕ್ಷೆಯನ್ನು ನಡೆಸುವುದು ಎಂದು ಹೇಳಿದೆ.

ವರದಿ : ವಸಂತ ಬಿ ಈಶ್ವರಗೆರೆ

Share.
Exit mobile version