ಬೆಂಗಳೂರು: ರಾಜ್ಯಾಧ್ಯಂತ ಭಾಷೆ-1ರ ಪತ್ರಿಕೆಯ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ 8. ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 15,402 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ನಾರ್ಥ್ ವಿಭಾಗದಲ್ಲಿ 45871 ಮಂದಿ, ಬೆಂಗಳೂರು ಸೌಥ್ ವಿಭಾಗದಲ್ಲಿ 58018 ವಿದ್ಯಾರ್ಥಿಗಳು, ರಾಮನಗರದಲ್ಲಿ 12755, ಬೆಂಗಳೂರು ಗ್ರಾಮಾಂತರದಲ್ಲಿ 14046 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 15551, ಕೋಲಾರದಲ್ಲಿ 19471, ಮಧುಗಿರಿಯಲ್ಲಿ 12398, ತುಮಕೂರು 21474, ಮೈಸೂರು 37199, ಉಡುಪಿ 13603, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28338 ಸೇರಿದಂತೆ ರಾಜ್ಯಾಧ್ಯಂತ 8,26,117 ವಿದ್ಯಾರ್ಥಿಗಳು ಇಂದಿನ ಭಾಷಾ ಪರೀಕ್ಷೆಯಲ್ಲಿ ಹಾಜರಾಗಿದ್ದಾರೆ ಎಂದಿದೆ.
ಒಟ್ಟಾರೆಯಾಗಿ 8,41,519 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇವರಲ್ಲಿ 8,26,117 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇಂದಿನ ಪರೀಕ್ಷೆಯಲ್ಲಿ 15,402 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶೇ.98.2ರಷ್ಟು ಹಾಜರಾತಿಯಿದೆ ಎಂದಿದೆ.