ನವದೆಹಲಿ : ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) 968 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇದಕ್ಕಾಗಿ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ಮಾರ್ಚ್ 28 ರಿಂದ ಎಸ್ಎಸ್ಸಿ ಜೂನಿಯರ್ ಎಂಜಿನಿಯರ್ (ಎಸ್ಎಸ್ಸಿ ಜೆಇಇ) ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಪರೀಕ್ಷೆ, 2024 ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿ ನಮೂನೆಯನ್ನು ಭರ್ತಿ ಮಾಡಲು, ಅಭ್ಯರ್ಥಿಗಳು ssc.gov.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
ಅಧಿಸೂಚನೆಗೆ ಅರ್ಜಿ ಸಲ್ಲಿಸಲು ಸಿದ್ಧರಿರುವ ಅಭ್ಯರ್ಥಿಗಳು ಎಸ್ಎಸ್ಸಿಯ ಅಧಿಕೃತ ವೆಬ್ಸೈಟ್ನಲ್ಲಿ ನೇಮಕಾತಿ ವಿಭಾಗದಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯನ್ನು ಪರಿಶೀಲಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಏಪ್ರಿಲ್ 19, 2024
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ದಿನಾಂಕ (ಪೇಪರ್ -1): ಅಕ್ಟೋಬರ್ 2023
ಅರ್ಜಿ ಶುಲ್ಕ:
ಸಾಮಾನ್ಯ / ಇಡಬ್ಲ್ಯೂಎಸ್ (ಆರ್ಥಿಕವಾಗಿ ದುರ್ಬಲ ವಿಭಾಗ) / ಒಬಿಸಿ (ಇತರ ಹಿಂದುಳಿದ ವರ್ಗ): 100 ರೂ.
ಮಹಿಳಾ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ), ಬೆಂಚ್ಮಾರ್ಕ್ ಅಂಗವಿಕಲರು (ಪಿಡಬ್ಲ್ಯೂಬಿಡಿ) ಮತ್ತು ಮಾಜಿ ಸೈನಿಕರಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ವಯಸ್ಸಿನ ಮಿತಿ:
ಸಿಪಿಡಬ್ಲ್ಯುಡಿಗೆ ಗರಿಷ್ಠ ವಯಸ್ಸಿನ ಮಿತಿ: 32 ವರ್ಷಗಳು
ಇತರರಿಗೆ ಗರಿಷ್ಠ ವಯೋಮಿತಿ: 30 ವರ್ಷ
ಎಸ್ಸಿ/ಎಸ್ಟಿ/ಒಬಿಸಿ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ವಿದ್ಯಾರ್ಹತೆ
ಸಂಬಂಧಪಟ್ಟ ವಿಷಯದಲ್ಲಿ ಮಾನ್ಯ ಡಿಪ್ಲೊಮಾ / ಪದವಿಯನ್ನು ಹೊಂದಿರಬೇಕು.
ಹುದ್ದೆಗಳ ವಿವರ:
ಜೂನಿಯರ್ ಇಂಜಿನಿಯರ್ (ಸಿವಿಲ್ ಇಂಜಿನಿಯರಿಂಗ್) – 788 ಹುದ್ದೆಗಳು
ಜ್ಯೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್)- 37
ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್) – 15 ಹುದ್ದೆಗಳು
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) – 128 ಹುದ್ದೆಗಳು
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ 2 ಪತ್ರಿಕೆಗಳು ಇರುತ್ತವೆ.
ಪೇಪರ್ 1 ರಲ್ಲಿ ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಜನರಲ್ ಅವೇರ್ನೆಸ್ ಮತ್ತು ವಿಷಯ ಸಂಬಂಧಿತ ಪರೀಕ್ಷೆ ಎಂಬ 3 ವಿಭಾಗಗಳಿವೆ.
ಪರೀಕ್ಷೆಯ ಅವಧಿ ಎರಡು ಗಂಟೆಗಳು.
ಪೇಪರ್ 2 ರಲ್ಲಿ ಪಾರ್ಟ್ ಎ ಜನರಲ್ ಎಂಜಿನಿಯರಿಂಗ್ (ಸಿವಿಲ್ ಮತ್ತು ಸ್ಟ್ರಕ್ಚರಲ್) ಅಥವಾ ಪಾರ್ಟ್ ಬಿ ಜನರಲ್ ಎಂಜಿನಿಯರಿಂಗ್ (ಎಲೆಕ್ಟ್ರಿಕಲ್) ಅಥವಾ ಪಾರ್ಟ್ ಸಿ ಜನರಲ್ ಎಂಜಿನಿಯರಿಂಗ್ (ಮೆಕ್ಯಾನಿಕಲ್) ಎಂಬ ಮೂರು ಭಾಗಗಳಿವೆ.
ಈ ಪರೀಕ್ಷೆಯ ಅವಧಿಯೂ 2 ಗಂಟೆಗಳು.
ವೇತನ
ಪೇ ಬ್ಯಾಂಡ್ 6 ರಲ್ಲಿ ವೇತನವು 35,400 ರಿಂದ 1,12,400 ರೂ ಮತ್ತು ಗ್ರೇಡ್ ಪೇ 4200 ರೂ (ಡಿಎ ಮತ್ತು ಟಿಎ) ಆಗಿರುತ್ತದೆ.
ಎಸ್ಎಸ್ಸಿ ಜೆಇ ನೇಮಕಾತಿ 2024 ಗೆ ಸಂಬಂಧಿಸಿದ ಇತರ ವಿವರಗಳಿಗಾಗಿ, ದಯವಿಟ್ಟು ಅಧಿಕೃತ ಎಸ್ಎಸ್ಸಿ ವೆಬ್ಸೈಟ್ಗೆ ಭೇಟಿ ನೀಡಿ.