ಶಿವಮೊಗ್ಗ: ಸಾಗರ ನಗರದ ಗಣಪತಿ ಬ್ಯಾಂಕ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಇಂದು ಚುನಾವಣೆ ನಡೆಯಿತು. ಇಂದಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಗರಸಭಾ ಸದಸ್ಯ ಶ್ರೀನಿವಾಸ್ ಮೇಸ್ತ್ರಿ ಹಾಗೂ ಉಪಾಧ್ಯಕ್ಷರಾಗಿ ವಕೀಲರು, ನಗರಸಭಾ ಸದಸ್ಯರಾದಂತ ವಿ.ಶಂಕರ್ ಅವರು ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ಆಡಳಿತ ಮಂಡಳಿ ಸದಸ್ಯರ ನೇಮಕಾತಿಗಾಗಿ ಡಿಸೆಂಬರ್.29, 2024ರಂದು ಮತದಾನ ನಡೆದು, ಮತಏಣಿಕೆಯಲ್ಲಿ 13 ಪದಾಧಿಕಾರಿಗಳು ಆಯ್ಕೆಯಾಗಿದ್ದರು.
ಸಾಮಾನ್ಯ ವರ್ಗದಿಂದ ಸ್ಪರ್ಧಿಸಿದ್ದಂತ ನಗರಸಭಾ ಸದಸ್ಯ ಶ್ರೀನಿವಾಸ್ ಮೇಸ್ತ್ರಿ ಅವರು ಅತೀ ಹೆಚ್ಚು 786 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರು. ಹಿಂದುಳಿದ ವರ್ಗ-ಎ ಕೆಟಗರಿಯಿಂದ ಸ್ಪರ್ಧಿಸಿದ್ದಂತ ನಗರಸಭಾ ಸದಸ್ಯ ಹಾಗೂ ವಕೀಲ ವಿ.ಶಂಕರ್ (ಮಾಸ್ಟರ್ ಶಂಕರ್) ಅವರು 622 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
ಇಂದು ಗಣಪತಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದಂತ ಚುನಾವಣೆಯ ಬಳಿಕ, ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀನಿವಾಸ್ ಮೇಸ್ತ್ರಿ ಹಾಗೂ ಉಪಾಧ್ಯಕ್ಷರಾಗಿ ವಿ.ಶಂಕರ್ ಅವರು ಆಯ್ಕೆಯಾಗಿದ್ದಾರೆ. ಇಂತಹ ಶ್ರೀನಿವಾಸ್ ಮೇಸ್ತ್ರಿ ಹಾಗೂ ವಿ.ಶಂಕರ್ ಅವರಿಗೆ ಕನ್ನಡ ನ್ಯೂಸ್ ನೌ ಸಂಸ್ಥೆಯು ಅಭಿನಂದನೆಗಳನ್ನು ಸಲ್ಲಿಸುತ್ತಿದೆ.
ವರದಿ: ವಸಂತ ಬಿ ಈಶ್ವರಗೆರೆ
2024-25ನೇ ಸಾಲಿನ ‘GDP’ ಬೆಳವಣಿಗೆ ದರ ಶೇ.6.4ಕ್ಕೆ ಏರಿಕೆ : ‘FICCI’ ಆರ್ಥಿಕ ಮುನ್ನೋಟ ಸಮೀಕ್ಷೆ