ಉಡುಪಿ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದು ಶೃಂಗೇರಿಯ ಶಾರಾಂಬೆಯ ಶ್ರೀಮಠ. ಆಗಸ್ಟ್.15ರಿಂದ ಇಲ್ಲಿಗೆ ಭೇಟಿ ನೀಡುವಂತ ಪ್ರವಾಸಿಗರು, ಯಾತ್ರಾರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಅವುಗಳ ಹೊರತಾಗಿ ಬೇರೆ ಉಡುಪು ಧರಿಸಿ ಬಂದ್ರೆ ಶ್ರೀಮಠಕ್ಕೆ ಎಂಟ್ರಿ ಇರೋದಿಲ್ಲ.
ಈ ಬಗ್ಗೆ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀಶಾರದಾ ಪೀಠದ ಆಡಳಿತಾಧಿಕಾರಿ ಮತ್ತು ಸಿಇಓ ಪಿ.ಎ ಮುರಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶ್ರೀಮಠ ಶೃಂಗೇರಿಗೆ ಆಗಮಿಸುವ ಎಲ್ಲಾ ಭಕ್ತರು, ಆಗಸ್ಟ್.15, 2024ರಿಂದ ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಲು ವಿನಂತಿಸಿದ್ದಾರೆ.
ಶ್ರೀ ಶಾರದಾಂಬೆಯ ದರ್ಶನಕ್ಕೆ ಬರುವಂತವರು ನಿಗದಿತ ಉಡುಪುಗಳನ್ನು ಹೊರತುಪಡಿಸಿ ಇತರೆ ಉಡುಪುಗಳನ್ನು ಧರಿಸುವ ವ್ಯಕ್ತಿಗಳಿಗೆ ಮಹಾಮಂಟಪದಿಂದ ದರ್ಶನವನ್ನು ಪಡೆಯಲು ಅವಕಾಶವಿರುವುದಿಲ್ಲ. ಅವರು ಹೊರ ಪ್ರಾಕಾರದಿಂದ ದರ್ಶನ ಪಡೆಯಬಹುದಾಗಿದೆ ಎಂದಿದ್ದಾರೆ.
ಗುರು ನಿವಾಸದಲ್ಲಿ ಪಾದ ಪೂಜೆ ಮತ್ತು ಜಗದ್ಗುರುಗಳ ದರ್ಶನಕ್ಕೆ ನಿಗದಿತ ಉಡುಪುಗಳನ್ನು ಹೊರತು ಪಡಿಸಿ, ಇತರ ಉಡುಪುಗಳನ್ನು ಧರಿಸಿದವರಿಗೆ ಗುರು ನಿವಾಸದ ಒಳಗೆ ಪ್ರವೇಶವಿರುವುದಿಲ್ಲ ಅಂತ ತಿಳಿಸಿದ್ದಾರೆ.
ಈ ಸಾಂಪ್ರದಾಯಿಕ ಉಡುಪು ಧರಿಸುವುದು ಕಡ್ಡಾಯ
ಶೃಂಗೇರಿಯ ಶಾರದಾಂಬೆ ದರ್ಶನಕ್ಕೆ ಆಗಸ್ಟ್.15ರಿಂದ ಭೇಟಿ ನೀಡುವಂತ ಪುರುಷರು ಕಡ್ಡಾಯವಾಗಿ ಧೋತಿ ಅಥವಾ ಪಂಚೆ, ಶಲ್ಯ ಧರಿಸಿ ಬರಬೇಕಿದೆ. ಮಹಿಳೆಯರು ಸೀರೆ, ಜೂಡಿದಾರ್, ಪೈಜಾಮ, ದುಪ್ಪಟ್ಟದೊಂದಿಗೆ ಅಥವಾ ಲಂಗಾ-ದಾವಣಿ ಧರಿಸಿ ತೆರಳಿದ್ರೇ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇಲ್ಲವಾದಲ್ಲಿ ಪ್ರವೇಶ ನಿಷೇಧ, ಹೊರಗಡೆಯಿಂದಲೇ ದರ್ಶನ ಪಡೆಯಬಹುದಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ
ವಾಲ್ಮೀಕಿ ನಿಗಮದ ಹಗರಣ: ‘SIT ತನಿಖೆ’ಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಭರವಸೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
‘ಒಸಾಮಾ ಬಿನ್ ಲಾಡೆನ್’ನ ಆಪ್ತ ಸಹಾಯಕ, ಅಲ್-ಖೈದಾ ಉಗ್ರ ‘ಅಮೀನ್ ಉಲ್ ಹಕ್’ ಅರೆಸ್ಟ್