ಕೊಲಂಬೊ: ಶ್ರೀಲಂಕಾ ಸಚಿವ ಸೇರಿದಂತೆ ಮೂವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಚಿವರ ಭದ್ರತಾ ಸಿಬ್ಬಂದಿ ಹಾಗೂ ಅವರ ಚಾಲಕ ಮೃತಪಟ್ಟ ಇಬ್ಬರು ಸೇರಿದ್್ದಾರೆ.
ಮೃತರಲ್ಲಿ ಜಲಸಂಪನ್ಮೂಲ ಸಚಿವ ಸನತ್ ನಿಶಾಂತ (48) ಸೇರಿದ್ದಾರೆ. ಗುರುವಾರ ಮುಂಜಾನೆ ಕೊಲಂಬೊ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದೆ. ಸಚಿವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವಾಹನ ಸಂಪೂರ್ಣ ಜಖಂಗೊಂಡಿದೆ.
ವಾಹನದಲ್ಲಿದ್ದವರನ್ನು ತೀವ್ರ ಪ್ರಯತ್ನದ ನಂತರ ಹೊರ ತೆಗೆಯಲಾಯಿತು. ಅಷ್ಟರಲ್ಲಾಗಲೇ ಸಚಿವರು ಹಾಗೂ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಚಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ. ಅಪಘಾತಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ.