ಕನ್ನಡ ನಟ ಯುವರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಬೇರೆ ಊರಿನಲ್ಲಿ ಇರುವ ಕಾರಣ ರಾಘಣ್ಣನ ಕಿರಿಮಗ ಈ ಬಾರಿ ಅಭಿಮಾನಿಗಳು ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಇದೆಲ್ಲದರ ನಡುವೆ ಪತ್ನಿ ಶ್ರೀದೇವಿ ಭೈರಪ್ಪ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗ್ತಿದೆ.
ಪತ್ನಿಯಿಂದ ವಿಚ್ಛೇದನ ಕೋರಿ ಯುವರಾಜ್‌ಕುಮಾರ್ ಎರಡು ವರ್ಷಗಳ ಹಿಂದೆ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪತ್ನಿ ಶ್ರೀದೇವಿ ಅವರಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿದ್ದಾರೆ. ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ, ಆಕೆಯೊಂದಿಗೆ ಬದುಕಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಶ್ರೀದೇವಿ ವಿದೇಶದಲ್ಲಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್ ಆಗಿರುವ ಆಕೆ ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ದೊಡ್ಮನೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಪ್ರತಿಕ್ರಿಯಿಸುತ್ತಾರೆ.
5 ವರ್ಷಗಳ ಕಾಲ ಯುವ ಹಾಗೂ ಶ್ರೀದೇವಿ ಪ್ರೀತಿಸಿ 2019ರಲ್ಲಿ ಮದುವೆ ಆಗಿದ್ದರು. ಆದರೆ 5 ವರ್ಷಗಳ ಬಳಿಕ ಭಿನ್ನಾಭಿಪ್ರಾಯಗಳಿಂದ ದೂರಾಗಲು ನಿರ್ಧರಿಸಿದ್ದರು. ಆದರೆ ತಮ್ಮ ಮೇಲಿನ ಆರೋಪಗಳಿಗೆ ಶ್ರೀದೇವಿ ತಿರುಗೇಟು ಕೊಟ್ಟಿದ್ದಾರೆ. ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿ ಪತಿ ಜೊತೆಗಿನ ಒಂದಷ್ಟು ಫೋಟೊಗಳನ್ನು ಕೊಲಾಜ್ ಮಾಡಿ ವಿಡಿಯೋ ಹಂಚಿಕೊಂಡಿರುವ ಶ್ರೀದೇವಿ ಪರೋಕ್ಷವಾಗಿ ತಿವಿದಿದ್ದಾರೆ.
“ಮಹಿಳೆಯರ ಹಕ್ಕುಗಳ ಬಗ್ಗೆ ತಿಳಿಯಿರಿ – ತಡವಾಗುವ ಮೊದಲು” ಎಂದು ಕ್ಯಾಪ್ಷನ್ ಕೊಟ್ಟು ಸುದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ. ನಾನು ಮಹಿಳೆಯರ ಹಕ್ಕುಗಳ ಬಗ್ಗೆ ಶಿಕ್ಷಣ ಅಥವಾ ಸಾಮಾಜಿಕ ವ್ಯವಸ್ಥೆಯ ಭಾಗವಾಗಿ ಕಲಿತಿಲ್ಲ, ಬದಲಾಗಿ ಕಠಿಣ ಸಮಯಗಳಲ್ಲಿ ಮತ್ತು ಎಲ್ಲಾ ಮಹಿಳೆಯರು ಘನತೆಯಿಂದ ಬದುಕಲು ನಮಗಿಂತ ಮೊದಲು ಹೋರಾಡಿದ ಜನರಿಂದ ಕಲಿತಿದ್ದೇನೆ” ಎಂದು ಶ್ರೀದೇವಿ ಬರೆದುಕೊಂಡಿದ್ದಾರೆ.
ನಮ್ಮ ಕುಟುಂಬಗಳನ್ನು ತೊರೆದು ಬೇರೆಡೆಗೆ ಹೋಗಲು ನಾವು ಹುಡುಗಿಯರನ್ನು ಮದುವೆಗಳಿಗೆ ಸಿದ್ಧಪಡಿಸುತ್ತೇವೆ, ಆದರೆ ಅವರ ಹಕ್ಕುಗಳಿಗಾಗಿ ಅವರನ್ನು ಅಷ್ಟಾಗಿ ಸಿದ್ಧಪಡಿಸಲ್ಲ” ಎಂದಿದ್ದಾರೆ. ನೋವು ಮತ್ತು ಸಂಕಟಗಳನ್ನು ಅನುಭವಿಸುತ್ತಿರುವ, ಆದರೆ ಇನ್ನೂ ಹೋರಾಡಲು, ಬಿಟ್ಟುಕೊಡದೆ ಇರುವ ಎಲ್ಲಾ ಮಹಿಳೆಯರಿಗೆ ಎರಡು ಸಂದೇಶಗಳನ್ನು ಶ್ರೀದೇವಿ ಕೊಟ್ಟಿದ್ದಾರೆ.
1. ಸಂತೋಷದ ದಾಂಪತ್ಯವನ್ನು ಹೊಂದಿದ ನಂತರ, ಅವರು ನಿಮ್ಮ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದ್ರೆ ತಾಳ್ಮೆಯಿಂದಿರಿ. ನಿಮ್ಮ ಮೇಲೆ ನಂಬಿಕೆ ಇಡಿ. ಸಾಬೀತುಪಡಿಸುವುದು ಅವರ ಜವಾಬ್ದಾರಿ, ನಿಮ್ಮದಲ್ಲ. ಅವಮಾನವು ಮಹಿಳೆಯರನ್ನು ಅಡಗಿಕೊಳ್ಳಲು ಬೆದರಿಕೆ ಹಾಕಲು ಬಳಸುವ ಅಗ್ಗದ ಕರೆನ್ಸಿಯಾಗಿದೆ.
2. ನಾವು “ಕಾನೂನುಬದ್ಧವಾಗಿ ಅರ್ಹರಲ್ಲ” ಎಂದು ಸಾಮಾಜಿಕ ಮಾಧ್ಯಮ ಮತ್ತು ಇತರೆಡೆಗಳಿಂದ ಫೋಟೋಗಳು ಮತ್ತು ದಾಖಲೆಗಳನ್ನು ತೆಗೆದುಹಾಕುವುದಾಗಿ ಬೆದರಿಕೆ ಹಾಕುವುದು. ಕಾನೂನುಬದ್ಧವಾಗಿ ಅರ್ಹರಲ್ಲದಿರುವುದು ಅಕ್ರಮ ಸಂಬಂಧದಲ್ಲಿರುವುದು, ನಾವು ಕಾನೂನುಬದ್ಧವಾಗಿ ವಿವಾಹಿತರಾಗಿದ್ದರೂ ಮುಕ್ತವಾಗಿ ಪ್ರಯಾಣಿಸುವುದು ಎಷ್ಟು ಸರಿ ಎಂದು ಶ್ರೀದೇವಿ ಪ್ರಶ್ನಿಸಿದ್ದಾರೆ.
ಸಾಕಷ್ಟು ಜನ ಶ್ರೀದೇವಿ ಪೋಸ್ಟ್ ಓದದೇ ಬರೀ ವಿಡಿಯೋ ನೋಡಿ ಕಾಮೆಂಟ್ ಮಾಡುತ್ತಿದ್ದಾರೆ. ಇಬ್ಬರ ಸುಂದರ ಕ್ಷಣಗಳ ಫೋಟೊಗಳನ್ನು ಕೊಲಾಜ್ ಮಾಡಿ ಹಾಕಿದ್ದಾರೆ. ಇಬ್ಬರೂ ಒಂದಾಗುತ್ತಾರೆ. ಅದಕ್ಕೆ ಶ್ರೀದೇವಿ ಹುಟ್ಟುಹಬ್ಬದ ಶುಭ ಕೋರಿ ಪೋಸ್ಟ್ ಮಾಡಿದ್ದಾರೆ ಎಂದು ಭಾವಿಸಿದ್ದಾರೆ. ಇದಕ್ಕೆ ಕೆಲವರು ಕಾಮೆಂಟ್ ಬಾಕ್ಸ್‌ನಲ್ಲೇ ಸ್ಪಷ್ಟನೆ ನೀಡುತ್ತಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗ್ತಿದೆ.
ಶ್ರೀದೇವಿ ಭೈರಪ್ಪ ಪೋಸ್ಟ್ ಮಾಡಿರುವ ಕಲಾಜ್ ಫೋಟೊ ವಿಡಿಯೋ ಹಿನ್ನೆಲೆಯಲ್ಲಿ ಕೇಳಿಸುವ ಆಲ್ಬಮ್ ಸಾಂಗ್ ಕೂಡ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಆ ಮೂಲಕ ತಮ್ಮ ಮನಸ್ಸಿನಲ್ಲಿರುವ ಸಾಕಷ್ಟು ವಿಚಾರಗಳನ್ನು ಅವರು ಹೊರಹಾಕಿದ್ದಾರೆ. ಕೆಲ ಅಭಿಮಾನಿಗಳು ಎಲ್ಲವನ್ನು ಮರೆತು ಬೇಗ ಇಬ್ಬರೂ ಒಂದಾಗಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.








