ಬೆಂಗಳೂರು: ವಾರಾಂತ್ಯದ ದಟ್ಟಣೆ ಮತ್ತು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂದಲ್ಲಿ ನಡೆಯಲಿರುವ ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಹೆಚ್ಚಾಗುವ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಮತ್ತು ತಿರುವನಂತಪುರಂ ನಾರ್ತ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ಈ ವಿಶೇಷ ರೈಲುಗಳ ವಿವರ ಈ ಕೆಳಗಿನಂತಿವೆ:
1. ರೈಲು ಸಂಖ್ಯೆ 06543/06544 ಬೆಂಗಳೂರು ಕಂಟೋನ್ಮೆಂಟ್ – ತಿರುವನಂತಪುರಂ ನಾರ್ತ್ – ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ (ಒಂದು ಟ್ರಿಪ್):
ರೈಲು ಸಂಖ್ಯೆ 06543 ನವೆಂಬರ್ 15 ರಂದು ಮಧ್ಯಾಹ್ನ 1:00 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ನಿಂದ ಹೊರಟು, ಮರುದಿನ ಬೆಳಿಗ್ಗೆ 6:40ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ. ಹಿಂದಿರುಗುವ ಸೇವೆ, ರೈಲು ಸಂಖ್ಯೆ 06544 ನವೆಂಬರ್ 16 ರಂದು ಬೆಳಿಗ್ಗೆ 9:30ಕ್ಕೆ ತಿರುವನಂತಪುರಂ ನಾರ್ತ್’ದಿಂದ ಹೊರಟು, ನವೆಂಬರ್ 17 ರಂದು ಬೆಳಿಗ್ಗೆ 3:30ಕ್ಕೆ ಬೆಂಗಳೂರು ಕಂಟೋನ್ಮೆಂಟ್’ಗೆ ಆಗಮಿಸಲಿದೆ.
2. ರೈಲು ಸಂಖ್ಯೆ 06549/06550 ಎಸ್ಎಂವಿಟಿ ಬೆಂಗಳೂರು – ತಿರುವನಂತಪುರಂ ನಾರ್ತ್ – ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (ಒಂದು ಟ್ರಿಪ್):
ರೈಲು ಸಂಖ್ಯೆ 06549 ನವೆಂಬರ್ 22 ರಂದು ಮಧ್ಯಾಹ್ನ 3:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 6:40ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ. ಹಿಂದಿರುಗುವ ರೈಲು ಸಂಖ್ಯೆ 06550 ನವೆಂಬರ್ 23 ರಂದು ಬೆಳಿಗ್ಗೆ 9:30ಕ್ಕೆ ತಿರುವನಂತಪುರಂ ನಾರ್ತ್’ದಿಂದ ಹೊರಟು, ನವೆಂಬರ್ 24 ರಂದು ಬೆಳಿಗ್ಗೆ 3:30 ಕ್ಕೆ ಎಸ್ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.
ಮಾರ್ಗದಲ್ಲಿ, ಈ ಎರಡೂ ವಿಶೇಷ ರೈಲುಗಳು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪೂರು, ಪೊದನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ತ್ರಿಶೂರ್, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೇರಿ, ತಿರುವಳ್ಳಾ, ಚೆಂಗನ್ನೂರು, ಕಾಯಂಕುಲಂ, ಕೊಲ್ಲಂ ಜಂಕ್ಷನ್ ಮತ್ತು ವರ್ಕಳ ಶಿವಗಿರಿ ನಿಲ್ದಾಣಗಳಲ್ಲಿ ನಿಲ್ಲಲಿವೆ. ಪ್ರತಿಯೊಂದು ರೈಲು ಸೇವೆಯು ಎಸಿ, ಸ್ಲೀಪರ್ ಮತ್ತು ಜನರಲ್ ದರ್ಜೆಯ ಒಳಗೊಂಡಂತೆ ಒಟ್ಟು 22 ಬೋಗಿಗಳೊಂದಿಗೆ ಚಲಿಸುತ್ತದೆ.
‘ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ’ ನಿಧನಕ್ಕೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಸಂತಾಪ
ALERT : `ಮಧುಮೇಹ’ದಿಂದ ಹೃದಯಾಘಾತ, ಪಾರ್ಶ್ವವಾಯು ಸೇರಿ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ.!








