ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿರುವಂತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ವಿಶೇಷ ಚೇತನರಿಗೆ ವೀಲ್ ಚೇರ್ ವಿತರಿಸುವ ಮೂಲಕ ಸಾಮಾಜಿಕ ಸೇವೆಯ ನಡೆಯನ್ನು ತೋರಿದೆ.
ಸಾಗರ ನಗರದಲ್ಲಿ ವಿಶೇಷ ಚೇತನ ಆಗಿದ್ದಂತ ನಿವೇದನ್ ಎಂಬುವರಿಗೆ ವೀಲ್ ಚೇರ್ ಅವಶ್ಯಕತೆ ಇದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ನೀಡುವಂತೆ ತಾಲ್ಲೂಕು ಯೋಜನಾಧಿಕಾರಿ ಶಾಂತಾ ನಾಯಕ್ ಗೆ ಪೋಷಕರು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದಂತ ಅವರು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅನುಮತಿ ಪಡೆದಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ನೂತನವಾಗಿ ಸಂಘದಿಂದ ಖರೀದಿಸಿದ್ದಂತ ವೀಲ್ ಚೇರ್ ಅನ್ನು ಸಾಗರದ ಎಸ್ ಎನ್ ನಗರದ ನಿವಾಸಿ ವಿನೇದನ್ ಎಂಬ ವಿಶೇಷ ಚೇತನನಿಗೆ ಇಂದು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಾಗರ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವಲಯ ಮೇಲ್ವಿಚಾರಕರಾದಂತ ದಿನೇಶ್.ಎಸ್, ಒಕ್ಕೂಟ ಅಧ್ಯಕ್ಷರಾದ ನಾಗರತ್ನ, ಸೇವಾ ಪ್ರತಿನಿಧಿ ಕುಸುಮ, ಗಿರಿಜಾ ರಾಣಿ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ