ಮೈಸೂರು: ಪ್ರಯಾಣಿಕರ ಸೌಲಭ್ಯಕ್ಕಾಗಿ ಹಾಗೂ ಡೊಡ್ಡಜಾತ್ರೆ / ಪಂಚ ಮಹಾರಥೋತ್ಸವದ ಸಲುವಾಗಿ ಹೆಚ್ಚುವರಿ ಜನ ದಟ್ಟಣೆಯನ್ನು ನಿವಾರಿಸಲು, ನೈರುತ್ಯ ರೈಲ್ವೆ ಮೈಸೂರು ಮತ್ತು ನಂಜನಗೂಡು ಟೌನ್ ನಡುವೆ 30 ಮಾರ್ಚ್ 2026 ರಿಂದ 03 ಏಪ್ರಿಲ್ 2026ರವರೆಗೆ, ಪ್ರತಿ ದಿಕ್ಕಿನಲ್ಲಿ 05 ಟ್ರಿಪ್ ಗಳ ವಿಶೇಷ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ರೈಲುಗಳ ವಿವರಗಳು ಕೆಳಗಿನಂತಿವೆ:
ರೈಲು ಸಂಖ್ಯೆ 06225 ಮೈಸೂರು – ನಂಜನಗೂಡು ಟೌನ್ ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ಮೈಸೂರಿನಿಂದ 13:00 ಗಂಟೆಗೆ ಹೊರಟು, ನಂಜನಗೂಡು ಟೌನ್ ಗೆ 14:00 ಗಂಟೆಗೆ ತಲುಪಲಿದೆ, ಮಧ್ಯಂತರ ನಿಲ್ದಾಣಗಳಲ್ಲಿ ಆಗಮನ / ನಿರ್ಗಮನ ಸಮಯಗಳು ಚಾಮರಾಜಪುರಂ 13:07/13:08 ಗಂಟೆ, ಅಶೋಕಪುರಂ 13:15/13:16 ಗಂಟೆ, ಕಡಕೊಳ 13:29/13:30 ಗಂಟೆ, ತಾಂಡವಪುರ 13:35/13:36 ಗಂಟೆ, ಸುಜಾತಪುರಂ 13:41/13:42 ಗಂಟೆಗೆ ಬರಲಿದೆ.
ರೈಲು ಸಂಖ್ಯೆ 06226 ನಂಜನಗೂಡು ಟೌನ್ – ಮೈಸೂರು ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ನಂಜನಗೂಡು ಟೌನ್ ನಿಂದ 15:10 ಗಂಟೆಗೆ ಹೊರಟು, ಮೈಸೂರಿಗೆ 16:10 ಗಂಟೆಗೆ ತಲುಪಲಿದೆ, ಮಧ್ಯಂತರ ನಿಲ್ದಾಣಗಳಲ್ಲಿ ಆಗಮನ / ನಿರ್ಗಮನ ಸಮಯಗಳು, ಸುಜಾತಪುರಂ 15:15/15:16 ಗಂಟೆ, ತಾಂಡವಪುರ 15:21/15:22 ಗಂಟೆ, ಕಡಕೊಳ 15:27/15:28 ಗಂಟೆ, ಅಶೋಕಪುರಂ 15:48/15:50 ಗಂಟೆ, ಚಾಮರಾಜಪುರಂ 15:55/15:56 ಗಂಟೆಗೆ ಬರಲಿದೆ.
ಕೋಚ್ ವಿನ್ಯಾಸ, ಈ ರೈಲಿನಲ್ಲಿ ಒಟ್ಟು 21 ಕೋಚ್‌ಗಳು ಇರುತ್ತವೆ: 2 ಎಸಿ ಟು-ಟಯರ್, 6 ಎಸಿ ತ್ರೀ-ಟಯರ್, 7 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ, 1 ಲಗೇಜ್/ಬ್ರೇಕ್ ವ್ಯಾನ್, 1 ಎಸ್‌ಎಲ್‌ಆರ್‌ಡಿ ಕೋಚ್.
ನಮ್ಮ ಮೆಟ್ರೋದಲ್ಲಿ ಸಾರ್ವಕಾಲಿಕ ದಾಖಲೆ: ಒಂದೇ ದಿನ 10.73 ಲಕ್ಷ ಮಂದಿ ಪ್ರಯಾಣ!
ರಾಜ್ಯದ ‘ಗ್ರಾಮೀಣ ಜನತೆ’ ಗಮನಕ್ಕೆ: ಮಾ.31ರೊಳಗೆ ‘ಆಸ್ತಿ ತೆರಿಗೆ ಪಾವತಿ’ಸದಿದ್ದರೆ ಬೀಳಲಿದೆ ಭಾರಿ ದಂಡ!








