ಬಳ್ಳಾರಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ಹೋಗಲು ವಿಶೇಷ ಸಾರಿಗೆ ಸೌಲಭ್ಯ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‌ಬಾನ್ ಅವರು ತಿಳಿಸಿದ್ದಾರೆ.
ಬಳ್ಳಾರಿ, ಮೋಕಾ, ಕುರುಗೋಡು, ಸಿರುಗುಪ್ಪ, ತೆಕ್ಕಲಕೋಟೆ, ಹಳೇಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ಹೋಗುತ್ತಿದ್ದು, ಭಕ್ತಾಧಿಗಳ ಅನುಕೂಲಕ್ಕಾಗಿ ಫೆ.21 ರಿಂದ 28 ರ ವರೆಗೆ ರವರೆಗೆ ವಿಶೇಷ ಸಾರಿಗೆ ಒದಗಿಸಲಾಗಿದೆ.
ಮಾಹಿತಿಗಾಗಿ: ಬಳ್ಳಾರಿ-1ನೇ ಘಟಕದ ವ್ಯವಸ್ಥಾಪಕರು-7760992163, ಬಳ್ಳಾರಿ-2ನೇ ಘಟಕ ವ್ಯವಸ್ಥಾಪಕರು-7760992164, ಸಿರುಗುಪ್ಪ ಘಟಕ ವ್ಯವಸ್ಥಾಪಕರು-7760992165, ಕುರುಗೋಡು ಘಟಕ ವ್ಯವಸ್ಥಾಪಕರು-9606483671, ಸಂಡೂರು ಘಟಕ ವ್ಯವಸ್ಥಾಪಕರು-7760992309 ಗೆ ಸಂಪರ್ಕಿಸಬಹುದು.
ಈ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.