ಹುಬ್ಬಳ್ಳಿ: ಮುಂಬರುವ ದೀಪಾವಳಿ ಮತ್ತು ಛತ್ ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈರುತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ರಕ್ಸೌಲ್ (ಬಿಹಾರ) ಹಾಗೂ ಹುಬ್ಬಳ್ಳಿ ಮತ್ತು ಭಗತ್-ಕಿ-ಕೋಠಿ (ರಾಜಸ್ಥಾನ) ನಡುವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳ ವಿವರ ಹೀಗಿದೆ:
1. ಹುಬ್ಬಳ್ಳಿ–ರಕ್ಸೌಲ್ ವಿಶೇಷ ರೈಲು (17 ಟ್ರಿಪ್‌ಗಳು):
ಸೆಪ್ಟೆಂಬರ್ 6, 2025 ರಿಂದ ಡಿಸೆಂಬರ್ 27, 2025 ರವರೆಗೆ ರೈಲು ಸಂಖ್ಯೆ 07357 ಹುಬ್ಬಳ್ಳಿಯಿಂದ ಪ್ರತೀ ಶನಿವಾರ ಬೆಳಿಗ್ಗೆ 9:00 ಗಂಟೆಗೆ ಹೊರಟು, ಸೋಮವಾರ ರಾತ್ರಿ 10:05 ಗಂಟೆಗೆ ರಕ್ಸೌಲ್ ತಲುಪಲಿದೆ. ವಾಪಸು, ರೈಲು ಸಂಖ್ಯೆ 07358 ರಕ್ಸೌಲ್‌ನಿಂದ ಪ್ರತೀ ಮಂಗಳವಾರ, ಸೆಪ್ಟೆಂಬರ್ 9, 2025 ರಿಂದ ಡಿಸೆಂಬರ್ 30, 2025 ರವರೆಗೆ ಸಂಜೆ 4:55 ಗಂಟೆಗೆ ಹೊರಟು, ಶುಕ್ರವಾರ ಮುಂಜಾನೆ 5:25 ಗಂಟೆಗೆ ಹುಬ್ಬಳ್ಳಿ ಆಗಮಿಸಲಿದೆ.
ಈ ವಿಶೇಷ ರೈಲು ಮಾರ್ಗಮಧ್ಯೆ ಎಸ್‌ಎಂಎಂ ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಲಹಂಕ, ಧರ್ಮಾವರಂ, ಗುಂತಕಲ್, ಕೃಷ್ಣ, ಸಿಕಂದರಾಬಾದ್, ಕಾಜಿಪೇಟ್, ಬಲ್ಹಾರ್ಷಾ, ಚಂದ್ರಾಪುರ, ನಾಗ್ಪುರ, ಆಮ್ಲಾ, ಬೇತುಲ್, ಇಟಾರ್ಸಿ, ಪಿಪಾರಿಯಾ, ನರಸಿಂಗ್‌ಪುರ, ಮದನ್ ಮಹಲ್, ಕಟ್ನಿ, ಸತ್ನಾ, ಮಾಣಿಕ್ಪುರ, ಪ್ರಯಾಗರಾಜ್ ಚೀಯೋಕಿ, ಮಿರ್ಜಾಪುರ, ಪಂಡಿತ ದೀನ್ ದಯಾಲ್ ಉಪಾಧ್ಯಾಯ ಜಂ., ಬಕ್ಸರ್, ಅರಾ, ದಾನಾಪುರ, ಪಾಟಲಿಪುತ್ರ, ಸೋನ್ಪುರ, ಹಾಜಿಪುರ, ಮುಜಾಫ್ಫರಪುರ್, ಸೀತಾಮರ್ಹಿ ಮತ್ತು ಬೈರ್ಗನಿಯಾ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲಿನಲ್ಲಿ 2 ಎಸಿ 2-ಟೈರ್, 5 ಎಸಿ 3-ಟೈರ್, 10 ಸ್ಲೀಪರ್, 4 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್‌ಎಲ್‌ಆರ್/ಡಿ ಬೋಗಿಗಳು ಸೇರಿದಂತೆ ಒಟ್ಟು 23 ಬೋಗಿಗಳಿರಲಿವೆ.
2. ಹುಬ್ಬಳ್ಳಿ–ಭಗತ್-ಕಿ-ಕೋಠಿ ವಿಶೇಷ ರೈಲು (5 ಟ್ರಿಪ್‌ಗಳು):
ಸೆಪ್ಟೆಂಬರ್ 28, 2025 ರಿಂದ ಅಕ್ಟೋಬರ್ 26, 2025 ರವರೆಗೆ ರೈಲು ಸಂಖ್ಯೆ 07359 ಹುಬ್ಬಳ್ಳಿಯಿಂದ ಪ್ರತೀ ಭಾನುವಾರದಂದು ಸಂಜೆ 7:30 ಗಂಟೆಗೆ ಹೊರಟು, ಮಂಗಳವಾರ ಮುಂಜಾನೆ 5:30 ಗಂಟೆಗೆ ಭಗತ್-ಕಿ-ಕೋಠಿ ತಲುಪಲಿದೆ. ಪುನಃ ಇದೇ ರೈಲು (ಸಂಖ್ಯೆ 07360) ಭಗತ್-ಕಿ-ಕೋಠಿಯಿಂದ ಪ್ರತೀ ಮಂಗಳವಾರದಂದು, ಸೆಪ್ಟೆಂಬರ್ 30, 2025 ರಿಂದ ಅಕ್ಟೋಬರ್ 28, 2025 ರವರೆಗೆ ಬೆಳಿಗ್ಗೆ 7:50 ಗಂಟೆಗೆ ಹೊರಟು, ಬುಧವಾರ ಮಧ್ಯಾಹ್ನ 3:15 ಗಂಟೆಗೆ ಹುಬ್ಬಳ್ಳಿ ಆಗಮಿಸಲಿದೆ.
ಈ ರೈಲು ಹೋಗುವಾಗ ಮತ್ತು ಬರುವಾಗ ಎರಡೂ ಮಾರ್ಗಗಳಲ್ಲಿ ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ವಾಪಿ, ಸೂರತ್, ವಡೋದರಾ, ಮಹೇಸನಾ, ಪಾಲನ್ಪುರ್, ಅಬು ರೋಡ್, ಪಿಂಡ್ವಾರಾ, ಫಲ್ನಾ, ಮಾರ್ವಾರ್, ಪಾಲಿ ಮಾರ್ವಾರ್, ಮತ್ತು ಲೂನಿ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲು 20 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 2 ಎಸಿ 2-ಟೈರ್, 16 ಎಸಿ 3-ಟೈರ್, ಮತ್ತು ಜನರೇಟರ್ ಕಾರ್‌ಗಳೊಂದಿಗೆ 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.
BIG NEWS: ಸಾಹಿತಿ ಬಾನು ಮುಷ್ತಾಕ್ ಹಸುವಿನ ಮಾಂಸ ತಿನ್ನುತ್ತಾರೆ: ವಿಪಕ್ಷ ನಾಯಕ ಆರ್.ಅಶೋಕ್ ವಿವಾದಾತ್ಮಕ ಹೇಳಿಕೆ
ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳಿಗೆ ಗುಡ್ ನ್ಯೂಸ್: 5 ಲಕ್ಷದವರೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ