ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಯಶವಂತಪುರ/ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತಂತೆ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನೈಋತ್ಯ ರೈಲ್ವೆಯು ಯಶವಂತಪುರ/ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ ಅಂತ ತಿಳಿಸಿದೆ.
ರೈಲು ಸಂಖ್ಯೆ 06523/06524 ಯಶವಂತಪುರ-ಕಲಬುರಗಿ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಸ್ಟೇಷನ್ ಸ್ಪೆಷಲ್ ಎಕ್ಸ್ಪ್ರೆಸ್ (1 ಟ್ರಿಪ್):
ರೈಲು ಸಂಖ್ಯೆ 06523 ಜುಲೈ 14, 2024 ರಂದು (ಭಾನುವಾರ) ರಾತ್ರಿ 08:40 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 07:45 ಕ್ಕೆ ಕಲಬುರಗಿ ನಿಲ್ದಾಣವನ್ನು ತಲುಪಲಿದೆ.
ರೈಲು ಸಂಖ್ಯೆ 06524 ಜುಲೈ 15, 2024 ರಂದು ಬೆಳಿಗ್ಗೆ 09:30 ಕ್ಕೆ ಕಲಬುರಗಿಯಿಂದ ಹೊರಟು ಅದೇ ದಿನ ರಾತ್ರಿ 08:30 ಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣವನ್ನು ತಲುಪಲಿದೆ.
ಈ ವಿಶೇಷ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರಸ್ತೆ, ರಾಯಚೂರು, ಯಾದಗಿರಿ ಮತ್ತು ಶಹಾಬಾದ್ ಎರಡೂ ದಿಕ್ಕುಗಳಲ್ಲಿ ನಿಲ್ಲಲಿದೆ.
ಈ ವಿಶೇಷ ರೈಲಿನಲ್ಲಿ ಎಸಿ 2 ಟೈರ್-1, ಎಸಿ 3 ಟೈರ್-1, ಸ್ಲೀಪರ್ ಕ್ಲಾಸ್-10, ಜನರಲ್ ಸೆಕೆಂಡ್ ಕ್ಲಾಸ್-4, ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್/ದಿವ್ಯಾಂಗಜನ್ ಕೋಚ್-2 ಸೇರಿದಂತೆ ಒಟ್ಟು 18 ಬೋಗಿಗಳು ಇರಲಿವೆ.
ರೈಲು ಸಂಖ್ಯೆ 06589/06590 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ – ಕಲಬುರಗಿ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಸ್ಪೆಷಲ್ ಎಕ್ಸ್ಪ್ರೆಸ್ (1 ಟ್ರಿಪ್):
ರೈಲು ಸಂಖ್ಯೆ 06589 ಜುಲೈ 15, 2024 ರಂದು (ಸೋಮವಾರ) ರಾತ್ರಿ 08:00 ಗಂಟೆಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಹೊರಟು ಮರುದಿನ ಬೆಳಿಗ್ಗೆ 07:45 ಕ್ಕೆ ಕಲಬುರಗಿ ನಿಲ್ದಾಣವನ್ನು ತಲುಪಲಿದೆ.
ರೈಲು ಸಂಖ್ಯೆ 06590 ಜುಲೈ 16, 2024 ರಂದು ಬೆಳಿಗ್ಗೆ 09:30 ಕ್ಕೆ ಕಲಬುರಗಿಯಿಂದ ಹೊರಟು ಅದೇ ದಿನ ರಾತ್ರಿ 08:30 ಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣವನ್ನು ತಲುಪಲಿದೆ.
ಈ ವಿಶೇಷ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರಸ್ತೆ, ರಾಯಚೂರು, ಯಾದಗಿರಿ ಮತ್ತು ಶಹಾಬಾದ್ ಎರಡೂ ದಿಕ್ಕುಗಳಲ್ಲಿ ನಿಲ್ಲಲಿದೆ.
ಈ ವಿಶೇಷ ರೈಲಿನಲ್ಲಿ ಎಸಿ 2 ಶ್ರೇಣಿ -2, ಎಸಿ 3 ಶ್ರೇಣಿ -2, ಸ್ಲೀಪರ್ ಕ್ಲಾಸ್ -6, ಜನರಲ್ ಸೆಕೆಂಡ್ ಕ್ಲಾಸ್ -6, ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ / ದಿವ್ಯಾಂಗನ್ ಕೋಚ್ -2 ಸೇರಿದಂತೆ ಒಟ್ಟು 18 ಬೋಗಿಗಳು ಇರಲಿವೆ.
ರೈಲು ಸಂಖ್ಯೆ 06597/06598 ಯಶವಂತಪುರ-ಕಲಬುರಗಿ-ಯಶವಂತಪುರ ವಿಶೇಷ ಎಕ್ಸ್ಪ್ರೆಸ್ (1 ಟ್ರಿಪ್):
ರೈಲು ಸಂಖ್ಯೆ 06597 ಜುಲೈ 16, 2024 ರಂದು (ಮಂಗಳವಾರ) ರಾತ್ರಿ 11:50 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 11:30 ಕ್ಕೆ ಕಲಬುರಗಿ ನಿಲ್ದಾಣವನ್ನು ತಲುಪಲಿದೆ.
ರೈಲು ಸಂಖ್ಯೆ 06598 ಜುಲೈ 17, 2024 ರಂದು (ಬುಧವಾರ) ಮಧ್ಯಾಹ್ನ 01:30 ಕ್ಕೆ ಕಲಬುರಗಿಯಿಂದ ಹೊರಟು ಅದೇ ದಿನ ರಾತ್ರಿ 11:55 ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.
ಈ ವಿಶೇಷ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರಸ್ತೆ, ರಾಯಚೂರು, ಯಾದಗಿರಿ ಮತ್ತು ಶಹಾಬಾದ್ ಎರಡೂ ದಿಕ್ಕುಗಳಲ್ಲಿ ನಿಲ್ಲಲಿದೆ.
ಈ ವಿಶೇಷ ರೈಲಿನಲ್ಲಿ ಎಸಿ 2 ಶ್ರೇಣಿ -2, ಎಸಿ 3 ಶ್ರೇಣಿ -6, ಸ್ಲೀಪರ್ ಕ್ಲಾಸ್ -7, ಜನರಲ್ ಸೆಕೆಂಡ್ ಕ್ಲಾಸ್ -4, ಸೆಕೆಂಡ್ ಕ್ಲಾಸ್ ಲಗೇಜ್ ಕಂ ಬ್ರೇಕ್ ವ್ಯಾನ್ ವಿತ್ ಜನರೇಟರ್ -2 ಸೇರಿದಂತೆ ಒಟ್ಟು 21 ಬೋಗಿಗಳು ಇರಲಿವೆ.