ಬೆಂಗಳೂರು: ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಳಗಾವಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಡುವೆ ತಲಾ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ. ಈ ರೈಲು ಸೇವೆಯ ವಿವರ ಈ ಕೆಳಗಿನಂತಿವೆ.
ರೈಲು ಸಂಖ್ಯೆ 07385 ಬೆಳಗಾವಿ–ಎಸ್ಎಮ್ವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 20, 2025 ರಂದು ಬೆಳಗಾವಿಯಿಂದ ಸಂಜೆ 05:30 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 07386 ಎಸ್ಎಂವಿಟಿ ಬೆಂಗಳೂರು–ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 21 ರಂದು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 07:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 08:00 ಗಂಟೆಗೆ ಬೆಳಗಾವಿ ತಲುಪಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಖಾನಾಪುರ, ಲೊಂಡಾ, ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಹರಿಹರ, ದಾವಣಗೆರೆ, ಬಿರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣಾವರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ರೈಲಿನಲ್ಲಿ ಒಟ್ಟು 16 ಬೋಗಿಗಳು ಇರಲಿವೆ: ಎಸಿ ಟು-ಟೈರ್ (1), ಎಸಿ ತ್ರಿ-ಟೈರ್ (1), ಸ್ಲೀಪರ್ ಕ್ಲಾಸ್ (8), ಸಾಮಾನ್ಯ ದ್ವಿತೀಯ ದರ್ಜೆ (4) ಮತ್ತು ಎಸ್ಎಲ್ಆರ್/ಡಿ (2) ಬೋಗಿಗಳು ಇರಲಿವೆ.
ಪ್ರಯಾಣಿಕರು ಈ ವಿಶೇಷ ರೈಲುಗಳ ನಿಖರವಾದ ಆಗಮನ/ನಿರ್ಗಮನದ ಸಮಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ರೈಲ್ವೆ ವೆಬ್ ಸೈಟ್’ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ರೈಲ್ವೆ ಬುಕ್ಕಿಂಗ್ ಕೌಂಟರಗಳನ್ನು ಸಂಪರ್ಕಿಸಬಹುದು.
ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ ರೈಲಿಗೆ ಹೊಳಲ್ಕೆರೆ, ಅಮೃತಾಪುರ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ
GOOD NEWS : ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ : ಇನ್ಮುಂದೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ!