Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಇಂದು 17 ಜನರಿಗೆ ಕೊರೊನ ಸೋಂಕು ದೃಢ : ಕೋವಿಡ್ ಪ್ರಕರಣಗಳ ಸಂಖ್ಯೆ 442ಕ್ಕೆ ಏರಿಕೆ | Corona Case

01/06/2025 7:47 PM

BREAKING: ರಾಜ್ಯದಲ್ಲಿಂದು 17 ಜನರಿಗೆ ಕೊರೋನಾ: ಸಕ್ರೀಯ ಸೋಂಕಿತರ ಸಂಖ್ಯೆ 253ಕ್ಕೆ ಏರಿಕೆ | Karnataka Covid19 Update

01/06/2025 7:38 PM

CRIME NEWS: ಸಂಸಾರ ಸಾಗಿಸೋಕೆ ಸರಗಳ್ಳತಕ್ಕೆ ಇಳಿದಿದ್ದ ಪ್ರೇಮಿಗಳು ಅರೆಸ್ಟ್!

01/06/2025 7:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈಲ್ವೆ ಪ್ರಯಾಣಿಕರ ಗಮನಕ್ಕೆ: ಭುವನೇಶ್ವರ-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ
KARNATAKA

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಭುವನೇಶ್ವರ-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ

By kannadanewsnow0903/09/2024 5:33 PM

ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಭುವನೇಶ್ವರ-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ ಮಾಡಲಿದೆ. ಅಲ್ಲದೇ ಕೃಷ್ಣರಾಜಪುರಂನಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ಸಮಯ ಪರಿಷ್ಕರಣೆ ಮಾಡಲಾಗಿದೆ. 

ಈ ಕುರಿತಂತೆ ನೈರುತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಮೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

I. ಭುವನೇಶ್ವರ-ಬೆಳಗಾವಿ ನಡುವೆ ವಿಶೇಷ ರೈಲು ಸೇವೆ

ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಭುವನೇಶ್ವರ-ಬೆಳಗಾವಿ ನಿಲ್ದಾಣಗಳ ನಡುವೆ ಸಾಪ್ತಾಹಿಕ ವಿಶೇಷ (ರೈಲು ಸಂಖ್ಯೆ 02813/02814) ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಪೂರ್ವ ಕರಾವಳಿ ರೈಲ್ವೆ ಸೂಚಿಸಿದೆ.

ರೈಲು ಸಂಖ್ಯೆ 02813: ಈ ರೈಲು ಸೆಪ್ಟೆಂಬರ್ 7, 14, 21 ಮತ್ತು 28, 2024 ರಂದು ಪ್ರತಿ ಶನಿವಾರ ಭುವನೇಶ್ವರದಿಂದ ಸಾಯಂಕಾಲ 07:15 ಗಂಟೆಗೆ ಹೊರಟು, ಸೋಮವಾರ ಬೆಳಗಿನ ಜಾವ 03:00 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 02814: ಈ ರೈಲು ಸೆಪ್ಟೆಂಬರ್ 9, 16, 23 ಮತ್ತು 30, 2024 ರಂದು ಪ್ರತಿ ಸೋಮವಾರ ಬೆಳಗಾವಿಯಿಂದ ಬೆಳಗ್ಗೆ 07:30 ಗಂಟೆಗೆ ಹೊರಟು ಮಂಗಳವಾರ ಮಧ್ಯಾಹ್ನ 02:30 ಗಂಟೆಗೆ ಭುವನೇಶ್ವರವನ್ನು ತಲುಪಲಿದೆ.

ಮಾರ್ಗದಲ್ಲಿ, ಈ ರೈಲು ಖುರ್ದಾ ರೋಡ್, ಬ್ರಹ್ಮಪುರ, ಪಲಾಸ, ಶ್ರೀಕಾಕುಳಂ ರೋಡ, ವಿಜಯನಗರಂ, ಪೆಂಡುರ್ತಿ, ದುವ್ವಾಡ, ರಾಜಮಂಡ್ರಿ, ಎಲೂರು, ವಿಜಯವಾಡ, ಗುಂಟೂರು, ನಂದ್ಯಾಳ, ಧೋನೆ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಮುನಿರಾಬಾದ್, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಲೋಂಡಾ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ.

ಈ ವಿಶೇಷ ರೈಲು ಹದಿನಾರು ಎಸಿ-3 ಟೈಯರ್ ಬೋಗಿಗಳು ಮತ್ತು ಎರಡು ಬ್ರೇಕ್/ಲಗೇಜ್ ಕಮ್ ಜನರೇಟರ್ ಕಾರುಗಳನ್ನು ಒಳಗೊಂಡಿರುತ್ತದೆ.

II. ಕೃಷ್ಣರಾಜಪುರಂನಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ಸಮಯ ಪರಿಷ್ಕರಣೆ

ಮಧುರೈ-ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ವಾರಕ್ಕೆ ಆರು ದಿನ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಕೃಷ್ಣರಾಜಪುರಂ ನಿಲ್ದಾಣದಲ್ಲಿ ಈ ಕೆಳಗಿನಂತೆ ಪರಿಷ್ಕರಣೆ ಮಾಡಲಾಗುತ್ತಿದೆ.

1. ಸೆಪ್ಟೆಂಬರ್ 5, 2024 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 20671 ಮಧುರೈ-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 12:50/12:52 ಗಂಟೆಯ ಬದಲು 12:30/12:32 ಗಂಟೆಗೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಆಗಮಿಸಿ/ನಿರ್ಗಮಿಸಲಿದೆ.

2. ಸೆಪ್ಟೆಂಬರ್ 15, 2024 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 20672 ಬೆಂಗಳೂರು ಕಂಟೋನ್ಮೆಂಟ್-ಮದುರೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 13:55/13:57 ಗಂಟೆಯ ಬದಲು 13:43/13:45 ಗಂಟೆಗೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಆಗಮಿಸಿ/ನಿರ್ಗಮಿಸಲಿದೆ.

III. ರೈಲುಗಳ ಸೇವೆ ವಿಸ್ತರಣೆ

ವಿಜಯಪುರ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07377/07378) ರೈಲುಗಳ ಸೇವೆಯನ್ನು ಈಗಿರುವ ಸಮಯ, ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಈ ಕೆಳಗಿನಂತೆ ವಿಸ್ತರಿಸಲಾಗುತ್ತಿದೆ.

1. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್ ಪ್ರೆಸ್ ಸ್ಪೆಷಲ್ ರೈಲನ್ನು 01.10.2024 ರಿಂದ 31.12.2024 ರವರೆಗೆ ವಿಸ್ತರಿಸಲಾಗುತ್ತಿದೆ. ಇದನ್ನು 30.09.2024 ರವರೆಗೆ ಓಡಿಸಲು ಮೊದಲೇ ತಿಳಿಸಲಾಗಿತ್ತು.

2. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಡೈಲಿ ಸ್ಪೆಷಲ್ ಎಕ್ಸ್ ಪ್ರೆಸ್ ರೈಲನ್ನು 02.10.2024 ರಿಂದ 01.01.2025 ರವರೆಗೆ ವಿಸ್ತರಿಸಲಾಗುತ್ತಿದೆ. ಇದನ್ನು 01.10.2024 ರವರೆಗೆ ಓಡಿಸಲು ಮೊದಲೇ ತಿಳಿಸಲಾಗಿತ್ತು.

ಮುಡಾ ಹಗರಣ: ಸಿಎಂ ಪತ್ನಿಗೆ 50:50 ಸೈಟ್ ಹಂಚಿಕೆ ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡ ‘ರಾಜ್ಯ ಸರ್ಕಾರ’

BREAKING: ‘ಶಿವಮೊಗ್ಗ ಜಿಲ್ಲೆ’ಯಾಧ್ಯಂತ ಗಣೇಶ, ಈದ್ ಮಿಲಾದ್ ಹಬ್ಬದ ವೇಳೆ ‘DJ ಬಳಕೆ’ಗೆ ನಿಷೇಧ ಹೇರಿ ‘DC ಆದೇಶ’

BIG NEWS : ಏನ್ರಿ ಮೀಡಿಯಾ?…ಎಂದಿದ್ದ ಕೊಲೆ ಆರೋಪಿ ನಟ ದರ್ಶನ್ ಗೆ ಜೈಲಿನಲ್ಲಿ ಟಿವಿ ಬೇಕೆ ಬೇಕಂತೆ!

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಇಂದು 17 ಜನರಿಗೆ ಕೊರೊನ ಸೋಂಕು ದೃಢ : ಕೋವಿಡ್ ಪ್ರಕರಣಗಳ ಸಂಖ್ಯೆ 442ಕ್ಕೆ ಏರಿಕೆ | Corona Case

01/06/2025 7:47 PM1 Min Read

BREAKING: ರಾಜ್ಯದಲ್ಲಿಂದು 17 ಜನರಿಗೆ ಕೊರೋನಾ: ಸಕ್ರೀಯ ಸೋಂಕಿತರ ಸಂಖ್ಯೆ 253ಕ್ಕೆ ಏರಿಕೆ | Karnataka Covid19 Update

01/06/2025 7:38 PM1 Min Read

CRIME NEWS: ಸಂಸಾರ ಸಾಗಿಸೋಕೆ ಸರಗಳ್ಳತಕ್ಕೆ ಇಳಿದಿದ್ದ ಪ್ರೇಮಿಗಳು ಅರೆಸ್ಟ್!

01/06/2025 7:29 PM1 Min Read
Recent News

BREAKING : ರಾಜ್ಯದಲ್ಲಿ ಇಂದು 17 ಜನರಿಗೆ ಕೊರೊನ ಸೋಂಕು ದೃಢ : ಕೋವಿಡ್ ಪ್ರಕರಣಗಳ ಸಂಖ್ಯೆ 442ಕ್ಕೆ ಏರಿಕೆ | Corona Case

01/06/2025 7:47 PM

BREAKING: ರಾಜ್ಯದಲ್ಲಿಂದು 17 ಜನರಿಗೆ ಕೊರೋನಾ: ಸಕ್ರೀಯ ಸೋಂಕಿತರ ಸಂಖ್ಯೆ 253ಕ್ಕೆ ಏರಿಕೆ | Karnataka Covid19 Update

01/06/2025 7:38 PM

CRIME NEWS: ಸಂಸಾರ ಸಾಗಿಸೋಕೆ ಸರಗಳ್ಳತಕ್ಕೆ ಇಳಿದಿದ್ದ ಪ್ರೇಮಿಗಳು ಅರೆಸ್ಟ್!

01/06/2025 7:29 PM

ಚಿಕ್ಕಮಗಳೂರು : ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪಿಕಪ್ ವಾಹನ : ಚಾಲಕ ಸೇರಿ ಇಬ್ಬರಿಗೆ ಗಾಯ

01/06/2025 7:10 PM
State News
KARNATAKA

BREAKING : ರಾಜ್ಯದಲ್ಲಿ ಇಂದು 17 ಜನರಿಗೆ ಕೊರೊನ ಸೋಂಕು ದೃಢ : ಕೋವಿಡ್ ಪ್ರಕರಣಗಳ ಸಂಖ್ಯೆ 442ಕ್ಕೆ ಏರಿಕೆ | Corona Case

By kannadanewsnow0501/06/2025 7:47 PM KARNATAKA 1 Min Read

ಬೆಂಗಳೂರು : ರಾಜ್ಯಕ್ಕೆ ಕೊರೋನಾ ರೂಪಾಂತರಿ ಎಂಟ್ರಿ ಆಗಿದ್ದು, ರಾಜ್ಯದಲ್ಲಿ ಇಂದು ಹೊಸದಾಗಿ 17 ಜನರಿಗೆ ಕೊರೋನಾ ಸೋಂಕು ದೃಢವಾಗಿದೆ.…

BREAKING: ರಾಜ್ಯದಲ್ಲಿಂದು 17 ಜನರಿಗೆ ಕೊರೋನಾ: ಸಕ್ರೀಯ ಸೋಂಕಿತರ ಸಂಖ್ಯೆ 253ಕ್ಕೆ ಏರಿಕೆ | Karnataka Covid19 Update

01/06/2025 7:38 PM

CRIME NEWS: ಸಂಸಾರ ಸಾಗಿಸೋಕೆ ಸರಗಳ್ಳತಕ್ಕೆ ಇಳಿದಿದ್ದ ಪ್ರೇಮಿಗಳು ಅರೆಸ್ಟ್!

01/06/2025 7:29 PM

ಚಿಕ್ಕಮಗಳೂರು : ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪಿಕಪ್ ವಾಹನ : ಚಾಲಕ ಸೇರಿ ಇಬ್ಬರಿಗೆ ಗಾಯ

01/06/2025 7:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.