ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ನೈಋತ್ಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಆಂಧ್ರ ಪ್ರದೇಶದ ವಿಶಾಖಪಟ್ಟಣಕ್ಕೆ ಒಂದು-ಮಾರ್ಗದ ವಿಶೇಷ ರೈಲು ಸೇವೆಯನ್ನು ಓಡಿಸಲಿದೆ.
ರೈಲು ಸಂಖ್ಯೆ 08544 ಅಕ್ಟೋಬರ್ 22, 2025 ರಂದು ಮಧ್ಯಾಹ್ನ 3:50ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡಲಿದೆ. ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೋಲಾರ್‌ಪೇಟೆ, ಕಾಟ್ಪಾಡಿ, ರೇಣಿಗುಂಟ, ಗೂಡೂರು, ನೆಲ್ಲೂರು, ಗುಡಿವಾಡ, ಕೈಕಲೂರು, ಆಕಿವಿಡು, ಭೀಮಾವರಂ, ತನುಕು, ನಿಡದವೋಲು, ರಾಜಮಂಡ್ರಿ, ಸಾಮಲಕೋಟ, ಎಲಮಂಚಿಲಿ ಮತ್ತು ದುವ್ವಾಡ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿ, ಅಕ್ಟೋಬರ್ 23, 2025 ರಂದು ಮಧ್ಯಾಹ್ನ 1:30ಕ್ಕೆ ವಿಶಾಖಪಟ್ಟಣಂ ನಿಲ್ದಾಣವನ್ನು ತಲುಪಲಿದೆ.
ದೀಪಾವಳಿಗೆ ಉದ್ಯೋಗಿಗಳಿಗೆ 51 ಹೊಚ್ಚ ಹೊಸ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಉದ್ಯಮಿ!