Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘RAC’ ಅಡಿಯಲ್ಲಿ ಪೂರ್ಣ ಸೀಟ್ ಸಿಗದ ರೈಲು ಪ್ರಯಾಣಿಕರಿಗೆ ಅರ್ಧ ಶುಲ್ಕ ಮರುಪಾವತಿಸಿ : ಸಂಸದೀಯ ಸಮಿತಿ

05/02/2026 8:36 PM

“ಮಹಾತ್ಮ ಗಾಂಧಿಯವರ ಉಪನಾಮವನ್ನೂ ಕದ್ದಿದ್ದಾರೆ” : ರಾಜ್ಯಸಭೆಯಲ್ಲಿ ‘ಪ್ರಧಾನಿ ಮೋದಿ’ ಭಾಷಣದ ಮುಖ್ಯಾಂಶಗಳು ಇಲ್ಲಿವೆ!

05/02/2026 7:59 PM

ಶುಕ್ರವಾರದಿಂದು ಸಂಜೆ ಈ ಕುಬೇರ ಮಂತ್ರ ಪಠಿಸಿ: ಹಣ, ಯಶಸ್ಸು ಗ್ಯಾರಂಟಿ

05/02/2026 7:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಯಶವಂತಪುರ-ಯೋಗ ನಗರಿ ರಿಷಿಕೇಶ ನಡುವೆ ವಿಶೇಷ ಎಕ್ಸ್ ಪ್ರೇಸ್ ರೈಲು ಸಂಚಾರ
KARNATAKA

ಬೆಂಗಳೂರಿನ ಯಶವಂತಪುರ-ಯೋಗ ನಗರಿ ರಿಷಿಕೇಶ ನಡುವೆ ವಿಶೇಷ ಎಕ್ಸ್ ಪ್ರೇಸ್ ರೈಲು ಸಂಚಾರ

By kannadanewsnow0911/06/2025 4:00 PM

ಬೆಂಗಳೂರು: ಪ್ರಯಾಣಿಕರ ಹೆಚ್ಚಿದ ಬೇಡಿಕೆ ಮತ್ತು ಮುಂಬರುವ ದಿನಗಳಲ್ಲಿ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು, ರೈಲ್ವೆ ಮಂಡಳಿಯು ಯಶವಂತಪುರ – ಯೋಗ ನಗರಿ ರಿಷಿಕೇಶ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06597/06598) ರೈಲುಗಳ ಕಾರ್ಯಾಚರಣೆಗೆ ಅನುಮೋದನೆ ನೀಡಿದೆ. ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಮತ್ತು ದಕ್ಷಿಣ ಹಾಗೂ ಉತ್ತರ ಭಾರತದ ನಡುವಿನ ದೂರ ಪ್ರಯಾಣದ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಯಶವಂತಪುರ – ಯೋಗ ನಗರಿ ರಿಷಿಕೇಶ ಎಕ್ಸ್‌ಪ್ರೆಸ್ ವಿಶೇಷ ರೈಲು ವಿವರಗಳು:

ರೈಲು ಸಂಖ್ಯೆ 06597 ಯಶವಂತಪುರ – ಯೋಗ ನಗರಿ ರಿಷಿಕೇಶ ವಿಶೇಷ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ ಪ್ರತಿ ಗುರುವಾರ ಬೆಳಿಗ್ಗೆ 07:00 ಗಂಟೆಗೆ 19.06.2025, 26.06.2025 ಮತ್ತು 03.07.2025 ರಂದು ಹೊರಟು, ಶನಿವಾರ ಬೆಳಿಗ್ಗೆ 10:20 ಗಂಟೆಗೆ ಯೋಗ ನಗರಿ ರಿಷಿಕೇಶ ತಲುಪಲಿದೆ.

ರೈಲು ಸಂಖ್ಯೆ 06598 ಯೋಗ ನಗರಿ ರಿಷಿಕೇಶ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಯೋಗ ನಗರಿ ರಿಷಿಕೇಶದಿಂದ ಪ್ರತಿ ಶನಿವಾರ ಸಂಜೆ 05:55 ಗಂಟೆಗೆ 21.06.2025, 28.06.2025 ಮತ್ತು 05.07.2025 ರಂದು ಹೊರಟು, ಸೋಮವಾರ ಸಂಜೆ 07:45 ಗಂಟೆಗೆ ಯಶವಂತಪುರ ಆಗಮಿಸಲಿದೆ.

ಈ ರೈಲು ಎರಡೂ ಮಾರ್ಗಗಳಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಧೋಣ, ಕರ್ನೂಲ್ ಸಿಟಿ, ಕಾಚಿಗೂಡ, ಕಾಜಿಪೇಟ್, ಬಲ್ಹರ್ಷಾ, ನಾಗ್ಪುರ, ಭೋಪಾಲ್, ಬೀನಾ, ವೀರಂಗನಾ ಲಕ್ಷ್ಮೀಬಾಯಿ ಝಾನ್ಸಿ ರೈಲು ನಿಲ್ದಾಣ, ಗ್ವಾಲಿಯರ್, ಆಗ್ರಾ ಕ್ಯಾಂಟ್, ಮಥುರಾ, ಹಜರತ್ ನಿಜಾಮುದ್ದೀನ್, ಗಾಜಿಯಾಬಾದ್, ಮಿರುತ್ ಸಿಟಿ, ಮುಜಾಫರನಗರ್, ತಾಪರಿ, ರೂರ್ಕಿ ಮತ್ತು ಹರಿದ್ವಾರ ಜಂಕ್ಷನ್‌ಗಳಲ್ಲಿ ನಿಲುಗಡೆಗೊಳ್ಳಲಿದೆ.

ಈ ವಿಶೇಷ ರೈಲು 18 ಬೋಗಿಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ: 1 ಎಸಿ ಫಸ್ಟ್ ಕಮ್ ಎಸಿ ಟು-ಟೈರ್, 1 ಎಸಿ ಟು ಟೈರ್, 3 ಎಸಿ ತ್ರಿ ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್/ಡಿ ಬೋಗಿಗಳು ಇರಲಿವೆ.

ಈ ರೈಲುಗಳ ಸೇವೆಯು ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ ಮತ್ತು ಬೆಂಗಳೂರು ಪ್ರದೇಶ ಹಾಗೂ ಉತ್ತರಾಖಂಡದ ನಡುವೆ ಮೊದಲ ನೇರ ರೈಲು ಸಂಪರ್ಕವನ್ನು ಕಲ್ಪಿಸಿದೆ. ಇದರಿಂದಾಗಿ ಬಹು ರಾಜ್ಯಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹಿಮಾಲಯದ ತಪ್ಪಲಿನಲ್ಲಿ ಗಂಗಾ ನದಿಯ ದಡದಲ್ಲಿ ನೆಲೆಗೊಂಡಿರುವ ಯೋಗ ನಗರಿ ರಿಷಿಕೇಶ, ಆಧ್ಯಾತ್ಮಿಕ ಮತ್ತು ಯೋಗ ಚಿಕಿತ್ಸೆಯ ತಾಣವಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ‘ಯೋಗದ ವಿಶ್ವ ರಾಜಧಾನಿ’ ಎಂದು ಹೆಸರಾಗಿರುವ ಈ ನಗರವು ಪ್ರಪಂಚದಾದ್ಯಂತ ಯಾತ್ರಾರ್ಥಿಗಳು, ಆಧ್ಯಾತ್ಮಿಕ ಅನ್ವೇಷಕರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಉತ್ತರಾಖಂಡದ ಚಾರ್ ಧಾಮ್ ಯಾತ್ರೆಗೆ ಪ್ರಮುಖ ಹೆಬ್ಬಾಗಿಲು ಕೂಡ ಆಗಿದೆ.

BIG NEWS: ಇಂದಿಗೆ ರಾಜ್ಯದಲ್ಲಿ ‘ಶಕ್ತಿ ಯೋಜನೆ’ ಜಾರಿಯಾಗಿ 2 ವರ್ಷ: ಉಚಿತವಾಗಿ ಸಾರಿಗೆ ಬಸ್ಸಲ್ಲಿ ಪ್ರಯಾಣಿಸಿದ ಮಹಿಳೆಯರೆಷ್ಟು ಗೊತ್ತಾ?

BIG NEWS : ಪ್ರಧಾನಿ ಮೋದಿಯಿಂದ ದೇಶದ ಬಡತನ ಕಡಿಮೆಯಾಗಿಲ್ಲ : CM ಸಿದ್ದರಾಮಯ್ಯ ವಾಗ್ದಾಳಿ

Share. Facebook Twitter LinkedIn WhatsApp Email

Related Posts

ಶುಕ್ರವಾರದಿಂದು ಸಂಜೆ ಈ ಕುಬೇರ ಮಂತ್ರ ಪಠಿಸಿ: ಹಣ, ಯಶಸ್ಸು ಗ್ಯಾರಂಟಿ

05/02/2026 7:42 PM3 Mins Read

ಕರ್ನಾಟಕ ಮಾಹಿತಿ ಆಯೋಗದಿಂದ 1 ವರ್ಷದಲ್ಲಿ 36474 ಮೇಲ್ಮನವಿಗಳ ವಿಲೇವಾರಿ: ಮಾಹಿತಿ ನೀಡದ ಅಧಿಕಾರಿಗಳಿಗೆ 45.29 ಲಕ್ಷ ದಂಡ

05/02/2026 7:32 PM3 Mins Read

2026ನೇ ಸಾಲಿನ ರಾಜ್ಯ ಮಟ್ಟ ಹಾಗೂ ಶಿವಮೊಗ್ಗ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

05/02/2026 7:18 PM1 Min Read
Recent News

‘RAC’ ಅಡಿಯಲ್ಲಿ ಪೂರ್ಣ ಸೀಟ್ ಸಿಗದ ರೈಲು ಪ್ರಯಾಣಿಕರಿಗೆ ಅರ್ಧ ಶುಲ್ಕ ಮರುಪಾವತಿಸಿ : ಸಂಸದೀಯ ಸಮಿತಿ

05/02/2026 8:36 PM

“ಮಹಾತ್ಮ ಗಾಂಧಿಯವರ ಉಪನಾಮವನ್ನೂ ಕದ್ದಿದ್ದಾರೆ” : ರಾಜ್ಯಸಭೆಯಲ್ಲಿ ‘ಪ್ರಧಾನಿ ಮೋದಿ’ ಭಾಷಣದ ಮುಖ್ಯಾಂಶಗಳು ಇಲ್ಲಿವೆ!

05/02/2026 7:59 PM

ಶುಕ್ರವಾರದಿಂದು ಸಂಜೆ ಈ ಕುಬೇರ ಮಂತ್ರ ಪಠಿಸಿ: ಹಣ, ಯಶಸ್ಸು ಗ್ಯಾರಂಟಿ

05/02/2026 7:42 PM

ಕರ್ನಾಟಕ ಮಾಹಿತಿ ಆಯೋಗದಿಂದ 1 ವರ್ಷದಲ್ಲಿ 36474 ಮೇಲ್ಮನವಿಗಳ ವಿಲೇವಾರಿ: ಮಾಹಿತಿ ನೀಡದ ಅಧಿಕಾರಿಗಳಿಗೆ 45.29 ಲಕ್ಷ ದಂಡ

05/02/2026 7:32 PM
State News
KARNATAKA

ಶುಕ್ರವಾರದಿಂದು ಸಂಜೆ ಈ ಕುಬೇರ ಮಂತ್ರ ಪಠಿಸಿ: ಹಣ, ಯಶಸ್ಸು ಗ್ಯಾರಂಟಿ

By kannadanewsnow0905/02/2026 7:42 PM KARNATAKA 3 Mins Read

ಮಾರ್ವಾಡಿಗಳು ಈ ಲಕ್ಷ್ಮೀ ಕುಬೇರ ಪೂಜೆಯನ್ನು ಬಹಳ ವಿಮರ್ಶಾತ್ಮಕವಾಗಿ ನೆರವೇರಿಸುತ್ತಾರೆ. ನಮ್ಮ ಮನೆಯಲ್ಲಿ ಲಕ್ಷ್ಮೀ ಕುಬೇರ ಪೂಜೆಯನ್ನು ಅತ್ಯಂತ ವಿಮರ್ಶಾತ್ಮಕವಾಗಿ…

ಕರ್ನಾಟಕ ಮಾಹಿತಿ ಆಯೋಗದಿಂದ 1 ವರ್ಷದಲ್ಲಿ 36474 ಮೇಲ್ಮನವಿಗಳ ವಿಲೇವಾರಿ: ಮಾಹಿತಿ ನೀಡದ ಅಧಿಕಾರಿಗಳಿಗೆ 45.29 ಲಕ್ಷ ದಂಡ

05/02/2026 7:32 PM

2026ನೇ ಸಾಲಿನ ರಾಜ್ಯ ಮಟ್ಟ ಹಾಗೂ ಶಿವಮೊಗ್ಗ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

05/02/2026 7:18 PM

ಬೆಂಗಳೂರು ಜನತೆ ಗಮನಕ್ಕೆ: ಫೆ.7ರ ಶನಿವಾರದಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

05/02/2026 6:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.