ಮಂಗಳೂರು: ಮಂಗಳೂರಿನಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥವನ್ನು ವಿಧಾನಸಭೆಯ ಸಭಾಧ್ಯಕ್ಷರಾದಂತ ಯು.ಟಿ.ಖಾದರ್ ಉದ್ಘಾಟಿಸಿದರು. ಈ ವೇಳೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತರಿದ್ದರು.
ದಿನೇ ದಿನೇ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಹಿನ್ನೆಲೆಯಲ್ಲಿ ಸಮರ್ಪಕ ಹಾಗೂ ವೈಜ್ಞಾನಿಕವಾಗಿ ಚಾಲನಾ ನೈಪುಣ್ಯತೆಯನ್ನು ಪರೀಕ್ಷಿಸುವುದು ಪ್ರಸ್ತುತ ಅನಿವಾರ್ಯವಾಗಿದೆ. ಆದ್ದರಿಂದ ರಾಜ್ಯದ ಸಾರಿಗೆ ಇಲಾಖೆಯ ಪ್ರತಿಯೊಂದು ಅಧೀನ ಕಛೇರಿಗಳಿಗೂ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಿಸುವ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಜ್ಞಾನಭಾರತಿ, ಎಲೆಕ್ಟ್ರಾನಿಕ್ ಸಿಟಿ, ಮೈಸೂರು, ಕಲಬುರಗಿ, ಧಾರವಾಡ, ಶಿವಮೊಗ್ಗ, ಮತ್ತು ಹಾಸನ ಕಛೇರಿಗಳ ವ್ಯಾಪ್ತಿಯಲ್ಲಿ ರೂ.31.21 ಕೋಟಿಗಳ ವೆಚ್ಚದಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲಾಗಿದೆ.
ಈಗಾಗಲೇ ಪ್ರಾದೇಶಿಕ/ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ:
ಒಟ್ಟು ರೂ.36.00 ಕೋಟಿ ವೆಚ್ಚದಲ್ಲಿ ಧಾರವಾಡ ಪೂರ್ವ, ಕೊಪ್ಪಳ, ಚಿಂತಾಮಣಿ, ಶಿರಸಿ, ದಾಂಡೇಲಿ, ಭಾಲ್ಕಿ, ಪ್ರಾದೇಶಿಕ ಸಾರಿಗೆ ಕಛೇರಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು, ರೂ. 42.00 ಕೋಟಿ ವೆಚ್ಚದಲ್ಲಿ ಬೀದರ್, ಕಲಬುರಗಿ, ಯಾದಗಿರಿ, ಚಂದಾಪುರ, ಕೆ.ಜಿ.ಎಫ್. ಮತ್ತು ಬೆಳಗಾವಿ ಪ್ರಾದೇಶಿಕ ಸಾರಿಗೆ ಕಛೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದೆ.
ರೂ. 28.00 ಕೋಟಿ ವೆಚ್ಚದಲ್ಲಿ ಕೈಗೊಳಲಾಗಿರುವ ರಾಣಿ ಬೆನ್ನೂರು, ಗೋಕಾಕ್, ಸಕಲೇಶಪುರ ಕಛೇರಿ ಕಟ್ಟಡ ಕಾಮಗಾರಿಗಳು ಪಗತಿಯಲ್ಲಿದ್ದು, ಮಧುಗಿರಿ ಮತ್ತು ಹೊನ್ನಾವರ ಕಛೇರಿ ಕಟ್ಟಡದ ಕಾಮಗಾರಿಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.
2. ಸ್ವಯಂ ಚಾಲಿತ ಪರೀಕ್ಷಾ ಪಥಗಳ ನಿರ್ಮಾಣ ಕಾಮಗಾರಿ:
ಇದೇ ಮಾದರಿಯಲ್ಲಿ ಪ್ರಸ್ತುತ ಮಂಗಳೂರಿನಲ್ಲಿ ರೂ.7.5 ಕೋಟಿಗಳ ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಿಸಲಾಗಿದ್ದು, ಬೆಳಗಾವಿ ಮತ್ತು ರಾಯಚೂರುಗಳಲ್ಲಿ ರೂ.16.00 ಕೋಟಿಗಳ ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲಾಗಿದ್ದು, ಸದರಿ ಪಥಗಳಲ್ಲಿ ಸೆನ್ಸಾರ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಅವುಗಳನ್ನು ಸಹ ಉದ್ಘಾಟಿಸಲಾಗುವುದು.
* ರೂ.80.00 ಕೋಟಿಗಳ ವೆಚ್ಚದಲ್ಲಿ ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ. ವಿಜಯಪುರ, ಬೀದರ್, ಯಾದಗಿರಿ, ದಾವಣಗೆರೆಗಳಲ್ಲಿ ಡ್ರೈವಿಂಗ್ ಟ್ರ್ಯಾಕ್ ಗಳನ್ನು ನಿರ್ಮಿಸಲಾಗುತ್ತಿದೆ.
* ರೂ.71.00 ಕೋಟಿಗಳ ವೆಚ್ಚದಲ್ಲಿ ನಾಗಮಂಗಲ, ಯಲಹಂಕ, ಶಿರಸಿ, ಸಕಲೇಶಪುರ, ಕೆ.ಜಿ.ಎಫ್. ಚಿಂತಾಮಣಿ, ಸಾಗರ, ಗೋಕಾಕ್, ರಾಣೆಬೆನ್ನೂರು, ದಾಂಡೇಲಿ, ಭಾಲ್ಕಿ ಮತ್ತು ಬೈಲಹೊಂಗಲಗಳಲ್ಲಿ ಡ್ರೈವಿಂಗ್ ಟ್ರ್ಯಾಕ್ ಗಳನ್ನು ನಿರ್ಮಿಸುವ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ.
* ರಸ್ತೆ ಸುರಕ್ಷತಾ ನಿಧಿಯನ್ನು ಬಳಸಿಕೊಂಡು ರೂ.57.00 ಕೋಟಿಗಳ ವೆಚ್ಚದಲ್ಲಿ ಪುತ್ತೂರು, ನೆಲಮಂಗಲ, ಚಿಕ್ಕಬಳ್ಳಾಪುರ, ಮಡಿಕೇರಿ, ಮಧುಗಿರಿ ಮತ್ತು ಹುಣಸೂರು ಹೊನ್ನಾವರ ಚಾಮರಾಜನಗರ ಮತ್ತು ಚಿತ್ರದುರ್ಗದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲು ಕ್ರಮವಹಿಸಲಾಗುವುದು.
3. ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕ್ರಮ:
ರಾಜ್ಯದಲ್ಲಿ ಜಿಲ್ಲೆಗೆ ಒಂದರಂತೆ ಪಿ.ಪಿ.ಪಿ. ಅಡಿ 32 ಸ್ಥಳಗಳಲ್ಲಿ ದೇವನಹಳ್ಳಿ(ಬೆಂಗಳೂರು), ಶಿವಮೊಗ್ಗ, ಕೋಲಾರ, ಬಾಗಲಕೋಟೆ, ಗದಗ, ಬೆಳಗಾವಿ, ವಿಜಯಪುರ, ಯಾದಗಿರಿ, ಬಳ್ಳಾರಿ, ಬೀದರ್, ರಾಣೆಬೆನ್ನೂರು(ಹಾವೇರಿ), ದಾವಣಗೆರೆಗಳಲ್ಲಿ, ಬೆಂಗಳೂರು (ಕೇಂದ್ರ, ಪಶ್ಚಿಮ, ಪೂರ್ವ, ದಕ್ಷಿಣ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಾಮರಾಜನಗರ, ಹಾಸನ, ಮಡಿಕೇರಿ, ದಕ್ಷಿಣಕನ್ನಡ, ಉಡುಪಿ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಹೊಸಪೇಟೆಗಳಲ್ಲಿ) ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!