ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವೈದ್ಯಕೀಯ ಶಾಖೆಯು ಬೆಂಗಳೂರಿನ ಅನುಗ್ರಹ ಸಮುದಾಯ ಕೇಂದ್ರದಲ್ಲಿ ಇಂದು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಈ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮವನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್ ಉದ್ಘಾಟಿಸಿದರು. ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಒಬ್ಬ ದಾನಿಯ ಒಂದು ಯೂನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು ಎಂದು ಹೇಳಿದರು.
ಮುಖ್ಯ ವೈದ್ಯಕೀಯ ಅಧೀಕ್ಷಕಿ ಡಾ.ಪ್ರಭಾವತಿ ಗಜಲಕ್ಷ್ಮಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸ್ವಯಂಪ್ರೇರಿತ ರಕ್ತದಾನದ ಮಹತ್ವ, ಅದರ ಆವರ್ತನ, ಅರ್ಹ ದಾನಿಗಳು, ರಕ್ತದಾನದಿಂದ ದಾನಿಗೆ ಮತ್ತು ಸಮಾಜಕ್ಕೆ ಆಗುವ ಅನುಕೂಲಗಳನ್ನು ಕುರಿತು ವಿವರಿಸಿದರು.
ಲೂಯಿಸ್ ಅಮುಯಿಥನ್, ಡಿಐಜಿ/ರೈಲ್ವೆ ಸುರಕ್ಷತಾ ಪಡೆ/ನೈಋತ್ಯ ರೈಲ್ವೆ, ಶ್ರೇಯಾಂಸ್ ಚಿಂಚ್‌ವಾಡೆ, ಹಿರಿಯ ವಿಭಾಗೀಯ ಭದ್ರತಾ ಆಯುಕ್ತ (RPF), ಡಾ. ಸಿದ್ದಪ್ಪ ದಿಂಡಾವರ್, ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕರು, ಡಾ.ವಿಶ್ವನಾಥ್, ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕರು, ಕೇಶವುಲು, ಸಹಾಯಕ ಸಿಬ್ಬಂದಿ ಅಧಿಕಾರಿ/ಬೆಂಗಳೂರು, ಇತರ ವೈದ್ಯಾಧಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ರಕ್ತದಾನ ಅಭಿಯಾನದಲ್ಲಿ 50ಕ್ಕೂ ಹೆಚ್ಚು ರೈಲ್ವೆ ಅಧಿಕಾರಿಗಳು ಮತ್ತುಸಿಬ್ಬಂದಿ ರಕ್ತದಾನ ಮಾಡಿದರು.
SHOCKING :` ಚಿಕನ್’ ಬೇಕು ಎಂದ ಹೆತ್ತ ಮಗನನ್ನೇ ಲಟ್ಟಣಿಗೆಯಿಂದ ಹೊಡೆದು ಕೊಂದ ಪಾಪಿ ತಾಯಿ.!