ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಈ ಪರಿಣಾಮ ಬೆಂಗಳೂರು ಸಹಿತ ರಾಜ್ಯಾಧ್ಯಂತ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಐದು ದಿನ ಭಾರೀ ಮಳೆಯಾಗಲಿದೆ ( Heavy Rain ) ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

10 ಲಕ್ಷ ಯುವಜನರಿಗೆ ಕೌಶಲ್ಯ ತರಬೇತಿ – ಸಚಿವ ಅಶ್ವತ್ಥನಾರಾಯಣ

ಈ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿರುವಂತ ಹವಾಮಾನ ಇಲಾಖೆಯೂ ನೈರುತ್ಯ ಮುಂಗಾರು ಚುರುಕುಗೊಂಡಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಐದು ದಿನ ಮಳೆಯಾಗಲಿದೆ ಎಂದು ತಿಳಿಸಿದೆ.

BIGG NEWS : ಹೆಸ್ಕಾಂ ಗ್ರಾಹಕರೇ ಗಮನಿಸಿ : ಸೈಬರ್ ವಂಚಕರ ನಕಲಿ ಸಂದೇಶಗಳಿಂದ ಜಾಗೃತರಾಗಲು ಹೆಸ್ಕಾಂ ಮನವಿ

ಇನ್ನೂ ಕರಾವಳಿ, ಉತ್ತರ ಒನಾಡು, ದಕ್ಷಿಣ ಒಳನಾಡಿನಲ್ಲಿಯೂ ಮಳೆಯ ಮುನ್ಸೂಚನೆಯ ಅಲರ್ಟ್ ಘೋಷಿಸಿದೆ. ಅಲ್ಲದೇ ಕೆಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಮುನ್ಸೂಚನೆ ನೀಡಿದೆ.

BIGG NEWS : ಹೆಸ್ಕಾಂ ಗ್ರಾಹಕರೇ ಗಮನಿಸಿ : ಸೈಬರ್ ವಂಚಕರ ನಕಲಿ ಸಂದೇಶಗಳಿಂದ ಜಾಗೃತರಾಗಲು ಹೆಸ್ಕಾಂ ಮನವಿ

ಮತ್ತೊಂದೆಡೆ ಬೆಂಗಳೂರಿನಲ್ಲಿ ಗಾಳಿ ಸಹಿತ ಭಾರೀ ಮಳೆ ಇದೀಗ ಸುರಿಯುತ್ತಿದೆ. ತ್ಯಾಗರಾಜನಗರ, ಬಸವನಗುಡಿ, ಬನಶಂಕರಿ, ಕಾರ್ಪೋರೇಷನ್, ಕೆ ಆರ್ ಮಾರ್ಕೆಟ್, ಮೈಸೂರು ಬ್ಯಾಂಕ್ ಸರ್ಕಲ್ ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ಶಾಂತಿನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ವಾಹನ ಸವಾರರ ಪರದಾಡುವಂತೆ ಆಗಿದೆ. ಅಲ್ಲದೇ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.

Share.
Exit mobile version