ಶಿವಮೊಗ್ಗ: ನಿಮ್ಮ ಕನ್ನಡ ನ್ಯೂಸ್ ನೌ ಕಳೆದ ಎರಡು ದಿನಗಳ ಹಿಂದೆ ಶಿವಮೊಗ್ಗ: ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ’ನಿಂದ ‘ಮಹಿಳಾ ಪೌರ ಕಾರ್ಮಿಕ’ರ ಮೇಲೆ ಹಲ್ಲೆ ಎಂಬುದಾಗಿ ಸುದ್ದಿಯನ್ನು ಪ್ರಕಟಿಸಿತ್ತು. ಈ ವಿಷಯವನ್ನು ಇಂದಿನ ನಗರಸಭೆಯ ವಿಶೇಷ ಸಭೆಯಲ್ಲಿ ವಿಪಕ್ಷಗಳ ಮುಖಂಡರು ಪ್ರಸ್ತಾಪಿಸಿ, ಕ್ರಮಕ್ಕೂ ಆಗ್ರಹಿಸಿದರು. ಕೊನೆಗೆ ಮೇಸ್ತ್ರಿ ನಾಗರಾಜ ವಿರುದ್ಧ ಕಾನೂನು ಕ್ರಮದ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆಯ ಮೇಸ್ತ್ರಿ ನಾಗರಾಜ ಎಂಬುವರು ಮಹಿಳಾ ಪೌರ ಕಾರ್ಮಿಕರೊಬ್ಬರ ಮೇಲೆ ಹಲ್ಲೆ ನಡೆಸಿ, ಗೂಂಡಾಗಿರಿ ಪ್ರದರ್ಶನ ಮಾಡಿದ್ದರು. ಇಂದು ಸಾಗರ ನಗರಸಭೆಯ ವಿಶೇಷ ಸಭೆ ಆರಂಭಗೊಂಡ ನಂತ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಈ ಬಳಿಕ ನಡೆದಂತ ನಗರಸಭೆಯ ವಿಶೇಷ ಸಭೆಯಲ್ಲಿ ನಿಲುವಳಿಗಳನ್ನು ಮಂಡಿಸೋ ಮುನ್ನವೇ, ಮಾಜಿ ಅಧ್ಯಕ್ಷರಾದ ಲಲಿತಮ್ಮ ಅವರು ಎದ್ದು ನಿಂತು, ಮಹಿಳಾ ಪೌರ ಕಾರ್ಮಿಕರ ಮೇಲೆ ಮೇಸ್ತ್ರಿಯೊಬ್ಬರು ಹಲ್ಲೆ ನಡೆಸಿರುವಂತ ವಿಷಯ ತಿಳಿದು ಬಂದಿದೆ. ಇದು ಖಂಡನೀಯ. ಕೂಡಲೇ ಮೇಸ್ತ್ರಿ ನಾಗರಾಜನ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪ ವಿಭಾಗಾಧಿಕಾರಿ, ಆಯುಕ್ತರು, ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದಂತ ಸಾಗರ ಸಭೆ ಸದಸ್ಯರು ಮತ್ತು ಆರೋಗ್ಯ ಸಮಿತಿಯ ಸದಸ್ಯರಾದ ಮಧುಮಾಲತಿ ಅವರು ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದಂತ ಮೇಸ್ತ್ರಿ ನಾಗರಾಜನನ್ನು ಸಭೆಗೆ ಕರೆಸಬೇಕು. ಇಲ್ಲಿಯೇ ಛೀಮಾರಿ ಹಾಕಬೇಕು. ಇಲ್ಲದಿದ್ದರೇ ನಗರಸಭೆಯ ಸದಸ್ಯರಾದ ನಾವು ಸುಮ್ಮನಿರುವುದಿಲ್ಲ ಅಂತ ಆಕ್ರೋಶ ವ್ಯಕ್ತ ಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದಂತ ಉಪ ವಿಭಾಗಾಧಿಕಾರಿ ಯತೀಶ್ ಎಸ್ ಅವರು, ಈಗಾಗಲೇ ನಗರಸಭೆಯ ವಿಶೇಷ ಸಭೆ ಆರಂಭಕ್ಕೂ ಮುನ್ನವೇ ಈ ವಿಷಯವನ್ನು ಚರ್ಚಿಸಲಾಗಿದೆ. ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ ಮಾಡಿದಂತ ಮೇಸ್ತ್ರಿ ನಾಗರಾಜ ವಿರುದ್ಧ ಕ್ರಮ ಕೈಗೊಳ್ಳುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದೀಗ ಈ ಸಭೆಯ ಮೂಲಕ ಆ ನಿರ್ಧಾರವನ್ನು ಅಂಗೀಕರಿಸಲಾಗುತ್ತಿದೆ ಎಂಬುದಾಗಿ ಸ್ಪಷ್ಟಪಡಿಸಿದರು.

ಒಟ್ಟಾರೆಯಾಗಿ ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಗೂಂಡಾಗಿರಿ ವರ್ತನೆ ತೋರಿದಂತ ಸಾಗರ ನಗರಸಭೆ ಮೇಸ್ತ್ರಿ ನಾಗರಾಜ ವಿರುದ್ಧ ಇಂದಿನ ನಗರಸಭೆಯ ವಿಶೇಷ ಸಭೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಮೂಲಕ ಮೇಸ್ತ್ರಿ ನಾಗರಾಜನಿಗೆ ಬಿಸಿ ಮುಟ್ಟಿಸಲಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಹಿಂದೂ ವಿರೋಧಿ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ ರಾಹುಲ್ ಗಾಂಧಿ

BREAKING: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕಾರ | Hemant Soren Takes Oath

Share.
Exit mobile version