ಬೆಂಗಳೂರು: ಇಂದಿನಿಂದ ಬೆಂಗಳೂರಲ್ಲಿ ದಕ್ಷಿಣ ಭಾರತದ ಮೊದಲ ಡಬ್ಬಲ್ ಡೆಕ್ಕರ್ ಫ್ಲೈ ಓವರ್ ಸಂಚಾರಕ್ಕೆ ಮುಕ್ತಗೊಂಡಿದೆ. ಪ್ರಾಯೋಗಿಕ ಸಂಚಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಹೀಗಾಗಿ ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಉಂಟಾಗುತ್ತಿದ್ದಂತ ಟ್ರಾಫಿಕ್ ಜಾಮ್ ಗೆ ಮುಕ್ತಿ ಸಿಕ್ಕಂತೆ ಆಗಿದೆ.
ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ವರೆಗೆ ನಿರ್ಮಿಸಲಾಗಿದ್ದಂತ ಸುಮಾರು 3.6 ಕಿಲೋಮೀಟರ್ ಉದ್ದದ ಡಬ್ಬಲ್ ಡೆಕ್ಕರ್ ಫ್ಲೈಓವರ್ ಗೆ ಪ್ರಾಯೋಗಿಕ ಸಂಚಾರಕ್ಕೆ ಉದ್ಘಾಟನೆಯ ಮೂಲಕ ಅವಕಾಶ ಮಾಡಿಕೊಟ್ಟಿದ್ದಾರೆ.
ಈ 2 ಲೆವೆಲ್ ಫ್ಲೈಓವರ್ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಅಲ್ಲದೇ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಅನ್ನುವಂತ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದನ್ನು ಥ್ರೀ ಟಿಯರ್ ಫ್ಲೆಓವರ್ ಅಂತನೂ ಕರೆಯುತ್ತಾರೆ.
ಅಂದಹಾಗೇ ಫ್ಲೈಓವರ್ ಕೆಳಭಾಗದಲ್ಲಿ ವಾಹನಗಳು ಓಡಾಡಿದ್ರೇ, ನಡುವಿನ ಫ್ಲೈಓವರ್ ರಸ್ತೆಯಲ್ಲಿ ಸಿಗ್ನಲ್ ಮುಕ್ತವಾಗಿ, ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ವಾಹನಗಳು ಸಂಚರಿಸೋದಕ್ಕೆ ಆವಕಾಶವಿದೆ.
ಇನ್ನೂ ಫ್ಲೈಓವರ್ ಮೇಲಿನ ಮೂರನೇ ಸ್ಥರದಲ್ಲಿ ನಮ್ಮ ಮೆಟ್ರೋ ರೈಲು ಸಂಚರಿಸಲಿದೆ. ಈ ಮೇಲ್ಸೇತುವೆ ನಾಲ್ಕು ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ಈ ಹಳದಿ ಬಣ್ಣ ಮೆಟ್ರೋ ರೈಲು ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಮೇಲ್ ಸೇತುವೆಯಲ್ಲಿ ಸಂಚಾರ ನಡೆಸಲಿದೆ. ಒಟ್ಟಾರೆಯಾಗಿ ಡಬ್ಬಲ್ ಡೆಕ್ಕರ್ ಫ್ಲೈಓವರ್ ಬೆಂಗಳೂರಲ್ಲಿ ಮೊದಲನೇಯದು ಆದ್ರೇ, ದಕ್ಷಿಣ ಭಾರತದಲ್ಲೇ ಮೊದಲ ಭಾರಿಗೆ ನಿರ್ಮಿಸಿದಂತ ಮೇಲ್ಸೇತುವೆ ಎನಿಸಿಕೊಂಡಿದೆ.
ಕಳೆದ ಏಳು ವರ್ಷಗಳಲ್ಲಿ ‘ಆಪರೇಷನ್ ನನ್ಹೆ ಫರಿಷ್ತೆ’ ಅಡಿಯಲ್ಲಿ 84,119 ಮಕ್ಕಳನ್ನು ರಕ್ಷಿಸಿದ ‘RPF’
ವಯಸ್ಸಾದ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ವಿರುದ್ಧ MRNA-HPV ಲಸಿಕೆ ಬಳಸಲು ಸರ್ಕಾರ ಪರಿಗಣನೆ ?