ಬೆಂಗಳೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಸ್ಪರ್ಧಿ ಸೌಮ್ಯ ಬೇರೆಯಲ್ಲ. ನನ್ನ ಮಗಳು ಐಶ್ವರ್ಯ ಬೇರೆಯಲ್ಲ ಎಂಬುದಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾ Rallyಯಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರವಾಗಿ ಮತ ಯಾಚಿಸಿದರು.
ಸೌಮ್ಯ ರೆಡ್ಡಿ ನಾಮ ಪತ್ರಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಸೌಮ್ಯ ರೆಡ್ಡಿ ಅವರು ಒಂದು ಲಕ್ಷಕ್ಕೂ ಹೆಚ್ಚಿನ ಅಂತರದ ಮತಗಳಿಂದ ಗೆಲ್ಲಲಿದ್ದಾರೆ ಎಂಬ ವಿಶ್ವಾಸವಿದೆ. ಸೌಮ್ಯ ನಮ್ಮ ಮನೆ ಮಗಳು ಅವರನ್ನು ಗೆಲ್ಲಿಸಿ ಎಂದು ಪ್ರಾರ್ಥನೆ ಮಾಡುತ್ತಿದ್ದೇನೆ ಎಂದರು.
ಸೌಮ್ಯ ಬೇರೆಯಲ್ಲ ನನ್ನ ಮಗಳು ಐಶ್ವರ್ಯ ಬೇರೆಯಲ್ಲ ಸೌಮ್ಯ ರೆಡ್ಡಿಯನ್ನು ಗೆಲ್ಲಿಸಿದರೆ ನನ್ನ ಮಗಳನ್ನು ಗೆಲ್ಲಿಸಿದಂತೆ,
ಈ ದೇವರ ಸನ್ನಿಧಿಯಲ್ಲಿ ನಾನು ಈ ಮಾತು ಹೇಳುತ್ತಿದ್ದೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
Pushpa 2 Teaser: ಸೀರೆ ಉಟ್ಟ ಅಲ್ಲು ಅರ್ಜುನ್, ಮಾಸ್ ಫಸ್ಟ್ ಕ್ಲಿಪ್ನಲ್ಲಿ ಗೂಂಡಾಗಳ ಜೊತೆಗೆ ಹೊಡೆದಾಟ, ವಿಡಿಯೋ ನೋಡಿ
BREAKING NEWS : 5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ : ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ !