ಶಿವಮೊಗ್ಗ: ಇಂದು ಬೆಳಿಗ್ಗೆಯಿಂದ ಎಡಬಿಡದೇ ಮಳೆ ಸೊರಬ ತಾಲ್ಲೂಕಿನಲ್ಲಿ ಸುರಿಯುತ್ತಿದೆ. ಜನರು ಮನೆಯಿಂದ ಹೊರ ಬರಲಾಗದಂತೆ ಭಾರೀ ಮಳೆಯಾಗುತ್ತಿದೆ. ನಾಳೆಯು ಮಳೆಯಾಗುವ ಮುನ್ಸೂಚನೆಯ ಕಾರಣ, ಸೊರಬ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಈ ಸಂಬಂಧ ಸೊರಬ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಸೊರಬ ತಾಲ್ಲೂಕಿನಾಧ್ಯಂತ ತೀವ್ರ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಇಂದು ರಜೆ ನೀಡಲಾಗಿತ್ತು ಎಂದಿದ್ದಾರೆ.
ಇನ್ನೂ ದಿನಾಂಕ 20-07-2024ರ ನಾಳೆ ಕೂಡ ಸೊರಬ ತಾಲ್ಲೂಕಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ನಾಳೆ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಸದರಿ ರಜೆ ದಿನದಂದು ನಡೆಯಬೇಕಿದ್ದ ಪಾಠ-ಪ್ರವಚನಗಳನ್ನು ಮುಂದಿನ ರಜಾ ದಿನಗಳಲ್ಲಿ ನಡೆಸಿ, ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ವಾಲ್ಮೀಕಿ ನಿಗಮದ ಹಗರಣ: ‘SIT ತನಿಖೆ’ಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಭರವಸೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಭಕ್ತಾದಿಗಳ ಗಮನಕ್ಕೆ: ಆ.15ರಿಂದ ‘ಶೃಂಗೇರಿ ಶಾರದಾಂಬೆ’ ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿ, ಈ ಉಡುಪು ಕಡ್ಡಾಯ