ಬೆಂಗಳೂರು: ಕಾನೂನು ಬಾಹಿರ ವಾಗಿ ಮಗವನ್ನು ದತ್ತು ಪಡೆದ ಪ್ರಕರಣದಲ್ಲಿ ಆರೋಪಿ ಸೋನು ಶ್ರೀನಿವಾಸ್ ಗೌಡ ಗೆ ಜಾಮೀನು ಮಂಜೂರು ಮಾಡಲಾಗಿದೆ.
ಈ ಸಂಬಂಧ PDJ ಕೋರ್ಟ್ ನಿಂದ ಜಾಮೀನು ತೀರ್ಪು (principal district and sessions judge) ಪ್ರಕಟಿಸಿದ್ದಾರೆ. ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ಜಾಮೀನು ಅರ್ಜಿ ಸಲ್ಲಿಸಿದ್ದರು.
ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ವಾದ ಮಂಡಿಸಿದರು. ಈ ವಾದವನ್ನು ಆಲಿಸಿದಂತ ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ಪ್ರಧಾನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇಬ್ಬರು ಶ್ಯೂರಿಟಿ, 1 ಲಕ್ಷ ಬ್ಯಾಂಡ್ ಷರುತ್ತನ್ನು ನ್ಯಾಯಾಲಯವು ವಿಧಿಸಿದೆ. ಹೀಗಾಗಿ ಜಾಮೀನು ಬಳಿಕ ನಾಳೆ ಅಥವಾ ನಾಡಿದ್ದು ಸೋನು ಶ್ರೀನಿವಾಸ್ ಗೌಡ ಜೈಲಿನಿಂದ ಬಿಡುಗಡೆಯಾಗೋ ಸಾಧ್ಯತೆಯಿದೆ.
ಅಂದಹಾಗೇ ಬ್ಯಾಡರಹಳ್ಳಿ ಪೊಲೀಸರಿಂದ ಮಾರ್ಚ್ 22 ರಂದು ಬಿಗ್ ಬಾಸ್ ಕನ್ನಡ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧಿಸಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಬ್ಯಾಡರಹಳ್ಳಿ ಪೊಲೀಸರಿಗೆ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದಿದ್ದರಿಂದ ದೂರು ನೀಡಿದ್ದರು. ಈ ದೂರು ಆಧರಿಸಿ ಅವರನ್ನು ಬಂಧಿಸಲಾಗಿತ್ತು.
ಗಮನಿಸಿ: ಏ.9ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಕಾಲಾವಕಾಶ
‘ಅಪರಾಧಿಗಳು ಜೈಲಿನಲ್ಲಿ ಜೀವನ ಕಳೆಯುತ್ತಾರೆ’: ‘ಮಮತಾ’ಗೆ ಸಂದೇಶ್ಖಾಲಿ ನೆನಪಿಸಿದ ‘ಪ್ರಧಾನಿ ಮೋದಿ’