ಹಾಸನ: ಅಡುಗೆ ಮಾಡುವಂತ ವಿಚಾರಕ್ಕೆ ತಾಯಿ ಮತ್ತು ಮಗನ ನಡುವೆ ಜಗಳ ಉಂಟಾಗಿದೆ. ಈ ಜಗಳ ತಾರಕ್ಕೇರಿದಂತ ಸಂದರ್ಭದಲ್ಲಿ ಕಂಠಪೂರ್ತಿ ಕುಡಿದಿದ್ದಂತ ಪುತ್ರ ತಾಯಿಯನ್ನೇ ಕೊಲೆ ಮಾಡಿದಂತ ಘಟನೆ ಹಾಸನದ ಆಲೂರಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಆಲೂರಿನ ಕದಾಳುಚನ್ನಾಪುರದಲ್ಲಿ ಅಡುಗೆ ಮಾಡುವಂತ ವಿಚಾರಕ್ಕೆ ತಾಯಿ-ಮಗನ ನಡುವೆ ಜಗಳ ಉಂಟಾಗಿದೆ. ಈ ಜಗಳ ತಾರಕ್ಕೇರಿದಂತ ಸಂದರ್ಭದಲ್ಲಿ ಕಂಠಪೂರ್ತಿ ಕೂಡಿದಿದ್ದಂತ ಪುತ್ರ ಸಂತೋಷ್(19), ತಾಯಿ ಪ್ರೇಮ(45)ಗೆ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದಂತ ತಾಯಿ ಪ್ರೇಮರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ALERT : ಧೂಮಪಾನಿಗಳೇ ಎಚ್ಚರ : `ಸಿಗರೇಟ್’ನಿಂದ ಈ ಗಂಭೀರ ಕಾಯಿಲೆಗಳು ಬರಬಹುದು.!
BREAKING : ಶೀಘ್ರದಲ್ಲೇ ಮದುವೆ ಆಗ್ತೀನಿ : ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್