ಹಾವೇರಿ: ತಾನು ಕೇಳಿದಂತ ಬೈಕ್ ಅನ್ನು ಮನೆಯಲ್ಲಿ ಕೊಡಿಸಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮಗನ ಸುದ್ದಿಯನ್ನು ಕೇಳಿದಂತ ತಾಯಿಯೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕರೂರು ಗ್ರಾಮದ ಧನರಾಜ್(18) ಎಂಬಾತ ಮನೆಯಲ್ಲಿ ಬೈಕ್ ಕೊಡಿಸುವಂತೆ ಕೇಳಿದ್ದಾನೆ. ಈಗಲೇ ಬೇಡ ಇನ್ನೂ ಕೆಲವು ದಿನಗಳು ತಡಿ. ಆಮೇಲೆ ಕೊಡಿಸುತ್ತೇವೆ ಅಂತ ತಂದೆ-ತಾಯಿ ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೇ ಬೇಸರಗೊಂಡು, ಸಿಟ್ಟಾದಂತ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನೂ ಪುತ್ರ ಧನರಾಜ್ ಆತ್ಮಹತ್ಯೆ ಮಾಡಿಕೊಂಡಿರುವಂತ ಸುದ್ದಿ ತಿಳಿದಂತ ಅವರ ತಾಯಿ ಭಾಗಮ್ಮ ನಾಯಕ್(43) ಎಂಬುವರು ಆಘಾತಗೊಂಡು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕೆಸೆಟ್-23’ರಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ‘ಸಚಿವ ಡಾ.ಎಂ.ಸಿ ಸುಧಾಕರ್’ ವಿತರಣೆ
ಮುಡಾ ಸೈಟು ಹಂಚಿಕೆ ಹಗರಣವನ್ನು CBI ಮೂಲಕ ತನಿಖೆ ನಡೆಸಿ: ಸಂಸದ ಬೊಮ್ಮಾಯಿ ಆಗ್ರಹ