ದಾವಣಗೆರೆ : ವಯೋಸಹಜವಾಗಿ ಮೃತಪಟ್ಟ ತಂದೆ ಸಾವಿನಿಂದ ಮನನೊಂದ ಮಗ ವಿಷ ಸೇವಿಸಿ ಆತ್ಮತಹ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದಲ್ಲಿ ನಡೆದಿದೆ.
ವಯೋಸಹಜವಾಗಿ ತಂದೆ ಚಂದ್ರನಾಯ್ಕ್ (೬೨) ಮೃತಪಟ್ಟಿದ್ದು, ತಂದೆ ಸಾವಿನಿಂದ ಮನನೊಂದ ಮಗ ಶಿವಕುಮಾರ್ (೩೨) ಆತ್ಮಹತ್ಯೆಗೆ ಶರಣಾಗಿದ್ದಾರೆ. ದಿವ್ಯಾಂಗನಾಗಿದ್ದ ಶಿವಕುಮಾರ್ ಗೆ ಆಸರೆಯಾಗಿದ್ದ ತಂದೆ ಚಂದ್ರನಾಯ್ಕ್ ಸಾವಿನಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.