ಬೆಂಗಳೂರು: ಕೆಲವೊಮ್ಮ ರಾಜಕೀಯಕ್ಕೆ ಬರಬೇಕು ಅನ್ಸುತ್ತೆ. ನಾನು ರಾಜಕೀಯಕ್ಕೆ ಬಂದ್ರು ಬದಲಾಗಲ್ಲ ಎಂಬುದಾಗಿ ನಟ ಕಿಚ್ಚ ಸುದೀಪ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ದರ್ಶನ್ ಜೈಲುಪಾಲು ಸೇರಿದ ವಿಚಾರವಾಗಿ ಮಾತನಾಡಿ, ಖಂಡಿತವಾಗಿ ನಟ ದರ್ಶನ್ ಸಿನಿಮಾಗೆ ಒಳ್ಳೆಯದಾಗಲಿ. ಅವರ ನೋವು ಅವರಿಗೆ ಇರುತ್ತದೆ. ಆ ಬಗ್ಗೆ ಮಾತನಾಡಿದ್ರೆ ತಪ್ಪಾಗುತ್ತದೆ. ಅವರದ್ದು ಏನೇ ಇದ್ರೂ ಕಾನೂನು ಇದೆ, ಸರ್ಕಾರ ನೋಡಿಕೊಳ್ಳುತ್ತದೆ ಎಂದರು.
ನಟ ದರ್ಶನ್, ಸುದೀಪ್ ಮತ್ತೆ ಒಂದಾಗುವ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ಸೂರ್ಯನೊಬ್ಬ, ಚಂದ್ರನೊಬ್ಬ. ಎಲ್ಲಿರಬೇಕೋ ಅಲ್ಲಿದ್ದರೇ ಚೆಂದ. ನಾನು ದೂರವಾಗಿದ್ದಕ್ಕೆ ಬೇರಯವರಿಗೆ ಖುಷಿಯಾಗಿದ್ರೆ ಆಗಿರಲಿ ಬಿಡಿ. ನಾವ್ಯಾಕೆ ದೂರ ಆಗಿದ್ದೀವಿ ಎಂಬುದು ನಮಗೆ ಗೊತ್ತಿದೆ. ಅಷ್ಟೇ ಸಾಕು. ಬೇರೆಯವರು ಏನೇ ಮಾತನಾಡಿಕೊಂಡರೂ ನಾನು ತಲೆಕೆಡಿಸಿಕೊಳ್ಳಲ್ಲ ಎಂದರು.
ಧ್ರುವ ಸರ್ಜಾ ನನ್ನ ತಮ್ಮನಿದ್ದಂತೆ. ಡಾಲಿ ನನಗೆ ಬಹಳ ಹತ್ತಿರದ ವ್ಯಕ್ತಿ. ಶಿವಣ್ಣರನ್ನು ತುಂಬಾ ಪ್ರೀತಿಸ್ತೀವಿ. ಸೋ ನಾವೆಲ್ಲ ಚೆನ್ನಾಗಿದ್ದೇವೆ. ಯಾರದ್ದೇ ಸಿನಿಮಾ ಬಂದರೂ ಖುಷಿ ಪಡುತ್ತೇವೆ ಎಂದರು.
ಕೆಲವೊಮ್ಮೆ ರಾಜಕೀಯಕ್ಕೆ ಬರಬೇಕು ಅನ್ನಿಸುತ್ತೆ. ನಾನು ರಾಜಕೀಯಕ್ಕೆ ಬಂದ್ರೂ ಬದಲಾಗಲ್ಲ. ಬದಲಾಗದ ಹಾಗೆ ನನ್ನ ನಟ್ಟು ಟೈಟ್ ಮಾಡ್ಕೋತೀನಿ ಎಂಬುದಾಗಿ ಅಚ್ಚರಿಯ ಹೇಳಿಕೆಯನ್ನು ನೀಡಿದರು.
BIG UPDATE: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ: ಮೃತರ ಸಂಖ್ಯೆ 800ಕ್ಕೆ ಏರಿಕೆ | Afghanistan Earthquake
CRIME NEWS: ಆಸ್ತಿ ವಿಚಾರಕ್ಕೆ ಮಾರಕಾಸ್ತ್ರದಿಂದ ಕೊಚ್ಚಿ ಅಣ್ಣನನ್ನೇ ಕೊಂದ ತಮ್ಮ