ಶಿವಮೊಗ್ಗ: ಬಿಜೆಪಿ ಮುಖಂಡ ರತ್ನಾಕರ ಹೊನಗೋಡಿನ ವಿರುದ್ಧ ಕಾಂಗ್ರೆಸ್ ಮುಖಂಡ ಸೋಮಶೇಖರ ಲಾವಿಗೆರೆ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ. ಅಲ್ಲದೇ ಅವರ ಆರೋಪಗಳ ಬಗ್ಗೆ ತರಾಟೆಗೆ ತೆಗೆದುಕೊಂಡು ತಿರುಗೇಟು ನೀಡಿದ್ದಾರೆ. ಅವರು ಏನು ಹೇಳಿದ್ರು ಅಂತ ಮುಂದೆ ಓದಿ.
ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬಹಳ ಹಾಸ್ಯಾಸ್ಪದ ಎನಿಸಿತು. ಅವರ ಹತಾಶೆ ಎದ್ದು ಕಾಣುತ್ತಿತ್ತು. ಹಾಲಪ್ಪ ಅವರಿಗೆ ಪರಜ್ಞಾನ ಇರಬೇಕಿತ್ತು. ಶಿವಮೊಗ್ಗಕ್ಕೆ ಹೋಗಿ ಪತ್ರಿಕಾಗೋಷ್ಠಿ ನಡೆಸಿದರೇ ಏನಾಗುತ್ತದೆ ಎನ್ನುವುದು ಗೊತ್ತಿರಬೇಕಿತ್ತು. ಶಿವಮೊಗ್ಗಕ್ಕೆ ಹೋಗಿ ಎಸ್ಪಿಗೆ, ಡಿಸಿಗೆ ಮನವಿ ಮಾಡಿ, ಅಲ್ಲೇ ಪತ್ರಿಕಾಗೋಷ್ಠಿ ಮಾಡಿ ಕಲ್ಲು ಕ್ವಾರೆ ಬಗ್ಗೆ ತಾರತಮ್ಯ ಮಾಡುತ್ತಾರೆ ಅಂತ ಹೇಳುತ್ತಾರೆ. ಒಂದೊಂದು ಗಾಡಿಗೆ ರೇಟ್ ಫಿಕ್ಸ್ ಮಾಡಿದ್ದಾರೆ ಅಂತ ಮಾಜಿ ಸಚಿವರು ಹೇಳಿದ್ದಾರೆ ಎಂದರು.
ಯಾರಿಗೆ ಕೊಡ್ತಾ ಇದ್ದಾರೆ. ಯಾರು ಕೊಡ್ತಾ ಇದ್ದಾರೆ ಎನ್ನುವುದು ಪ್ರಶ್ನೆ. ಸಾಗರ ತಾಲ್ಲೂಕಿನಲ್ಲಿ ಕಲ್ಲು ಕ್ವಾರೆಗಳು ಯಾಕಾಗಿ ನಿಂತವು.? ಇವರ ಹೇಳಿಕೆಯಿಂದಾಗಿಯೇ ಆಗಿದೆ. ಶಾಸಕರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳೋಕೆ ಮಾತಿಲ್ಲ. ಇವರಿಗೆ ಮರಳು, ಕಲ್ಲು ಕ್ವಾರೆಯವರ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಆನಂದಪುರ ವ್ಯಾಪ್ತಿಯಲ್ಲಿ 6,000ಕ್ಕೂ ಹೆಚ್ಚು ಜನರು ಕಲ್ಲುಕ್ವಾರಿಯಿಂದ ಜೀವನ ನಡೆಸುತ್ತಿದ್ದಾರೆ. ಅದರಿಂದ ವಹಿವಾಟು ಹೇಗೆ ಆಗುತ್ತವೆ ಎನ್ನುವುದನ್ನು ಮಾಜಿ ಶಾಸಕರೇ ಹೇಳಿದ್ದಾರೆ. ಇಷ್ಟೊಂದು ಅರಿವಿರೋದು ಯಾಕೆ ಎಸ್ಪಿ, ಡಿಸಿಗೆ ಮನವಿ ನೀಡಿದ್ರಿ? ಡಿಪಾರ್ಮೆಂಟ್ ನವರು ದುಡ್ಡು ತೆಗೆದುಕೊಳ್ಳುತ್ತಾರೆ ಅಂತ ದೂರು ಕೊಟ್ರೆ, ನಿಯಂತ್ರಣಕ್ಕೆ ಈಗ ಎಸ್ಪಿ ಆದೇಶ ಮಾಡಿದ್ದಾರೆ. ಹೀಗಾಗಿಯೇ ಕಲ್ಲು ಕ್ವಾರಿ ಬಂದ್ ಮಾಡೋದಕ್ಕೆ ಎಸ್ಪಿ ಆದೇಶ ಮಾಡಿದ್ದಾರೆ ಎಂದರು.
ಶಾಸಕರ ಬಗ್ಗೆ ಕಮೀಷನ್ ಹೋಗುತ್ತದೆ ಎಂಬುದಾಗಿ ಆರೋಪಿಸಿದ್ದಾರೆ. ನಾನು ಪಾಪದ ದುಡ್ಡು ಮುಟ್ಟುವುದಿಲ್ಲ. ಬೇಕಾಗಿದ್ದರೇ ಕೂಲಿ ಕಾರ್ಮಿಕರಿಗೆ ಕೊಡಿ ಅಂತ ಹೇಳಿದ್ದಾರೆ. ಹೊಸನಗರದಲ್ಲಿ ನನ್ನ ಸ್ನೇಹಿತರು ಕಲ್ಲುಕ್ವಾರೆ ಮಾಡಿದ್ದರು. ಅಂದ ನೀವೆಲ್ಲ ಕೂತು ಪ್ರತಿಭಟನೆ ಮಾಡಿದ್ದರು. ಬಂದ್ ಮಾಡಿದ ಒಂದೇ ತಿಂಗಳಲ್ಲಿ ಓಪನ್ ಆಯ್ತಲ್ಲ ಇದಕ್ಕೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು.
ಧರ್ಮಸ್ಥಳಕ್ಕೆ ಪ್ರಮಾಣ ಮಾಡುತ್ತೇವೆ ಅಂತ ಬಂದವರು ಕೈಮುಗಿದುಕೊಂಡು ಅಲ್ಲಿಂದ ಓಡಿ ಬಂದ್ರಲ್ಲ. ಅದನ್ನು ನೀವು ಅನುಭವಿಸ್ತ ಇಲ್ವ? ನಿಮ್ಮ ಕರ್ಮನ ತಾಲ್ಲೂಕು, ಜಿಲ್ಲೆಯ ಜನತೆ ನೋಡಿಲ್ಲ ಎಂದು ಕೇಳಿದರು.
ರತ್ನಾಕರ್ ವಿರುದ್ಧ ವಾಗ್ಧಾಳಿ, ಈ ಎಚ್ಚರಿಕೆ
ರತ್ನಾಕರ್ ಅವರು ಭ್ರಷ್ಟಾಚಾರದ್ದು, ಮರಳು ಯಾರು ಬಾಚುತ್ತಿದ್ದಾರೆ ಅಂತ ಮಾತನಾಡಿದ್ದಾರೆ. ಕಾಗೋಡು ಸಾಹೇಬರು ಮಾಡಿದಂತ ಚೆಕ್ ಡ್ಯಾಂನ ಮರಳನ್ನು ರಾತ್ರೋ ರಾತ್ರಿ 100 ಲೋಡ್ ಹೊಡೆಸಿ ಕಳುಹಿಸಿದ್ಯಲ್ಲ ಆ ಸಗಣಿ ಎಲ್ಲಿಗೋಯ್ತು?. ಕೆಂಚಗಾರಪುರದ ದೇವಸ್ಥಾನದ ಜಾಗವನ್ನು ನುಂಗಾಕೋಕೆ ಹೋದೆಯಲ್ಲ ಅದ್ಯಾವ ಸಗಣಿ ತಿನ್ನೋ ಕೆಲಸ? ಪೋಲೀಸ್ ಠಾಣೆ ಜಾಗಕ್ಕೂ ಬೇಲಿ ಹಾಕಿದ್ಯಲ್ಲ ಅಂದು ಸಗಣಿ ತಿನ್ನೋ ಕೆಲಸ ಅಲ್ವ? 450 ಎಕರೆ ಜಾಗಕ್ಕೆ ಮರ ಕಡಿಸಿ, ಬೇಲಿ ಹಾಕಿಸಿದ್ದಾಗ ಹಾಲಪ್ಪನವರೇ ನಿನ್ನ ವಿರುದ್ಧ ಮಾತನಾಡಿದ್ರಲ್ಲ ಅದು ಸಗಣಿ ತಿನ್ನೋ ಕೆಲಸ ಅಲ್ವ? ಸಾಗುವಾನೆ ಮರ ಕಡಿದು ಬಾವಿಯೊಳಗೆ ಮುಚ್ಚಿಟ್ಟು ಹಲ್ಲೆ ಮಾಡಿ ಜೈಲಿಗೆ ಹೋದ್ಯಲ್ಲ ಅದು ಸಗಣಿ ತಿನ್ನೋ ಕೆಲಸ ಅಲ್ವ? ಶಾಸಕರು ಸಾಗರದ ಪ್ರಥಮ ಪ್ರಜೆಗಳು. ಅವರ ವಿರುದ್ಧ ಮಾತನಾಡುವುದು ಸಹಿಸುವುದಿಲ್ಲ. ನಿನ್ನ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂಬುದಾಗಿ ಗುಡುಗಿದರು.
ನಿಮ್ಮ ರಾಜಕಾರಣಕ್ಕೆ ಬಾದಿತರಾಗುತ್ತಿರುವವರು ಕಲ್ಲು ಕ್ವಾರೆ ಕುಟುಂಬಗಳು. ದಯಮಾಡಿ ಇಂತಹ ಥರ್ಡ್ ಕ್ಲಾಸ್ ರಾಜಕಾರಣಕ್ಕೆ ಇಳಿಯಬೇಡಿ. ಇದು ಜೀವನದ ಪ್ರಶ್ನೆ. ಸಾಕಷ್ಟು ಕುಟುಂಬಗಳು ಬರ್ತಾವೆ. ಬಡವರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದರು.
ಹಾಲಪ್ಪನವರಿಗೆ ಒಂದು ಮಾತು ಹೇಳ್ತೀನಿ. ನೀವು ಶಾಸಕರಾಗಿದ್ದಾಗ ಹೊಸನಗರದಿಂದ ಮರಳು 24 ಸಾವಿರಕ್ಕೆ ಬರ್ತಾ ಇತ್ತು. ಇವತ್ತು 13 ರಿಂದ 16 ಸಾವಿರಕ್ಕೆ ಸಾಗರಕ್ಕೆ ಬರ್ತಾ ಇದೆ. ಯಾರ ಕಾಲದಲ್ಲಿ ಬೆಲೆ ಕಡಿಮೆ ಆಗಿದೆ.? ಯಾರು ಸಗಣಿ ತಿನ್ನುತ್ತಿದ್ದರು? ಉಳಿದಿರೋ 10 ಸಾವಿರ ಯಾರಿಗೆ ಹೋಗ್ತಿತ್ತು ಅಂತ ಹೇಳಿ. ಜನರಿಗೆ ಮರಳು ಬೆಲೆ ಕಡಿಮೆಯಾಗಿರೋದರಿಂದ ಜನರಿಗೆ ಅನುಕೂಲವಾಗಿಲ್ವ ಎಂದು ಕೇಳಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ತಿದ್ದುಪಡಿ ವಿಧೇಯಕ ಅಂಗೀಕಾರ
BREAKING NEWS: ಚಿತ್ರದುರ್ಗದಲ್ಲಿ ಖಾಸಗಿ ಬಸ್ ಮರಕ್ಕೆ ಡಿಕ್ಕಿಯಾಗಿ 15ಕ್ಕೂ ಹೆಚ್ಚು ಜನರಿಗೆ ಗಾಯ | Bus Accident