ಮಡಿಕೇರಿ: ಜಮ್ಮು-ಕಾಶ್ಮೀರದ ಪೂಂಚ್ ನಲ್ಲಿ ಸೇನಾ ವಾಹನ ಅಪಘಾತಗೊಂಡು ಕೊನೆಯುಸಿರೆಳೆದಿದ್ದಂತ ಕೊಡಗಿನ ಯೋಧ ದಿವಿನ್(28) ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಆಲೂರು ಸಿದ್ದಾಪುರ ಗ್ರಾಮದಲ್ಲಿ ನೆರವೇರಿಸಲಾಯಿತು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾಮದಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೇನಾವಾಹನ ಅಪಘಾತದಲ್ಲಿ ಕೊನೆಯುಸಿರೆಳೆದಂತ ಯೋಧ ದಿವಿನ್ ಅಂತ್ಯಕ್ರಿಯೆನ್ನು ಕುಟುಂಬಸ್ಥರು ಇಂದು ನೆರವೇರಿಸಿದರು.
ಇಂದು ಬೆಳಿಗ್ಗೆ ಕುಶಾಲನಗರದ ಸರ್ಕಾರಿ ಆಸ್ಪತ್ರೆಯಿಂದ ಯೋಧ ದಿವಿನ್ ಪಾರ್ಥೀವ ಶರೀರವನ್ನು ಹುಟ್ಟೂರು ಆಲೂರು ಸಿದ್ದಾಪುರ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ದಿವಿನ್ ಅವರ ತೋಟದಲ್ಲಿರುವ ತಂದೆಯ ಸಮಾಧಿಯ ಬಳಿಯಲ್ಲೇ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
BREAKING: ಕೇಂದ್ರ ಸಚಿವ ವಿ.ಸೋಮಣ್ಣ ಹೆಸರಿನಲ್ಲಿ ವಂಚನೆ ಯತ್ನ: ಆರೋಪಿ ಗೋವರ್ಧನ್ ಅರೆಸ್ಟ್
ತಾಯಿ ,ನಾಲ್ವರು ಸಹೋದರಿಯರ ಹತ್ಯೆ ಪ್ರಕರಣ: ‘ಹಿಂದೂ’ ಆಗಲು ಬಯಸಿದ್ದ ಆರೋಪಿ ಅರ್ಷದ್