ತುಮಕೂರು: ಸಿಗ್ನಿಫೈ ಯಶಸ್ವಿಯಾಗಿ ಕರ್ನಾಟಕದ 10 ಪ್ರಾಥಮಿಕ ಆರೋಗ್ಯ ಕೇಂದ್ರ(ಪಿ.ಎಚ್.ಸಿ)ಗಳನ್ನು ತನ್ನ ಮುಂಚೂಣಿಯ ಸಿ.ಎಸ್.ಆರ್. ಉಪಕ್ರಮದ ಅಡಿಯಲ್ಲಿ ಸೆಲ್ಕೊ ಫೌಂಡೇಷನ್ ಸಹಯೋಗದಲ್ಲಿ ಸೌರಶಕ್ತಿ ಬಳಕೆಗೆ ಯಶಸ್ವಿಯಾಗಿ ಪರಿವರ್ತಿಸಿದೆ. ಈ ಪರಿವರ್ತನೀಯ ಉಪಕ್ರಮವು ಗ್ರಾಮೀಣ ಆರೋಗ್ಯ ಸೇವಾ ಸೌಲಭ್ಯಗಳಲ್ಲಿ ತಡೆರಹಿತ ಬೆಳಕು ಮತ್ತು ವಿಶ್ವಾಸಾರ್ಹ ವಿದ್ಯುಚ್ಛಕ್ತಿಯ ಲಭ್ಯತೆಯನ್ನು ನೀಡುವ ಗುರಿ ಹೊಂದಿದ್ದು ಇದು ದುರ್ಬಲ ಸಮುದಾಯಗಳಿಗೆ ಗುಣಮಟ್ಟದ ಆರೋಗ್ಯಸೇವೆಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ.
ಪ್ರತಿ ಪಿ.ಎಚ್.ಸಿ 5 ಕೆ.ಡಬ್ಲ್ಯೂ ಸೌರ ಪ್ಯಾನಲ್, 19.2 ಕೆ.ಡಬ್ಲ್ಯೂ.ಎಚ್ ಬ್ಯಾಟರಿ ಮತ್ತು 6ಕೆವಿಎ ಸೌರ ಪಿಸಿಯು ಹೊಂದಿದ್ದು ಪ್ರಮುಖ ಆರೋಗ್ಯಸೇವಾ ಕಾರ್ಯಾಚರಣೆಗಳಿಗೆ ತಡೆರಹಿತ ವಿದ್ಯುತ್ ಪೂರೈಕೆ, ದೀಪ ಮತ್ತು ಅಗತ್ಯ ವೈದ್ಯಕೀಯ ಸಾಧನ ನೀಡಲಿದೆ. ಈ ಉಪಕ್ರಮವು ಪ್ರತಿ ಪಿ.ಎಚ್.ಸಿ ಗೆ ವಾರ್ಷಿಕ 7,000 ವಿದ್ಯುಚ್ಛಕ್ತಿಯ ಯೂನಿಟ್ ಗಳನ್ನು ಉಳಿತಾಯ ಮಾಡುವ ನಿರೀಕ್ಷೆ ಹೊಂದಿದೆ. ಇದರಿಂದ ಎಲ್ಲ 10 ಕೇಂದ್ರಗಳಲ್ಲಿ ಒಟ್ಟು 70,000 ಯೂನಿಟ್ ಗಳ ಉಳಿತಾಯವಾಗಲಿದೆ. ಇದರಿಂದ ಹಸಿರಿನ, ಹೆಚ್ಚು ಸುಸ್ಥಿರ ಪರಿಸರದೊಂದಿಗೆ ಸುಧಾರಿತ ಆರೋಗ್ಯಸೇವಾ ಪೂರೈಕೆ ನೀಡಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಜಿಲ್ಲಾ ಆರೋಗ್ಯ ಕಛೇರಿಯ ಟಿ.ಬಿ ಅಧಿಕಾರಿ ಡಾ. ಮೋಹನ್ ದಾಸ್ ಮತ್ತು ಸಿರಾ ಬ್ಲಾಕ್ ತಾಲೂಕು ಆರೋಗ್ಯಾಧಿಕಾರಿ ಡಾ. ಸಿದ್ಧೇಶ್ವರ ಅವರೊಂದಿಗೆ ಗ್ರಾಮ ಪಂಚಾಯಿತಿ ಗಣ್ಯರು ಭಾಗವಹಿಸಿದ್ದರು.
ಸಿಗ್ನಿಫೈ ಗ್ರೇಟರ್ ಇಂಡಿಯಾದ ಮಾರ್ಕೆಟಿಂಗ್, ಸ್ಟ್ರಾಟಜಿ, ಗೌರ್ನಮೆಂಟ್ ಆಫೀಸರ್ ಮತ್ತು ಸಿ.ಎಸ್.ಆರ್ ನ ಮುಖ್ಯಸ್ಥ ನಿಖಿಲ್ ಗುಪ್ತಾ ಈ ಬಗ್ಗೆ ಮಾತನಾಡಿ “ಸಿಗ್ನಿಫೈನಲ್ಲಿ ನಾವು ನಮ್ಮ ಬೆಳಕಿನ ಪರಿಣಿತಿಯನ್ನು ನಮ್ಮ ಸಿ.ಎಸ್.ಆರ್. ಉಪಕ್ರಮಗಳ ಮೂಲಕ ಸಕಾರಾತ್ಮಕ ಪರಿಣಾಮ ಸೃಷ್ಟಿಸಲು ಬಳಸಲು ಬದ್ಧರಾಗಿದ್ದೇವೆ. ಗ್ರಾಮೀಣ ಕರ್ನಾಟಕದಲ್ಲಿ ಪ್ರಮುಖ ಆರೋಗ್ಯ ಸೇವೆಗಳಿಗೆ ವಿದ್ಯುಚ್ಛಕ್ತಿಗೆ ವಿಶ್ವಾಸಾರ್ಹವಾಗಿದೆ. ಸೆಲ್ಕೊ ಫೌಂಡೇಷನ್ ಜೊತೆಯಲ್ಲಿ ನೂರಾರು ಜನರ ಜೀವನವನ್ನು ಸುಧಾರಿಸುವ ಈ ಸಹಯೋಗಕ್ಕೆ ಹೆಮ್ಮೆ ಪಡುತ್ತೇವೆ” ಎಂದಿದ್ದಾರೆ.
ಸ್ವಾಸ್ಥ್ಯಕಿರಣ್ ಯೋಜನೆಯು ತುಮಕೂರಿನಲ್ಲಿ 4, ಬೆಂಗಳೂರು ನಗರದಲ್ಲಿ 3, ಕೋಲಾರದಲ್ಲಿ 1 ಮತ್ತು ಮೈಸೂರಿನಲ್ಲಿ 2 ಸೇರಿ ನಾಲ್ಕು ಜಿಲ್ಲೆಗಳ ಪಿ.ಎಚ್.ಸಿ ಗಳನ್ನು ಹೊಂದಿದೆ.
ಡೀಸೆಲ್ ಜನರೇಟರ್ ಗಳ ಮೇಲೆ ಆಧಾರಪಡುವಿಕೆ ಕಡಿಮೆ ಮಾಡುವ ಮೂಲಕ ಮತ್ತು ತಡೆರಹಿತ ವಿದ್ಯುಚ್ಛಕ್ತಿ ಲಭ್ಯತೆ ನೀಡುವ ಮೂಲಕ ಈ ಯೋಜನೆಯು ಸ್ವಚ್ಛ ಶಕ್ತಿಯ ಅಳವಡಿಕೆಯನ್ನು ಸುಧಾರಿಸುವುದಲ್ಲದೆ ಸುಮಾರು ಅರ್ಧ ಮಿಲಿಯನ್ ಗ್ರಾಮೀಣ ಹಂತದ ಫಲಾನುಭವಿಗಳಿಗೆ ಆರೋಗ್ಯಸೇವಾ ಪುರೈಕೆಯನ್ನು ಸದೃಢಗೊಳಿಸಲಿದೆ.