ಶಿವಮೊಗ್ಗ: ರಾಜ್ಯದಲ್ಲಿ ಸಾಮಾಜಿಕ ಬಹಿಷ್ಕಾರ ಪದ್ದತಿ ಇನ್ನೂ ಜೀವಂತವಾಗಿದೆ. ಮೂರು ವರ್ಷಗಳಿಂದ ಒಂದು ಇಡೀ ಕುಟುಂಬಕ್ಕೆ ಗ್ರಾಮದ ಜನರು ಬಹಿಷ್ಕಾರ ಹಾಕಿರುವುದರಿಂದ ನೊಂದು ಹೋಗಿರುವಂತ ಘಟನೆ ಸಾಗರ ತಾಲ್ಲೂಕಿನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮುಳಕೆರೆ ಗ್ರಾಮದಲ್ಲೇ ಇಂತದ್ದೊಂದು ಸಾಮಾಜಿಕ ಬಹಿಷ್ಕಾರ ಪದ್ದತಿ ಜೀವಂತವಾಗಿರೋದಾಗಿದೆ. ರಮೇಶ್ ಬಿನ್ ಬಂಗಾರಪ್ಪ ಎಂಬಂತ ಕುಟುಂಬವನ್ನು ಮುಳುಕೆರೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರವನ್ನು ಹಾಕಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.
ಈ ಸಂಬಂಧ ರಮೇಶ್ ಅವರು ಸಾಗರ ತಹಶೀಲ್ದಾರರಿಗೆ ಈ ಅಮಾನುಷ ಬಹಿಷ್ಕಾರದ ಪದ್ದತಿಯನ್ನು ನಿವಾರಿಸುವಂತೆ ಮನವಿ ಮಾಡಿದ್ದಾರೆ. ತಹಶೀಲ್ದಾರ್ ಇಓಗೆ, ಇಓ ಅವರು ಆನಂದಪುರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರಿಗೆ ಪತ್ರವನ್ನು ವರ್ಗಾಯಿಸಿ ಕೈತೊಳೆದು ಕೊಂಡಿದ್ದಾರೆ. ಪೊಲೀಸರು ಶಾಂತಿ ಸಭೆ ನಡೆಸುವಂತೆ ಬರೂರು ಪಿಡಿಓಗೆ ಸೂಚಿಸಿದ್ದಾರೆ.
ರಮೇಶ್ ಅವರ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರೋದನ್ನು ನಿವಾರಣೆ ಸಂಬಂಧ ಬರೂರು ಗ್ರಾಮ ಪಂಚಾಯ್ತಿಯ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ದಿನಾಂಕ 22-01-2025ರಂದು ಶಾಂತಿ ಸಭೆ ನಿಗದಿ ಪಡಿಸಿದ್ದಾರೆ. ಆದರೇ ಮತ್ತೆ ಸಭೆ ಕರೆದು ನಿವಾರಿಸಬೇಕಿದ್ದಂತ ಬರೂರು ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು ಆ ಕೆಲಸವನ್ನೇ ಮಾಡಿಲ್ಲ.
ಶಾಂತಿ ಸಭೆಯನ್ನು ನಡೆಸುತ್ತೇವೆ. ನಡೆಸುತ್ತೇವೆ ಅಂತ ಮುಂದೆ ಮುಂದೆ ಹಾಕಿಕೊಂಡು ಹೋಗುತ್ತಿದ್ದಾರೆ ಅಂತ ರಮೇಶ್ ಅವರ ಕುಟುಂಬಕ್ಕೆ ಆರೋಪಿಸಿದೆ. ಅಲ್ಲದೇ ಸಾಮಾಜಿಕ ಬಹಿಷ್ಕಾರ ನಿವಾರಿಸುವಂತ ಕೆಲಸವನ್ನು ಗ್ರಾಮ ಆಡಳಿತ ಗಂಭೀರವಾಗಿ ಪರಿಗಣಿಸಿದಂತೆಯೂ ಇಲ್ಲ ಎಂಬುದಾಗಿ ಆಕ್ರೋಶ ಹೊರ ಹಾಕಿದೆ.
ಮುಳುಕೆರೆ ಗ್ರಾಮದ ರಮೇಶ್ ಮತ್ತು ಅವರ ಕುಟುಂಬವನ್ನು ಕೆಲವು ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿ, ದೂರವಿಟ್ಟಿದ್ದರೂ ಸಾಗರ ತಾಲ್ಲೂಕು ಆಡಳಿತವಾಗಲೀ, ಪೊಲೀಸ್ ಇಲಾಖೆಯಾಗಲಿ ಈವರೆಗೆ ನಿವಾರಿಸುವ ಗೋಜಿಗೆ ಹೋಗದೆ ಮೀನಾ ಮೇಷ ಏಣಿಸುತ್ತಿದೆ ಅಂತ ಸಾಗರದ ದೇಶಿ ಸೇವಾ ಬ್ರಿಗೇಡ್ ಅಧ್ಯಕ್ಷ ಶ್ರೀಧರ್ ಮೂರ್ತಿ ಕಿಡಿಕಾರಿದ್ದಾರೆ.
ಇನ್ನೂ ಕೂಡಲೇ ಸಾಗರ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಬರೂರು ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು ಶಾಂತಿ ಸಭೆ ನಡೆಸಿ, ಮೂರು ವರ್ಷಗಳಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿ, ನೊಂದಿರುವಂತ ರಮೇಶ್ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BREAKING : ಬೆಂಗಳೂರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಭೀಕರ ಅಗ್ನಿ ದುರಂತ : 6 ಜನರಿಗೆ ಗಂಭೀರ ಗಾಯ!
BREAKING:ಅಯೋಧ್ಯೆ ರಾಮ ಮಂದಿರದ ಮೇಲೆ ಅಪರಿಚಿತ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ, FIR ದಾಖಲು
ರಾಜ್ಯದ ಜನತೆಗೆ ಗುಡ್ ನ್ಯೂಸ್ : ಎಲ್ಲಾ ತಾಲೂಕುಗಳಿಗೂ `ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ’ ವಿಸ್ತರಣೆ.!