ಮೈಸೂರು: ಮುಡಾ ಹಗರಣದ ಬಗ್ಗೆ ಸಮರವನ್ನೇ ಸಾರಿರುವಂತ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿಕೃಷ್ಣ ಅವರು, ಈಗ ಮುಡಾ ಹಗರಣದ ಬಗ್ಗೆ ಮತ್ತೊಂದು ಮಹತ್ವದ ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ.
ಇಂದು ಸ್ನೇಹಮಯಿಕೃಷ್ಣ ಬಿಡುಡಗಡೆ ಮಾಡಿರುವಂತ ದಾಖಲೆ ಮುಡಾ ಹಗರಣದ ತನಿಖೆಗೆ ಸರ್ಕಾರ ರಚಿಸಿರುವಂತ ತನಿಖಾ ಆಯೋಗದ ಅಧ್ಯಕ್ಷ ಪಿಎನ್ ದೇಸಾಯಿ ಅವರಿಗೆ ಸಂಬಂಧಿಸಿದ್ದಾಗಿದೆ.
ಕೇಂದ್ರ ಸರ್ಕಾರ ಈ ಹಿಂದೆ ಸಿಎಟಿ ಸದಸ್ಯರಾಗಿ ಪಿಎನ್ ದೇಸಾಯಿ ಅವರನ್ನು ನೇಮಕ ಮಾಡಿತ್ತು. ಆದರೇ ವೈಯಕ್ತಿಕ ಕಾರಣದಿಂದ ಸದಸ್ಯತ್ವವನ್ನು ಪಿಎನ್ ದೇಸಾಯಿ ಒಪ್ಪಿರಲಿಲ್ಲ.
ಅವರ ಅರ್ಜಿಯಲ್ಲಿ ಹಲವು ನಿಬಂಧನೆಗಳಿಗೆ ಒಪ್ಪಿದ್ದ ಅವರು, ನೇಮಕಾತಿ ಆದೇಶವನ್ನು ನಿರಾಕರಿಸದಿರುವುದು, ಆದೇಶದ 30 ದಿನಗಳ ಒಳಗಾಗಿ ಸದಸ್ಯರಾಗಿ ಅಧಿಕಾರ ಸ್ವೀಕರಿಸುವುದು ಸೇರಿದಂತೆ ಹಲವು ನಿಬಂಧನೆಗಳನ್ನು ಒಪ್ಪದೇ ಸದಸ್ಯತ್ವನನ್ನು ನಿರಾಕರಿಸಿದ್ದರ ಬಗ್ಗೆ ಇಂದು ಸ್ನೇಹಮಯಿಕೃಷ್ಣ ಅವರು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ALERT : ಮೊಬೈಲ್ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡರೆ ನಿಮ್ಮ `ಫೋನ್ ಹ್ಯಾಕ್ ಆಗಿದೆ ಎಂದರ್ಥ.!