ಮಂಗಳೂರು: ಮುಡಾ ಕೇಸ್ ದೂರುದಾರ ಸ್ನೇಹಮಯಿ ಕೃಷ್ಣ ಸೇರಿದಂತೆ ಇಬ್ಬರ ಮೇಲೆ ವಾಮಾಚಾರ ನೆಡಸಿದ್ದಂತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಂತ ಪೊಲೀಸರು ತನಿಖೆ ಕೈಗೊಂಡಿದ್ದರು. ಸ್ನೇಹಮಯಿ ಕೃಷ್ಣ, ಗೋವಿಂದರಾಜು ಮೇಲೆ ವಾಮಾಚಾರ ನಡೆಸಿದಂತ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಸ್ನೇಹಮಯಿ ಕೃಷ್ಣ ಮೇಲೆ ಬೆಂಗಳೂರಿನ ಅಶೋಕ ನಗರದಲ್ಲಿರುವಂತ ಸ್ಮಶಾನದಲ್ಲಿ ವಾಮಾಚಾರ ಮಾಡಿಸಿದ್ದರು. ಸ್ಮಶಾನ ಕಾಳಿಕಾಂಬ ಗುಡಿಯಲ್ಲಿ ಕುರಿಗಳನ್ನು ಬಲಿ ನೀಡಿದ್ದರು. ಈ ವಿಚಾರವನ್ನು ಸ್ಮಶಾನ ಕಾಳಿಕಾಂಬ ದೇವಸ್ಥಾನದ ಅರ್ಚಕರಿಗೆ ತಿಳಿಯದಂತೆ ಬಲಿ ನೀಡಿದ್ದರು.
ಸ್ನೇಹಮಯಿ ಕೃಷ್ಣ, ಗಂಗರಾಜು, ಪ್ರಸಾದ್ ಅತ್ತಾವರ, ಶ್ರೀನಿಧಿ, ಸುಮಾ ಆಚಾರ್ಯ ಹೆಸರಿನ ಚೀಟಿ ನೀಡಿ ದೇವಿಗೆ ಪೂಜೆ. ಬಲಿ ನೀಡಿದ್ದ ಕುರಿಗಳ ರಕ್ತವನ್ನು ಸ್ನೇಹಮಯಿ ಕೃಷ್ಣ, ಗಂಗರಾಜು ಪೋಟೋಗೆ ಅರ್ಪಣೆ ಮಾಡಲಾಗಿತ್ತು.
ವಾಮಾಚಾರದ ದೃಶ್ಯವನ್ನು ಪ್ರಸಾದ್ ಅತ್ತಾವರ್ ಮೊಬೈಲ್ ನಲ್ಲಿ ಪತ್ತೆಯಾಗಿತ್ತು. ಮೊಬೈಲ್ ಅತ್ತಾವರ ರಾಮಸೇನಾ ಸಂಘಟನೆಯ ಸಂಸ್ಥಾಪಕ ಆಗಿದ್ದಾರೆ. ಮಸಾಜ್ ಪಾರ್ಲರ್ ಗಲಾಟೆಯಲ್ಲಿ ಬಂಧನಕ್ಕೆ ಒಳಗಾಗಿದ್ದರು.
ಮೊಬೈಲ್ ಪರಿಶೀಲಿಸಿದಾಗ ಸ್ನೇಹಮಯಿ ಕೃಷ್ಣ, ಗಂರರಾಜು ಪೋಟೋಗೆ ರಕ್ತಾಭಿಷೇಕ, ವಾಮಾಚಾರದ ಶಾಕಿಂಗ್ ವೀಡಿಯೋ ಬಯಲಾಗಿತ್ತು. ಈ ಸಂಬಂಧ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಸರ್ಕಾರದಿಂದ ‘KPSC ಪರೀಕ್ಷಾ ಅಕ್ರಮ’ ತಡೆಗೆ ಮಹತ್ವದ ಕ್ರಮ: ‘ನೀಲಿ ಪೆನ್’ ನಿಯಮ ಜಾರಿ