ಬೆಂಗಳೂರು: ಪ್ರಯಾಣಿಕರ ಹೆಚ್ಚಿನ ದಟ್ಟಣೆಯನ್ನು ಸರಿದೂಗಿಸಲು, ನೈರುತ್ಯ ರೈಲ್ವೆಯು ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ಬೆಳಗಾವಿಯ ನಡುವೆ ನಾಲ್ಕು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ.
ರೈಲು ಸಂಖ್ಯೆ 06551 ಎಸ್.ಎಂ.ವಿ.ಟಿ. ಬೆಂಗಳೂರು – ಬೆಳಗಾವಿ ಎಕ್ಸ್‌ಪ್ರೆಸ್ ವಿಶೇಷ ರೈಲು 07 ಆಗಸ್ಟ್, 09 ಆಗಸ್ಟ್, 14 ಆಗಸ್ಟ್ ಮತ್ತು 16 ಆಗಸ್ಟ್ 2025 ರಂದು ಸಂಜೆ 07:00 ಗಂಟೆಗೆ ಎಸ್.ಎಂ.ವಿ.ಟಿ. ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 08:25 ಕ್ಕೆ ಬೆಳಗಾವಿಯನ್ನು ತಲುಪಲಿದೆ.
ರೈಲು ಸಂಖ್ಯೆ 06552 ಬೆಳಗಾವಿ – ಎಸ್.ಎಂ.ವಿ.ಟಿ. ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು 8 ಆಗಸ್ಟ್, 10 ಆಗಸ್ಟ್, 15 ಆಗಸ್ಟ್ ಮತ್ತು 17 ಆಗಸ್ಟ್ 2025 ರಂದು ಸಂಜೆ 05:30 ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 05:00 ಗಂಟೆಗೆ ಎಸ್.ಎಂ.ವಿ.ಟಿ. ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಮಾರ್ಗದಲ್ಲಿ, ಈ ರೈಲುಗಳಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಾಗಿದೆ:
ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್.ಎಂ.ಎಂ. ಹಾವೇರಿ, ಎಸ್.ಎಸ್.ಎಸ್. ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ.
ಈ ರೈಲು ಎರಡು ಎ.ಸಿ. 2-ಟಯರ್ ಕೋಚ್ ಗಳು, ಮೂರು ಎ.ಸಿ. 3-ಟಯರ್ ಕೋಚ್ ಗಳು, ಹತ್ತು ಸ್ಲೀಪರ್ ದರ್ಜೆಯ ಕೋಚ್ ಗಳು, ಮೂರು ದ್ವಿತೀಯ ದರ್ಜೆಯ ಕೋಚ್ ಗಳು ಮತ್ತು ಎರಡು ಲಗೇಜ್-ಕಂ-ಬ್ರೇಕ್ ವ್ಯಾನ್ (ದಿವ್ಯಾಂಗಸ್ನೇಹಿ ಕಂಪಾರ್ಟ್ ಮೆಂಟ್ನೊಂದಿಗೆ)ಗಳನ್ನು ಹೊಂದಿರಲಿದೆ.