ಬೆಂಗಳೂರು : ಕನ್ನಡಿಗರ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಇಂದು ಬೆಂಗಳೂರಿನ ಫಿಲಂ ಕೆಂಬರ್ ನಲ್ಲಿ ಮಹತ್ವದ ಸಭೆ ನಡೆಯಿತು. ಈ ಒಂದು ಸಭೆಯಲ್ಲಿ ಇನ್ಮುಂದೆ ಸೋನು ನಿಗಮ್ ಅವರಿಂದ ಯಾವುದೇ ಕನ್ನಡ ಹಾಡು ಹಾಡಿಸದಿರುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದು ಅಧ್ಯಕ್ಷ ನರಸಿಂಹಲು ತಿಳಿಸಿದರು.
ಸಭೆ ಬಳಿಕ ಮಾತನಾಡಿದ ಅವರು, ಯಾವುದೇ ಚಟುವಟಿಕೆಗಳಲ್ಲಿ ಸೋನು ಜೊತೆ ಭಾಗಿಯಾಗಬಾರದು. ಸೋನು ನಿಗಮ್ ರಿಂದ ಕನ್ನಡ ಹಾಡುಗಳನ್ನು ಹಾಡಿಸದಿರಲು ನಿರ್ಧರಿಸಲಾಗಿದ್ದು, ಇನ್ಮುಂದೆ ಸೋನು ನಿಗಮ ಅವರಿಂದ ಮ್ಯೂಸಿಕಲ್ ಮಾಡಿಸಲ್ಲ ಎಂದು ಬೆಂಗಳೂರಿನಲ್ಲಿ ಫಿಲಂ ಅಧ್ಯಕ್ಷ ನರಸಿಂಹಲು ಹೇಳಿಕೆ ನೀಡಿದರು
ಕಾರ್ಯಕ್ರಮ ಒಂದರಲ್ಲಿ ಕನ್ನಡಿಗರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿರುವ ಸೋನು ನಿಗಮ್, ಘಟನೆ ಬಳಿಕ ಇದುವರೆಗೂ ಸೋನು ನಿಗಮ್ ಕನ್ನಡಿಗರಿಗೆ ಕ್ಷಮೆ ಹೇಳಿಲ್ಲ. ಈ ಕ್ಷಣದಿಂದಲೇ ಸೋನುಗೆ ಅಸಹಕಾರ ತೋರಿಸಬೇಕೆಂದು ಫಿಲಂ ಚೇಂಬರ್ ನಿರ್ಧಾರ ಕೈಗೊಂಡಿದೆ ಗಾಯಕ ಸೋನು ನಿಗಮಗೆ ಇನ್ನೂ ಅರಿವಾಗಿಲ್ಲ ಎಂದು ಬೆಂಗಳೂರಿನಲ್ಲಿ ಫಿಲಂ ಅಧ್ಯಕ್ಷ ನರಸಿಂಹಲು ಹೇಳಿಕೆ ನೀಡಿದರು.
ಉಚಿತ ಸುದ್ದಿ ಪಡೆದುಕೊಳ್ಳುವುದಕ್ಕೆ ನಮ್ಮ ವಾಟ್ಸಪ್ ಗುಂಪು ಸೇರಿಕೊಳ್ಳಿ