ಮಂಡ್ಯ: ನಾಳೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಎಲ್ಲರೂ ಬರಲಿದ್ದಾರೆ. ವಿಶೇಷ ವಾಹನದಲ್ಲಿ ಪಕ್ಷದ ಎಲ್ಲಾ ಶಾಸಕರು ಬರ್ತಾರೆ. ಕೇಂದ್ರ ನಾಯಕರು ಬರೋ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರ ಪೋನ್ ಕೂಡ ನಾನು ರಿಸೀವ್ ಮಾಡೋಕೆ ಆಗಿಲ್ಲ ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯುವ ಸ್ಥಳವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಪರಿಶೀಲನೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಿದರು. ಸಚಿವ ಚಲುವರಾಸ್ವಾಮಿ, ಶಾಸಕರಾದ ಉದಯ ಕದಲೂರು, ರವಿ ಗಣಿಗ, ರಮೇಶ್ ಬಂಡಿಸಿದ್ದೇಗೌಡ , ಜಿಲ್ಲಾಧಿಕಾರಿ ಕುಮಾರ್, ಎಂಎಲ್ಸಿ ದಿನೇಶ್ ಗೂಳಿಗೌಡ ಮತ್ತಿತರರು ಜತೆಗಿದ್ದರು.
ಕರ್ನಾಟಕದ ‘ಸೂಟ್-ಬೂಟ್’ ಸಿಎಂ ಎಸ್.ಎಂ ಕೃಷ್ಣ: ಇದು ಅವರ ಪ್ರಯಾಣದ ಏರಿಳಿತಗಳ ಹಾದಿ | SM Krishna Biography