ಸ್ಲೋವಾಕ್: ಸ್ಲೋವಾಕ್ ಪ್ರಧಾನಿ ರಾಬರ್ಟ್ ಫಿಕೊ ಅವರನ್ನು ದೇಶದ ಮಧ್ಯಭಾಗದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದ ಕಟ್ಟಡದ ಮುಂದೆ ಗುಂಡಿನ ದಾಳಿಯನ್ನು ನಡೆಸಿರೋದಾಗಿ ವರದಿಯಾಗಿದೆ.
ಸರ್ಕಾರಿ ಸಭೆಯಲ್ಲಿ ಭಾಗಿಯಾಗಿದ್ದಂತ ಸ್ಲೋವಾಕ್ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಅವರು ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಈ ಘಟನಾ ಸ್ಥಳದಲ್ಲಿದ್ದ ಪತ್ರಕರ್ತರು ಹಲವಾರು ಗುಂಡುಗಳನ್ನು ಹಾರಿಸಲಾಗಿದೆ ಎಂದು ವರದಿ ಮಾಡಿದ್ದಾರೆ.
ಪ್ರಧಾನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ ಪೊಲೀಸರು ಬಂದೂಕುಧಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಸ್ಲೋವಾಕ್ ಪ್ರಧಾನಿ ರಾಬರ್ಟ್ ಫಿಕೊ ಅವರು ಸರ್ಕಾರಿ ಸಭೆಯ ನಂತರ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಟಿಎಎಸ್ಆರ್ ಬುಧವಾರ ವರದಿ ಮಾಡಿದೆ.
ಫಿಕೊಗೆ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ ಎಂದು ಸಂಸತ್ತಿನ ಉಪಾಧ್ಯಕ್ಷ ಲುಬೊಸ್ ಬ್ಲಾಹಾ ಅವರನ್ನು ಉಲ್ಲೇಖಿಸಿ ಟಿಎಎಸ್ಆರ್ ವರದಿ ಮಾಡಿದೆ.
BREAKING : ಅತ್ಯಾಚಾರ ಆರೋಪಿ ‘ಸಂದೀಪ್ ಲಾಮಿಚಾನೆ’ಗೆ ಕ್ಲೀನ್ ಚಿಟ್, ಟಿ20 ವಿಶ್ವಕಪ್’ನಲ್ಲಿ ನೇಪಾಳ ಪರ ಆಡುವ ಸಾಧ್ಯತೆ
Health Tips: ನೀವು ‘ಮಧುಮೇಹ’ದಿಂದ ಬಳಲುತ್ತಿದ್ದೀರಾ.? ಇಲ್ಲಿದೆ ‘ಕಂಟ್ರೋಲ್ ಟಿಪ್ಸ್’ | Diabetics