ಬೆಂಗಳೂರು: ನಮ್ಮಲ್ಲಿ ಹೆಚ್ಚಿನವರು ನೆಮ್ಮದಿಯಾಗಿ ಮಲಗೋದಕ್ಕೆ ಒದ್ದಾಡುತ್ತಾರೆ. ಮಧ್ಯರಾತ್ರಿವರೆಗೂ ನಿದ್ದೆ ಬರದೇ ಪರದಾಡುತ್ತಾರೆ. ಆದರೆ ಈ ರೀತಿ ಎಚ್ಚರವಾಗಿರುವುದು ಒಳ್ಳೆಯದಲ್ಲ. ಆರೋಗ್ಯ ಹದಗೆಡುತ್ತದೆ. ಮರುದಿನದ ನಿಮ್ಮ ಕೆಲಸದ ಮೇಲೂ ಇದು ಪರಿಣಾಮ ಬೀರುತ್ತೆ. ಅದಕ್ಕಾಗಿಯೇ ನೀವು ರಾತ್ರಿಯಲ್ಲಿ ಚೆನ್ನಾಗಿ ಮಲಗಬೇಕು.

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಮತ್ತು ಒತ್ತಡದಿಂದಾಗಿ ಅನೇಕ ಜನರಿಗೆ ಉತ್ತಮವಾಗಿ ನಿದ್ರಿಸಲು ಆಗ್ತಿಲ್ಲ. ಚೆನ್ನಾಗಿ ನಿದ್ದೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ನಿದ್ದೆ ಬರೋದಿಲ್ಲ. ಅದಕ್ಕಾಗಿಯೇ ಹೆಚ್ಚಿನ ಜನರು ಫೋನ್ ನೋಡುತ್ತಾ ಕಾಲ ಕಳೆಯುತ್ತಾರೆ.

ರಾತ್ರಿ ತಡವಾಗಿ ಮಲಗಿದರೆ ಸಾಕಷ್ಟು ನಿದ್ದೆ ಬರುವುದಿಲ್ಲ. ಮತ್ತೆ ಮುಂಜಾನೆ ಬೇಗ ಏಳಬೇಕಾಗುತ್ತದೆ. ಇದರಿಂದ ನೀವು ಇಡೀ ದಿನ ಫ್ರೆಶ್ ಆಗಿರಲು ಸಾಧ್ಯವಿಲ್ಲ. ಕಿರಿಕಿರಿಯುಂಟುಮಾಡಬಹುದು. ಅದಕ್ಕಾಗಿಯೇ ಕೆಲವರು ನಿದ್ರೆ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಹಾಗೆ ಮಾಡುವುದು ಒಳ್ಳೆಯದಲ್ಲ. ಆರೋಗ್ಯ ಹಾಳಾಗಿದೆ. ಉತ್ತಮ ನಿದ್ರೆ ಪಡೆಯಲು ನೀವು ಏನು ಮಾಡಬೇಕು?

ನೀವು ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕಂದ್ರೆ ನೀವು ಪ್ರತಿ ದಿನ ಧ್ಯಾನವನ್ನು ಪ್ರಾರಂಭಿಸಬೇಕು. ನಿಶಬ್ದ ಏಕಾಂತ ಸ್ಥಳದಲ್ಲಿ ಕುಳಿತು, 15-20 ನಿಮಿಷಗಳ ಕಾಲ ಧ್ಯಾನ ಮಾಡಿ. ಧ್ಯಾನವು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ತನ್ಮೂಲಕ ಒತ್ತಡ ಕಡಿಮೆಯಾಗುತ್ತದೆ. ಮನಸ್ಸಿನಿಂದ ನಕಾರಾತ್ಮಕ ಆಲೋಚನೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು ಲ್ಯಾವೆಂಡರ್ ಎಣ್ಣೆಯನ್ನು ವರ್ಷಗಳಿಂದ ಬಳಸಲಾಗುತ್ತಿದೆ. ಈ ಎಣ್ಣೆಯು ಮನಸ್ಸಿಗೆ ಶಾಂತವಾದ ಭಾವನೆಯನ್ನು ನೀಡುತ್ತದೆ. ನಿಮ್ಮ ಕರವಸ್ತ್ರದ ಮೇಲೆ ಎರಡರಿಂದ ಮೂರು ಹನಿ ಲ್ಯಾವೆಂಡರ್ ಎಣ್ಣೆಯನ್ನು ಸಿಂಪಡಿಸಿ ಪರಿಮಳವನ್ನು ಉಸಿರಾಡಿ. ಕೆಲವು ಹನಿಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಿ ರಾತ್ರಿ ಚೆನ್ನಾಗಿ ನಿದ್ದೆ ಮಾಡಿ.

ಆಹಾರದಲ್ಲಿ ಮೆಗ್ನೀಸಿಯಮ್ ಅನ್ನು ಸೇರಿಸಿ. ದೇಹದಲ್ಲಿ ಮೆಗ್ನೀಸಿಯಮ್ ಕೊರತೆಯಿದ್ದರೆ ಒತ್ತಡ ಹೆಚ್ಚಾಗುತ್ತದೆ. ಅದಕ್ಕಾಗಿಯೇ ನೀವು ಮೆಗ್ನೀಸಿಯಮ್ ಹೊಂದಿರುವ ಆಹಾರವನ್ನು ಸೇವಿಸಬೇಕು.

ಇದು ನೈಸರ್ಗಿಕವಾಗಿ ಕಂಡು ಬರುವ ಖನಿಜವಾಗಿದ್ದು ಅದು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದರಿಂದ ನೀವು ಉತ್ತಮ ನಿದ್ರೆ ಪಡೆಯುತ್ತೀರಿ. ಗೋಧಿ, ಪಾಲಕ್, ಡಾರ್ಕ್ ಚಾಕೊಲೇಟ್, ಮೊಸರು, ಆವಕಾಡೊಗಳು ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿವೆ. ದಿನಕ್ಕೆ ಕನಿಷ್ಠ 400 ಮಿಗ್ರಾಂ ಪೊಟ್ಯಾಸಿಯಮ್ ಅನ್ನು ಪಡೆಯುವುದು ರಾತ್ರಿಯಲ್ಲಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಮೆಲಟೋನಿನ್ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ನಿದ್ರಾಹೀನತೆಯ ಸಮಸ್ಯೆಯನ್ನು ದೂರವಿಡಬಹುದು. ಮೆಲಟೋನಿನ್ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ತ್ವರಿತವಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಬಾದಾಮಿ ಹಾಲು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ಮೆದುಳಿಗೆ ಮೆಲಟೋನಿನ್ ಮಾಡಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಬಾದಾಮಿ ಹಾಲನ್ನು ಕುಡಿಯುವುದು ನಿದ್ರಾಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಉತ್ತಮ ನಿದ್ರೆಯನ್ನು ಪಡೆಯಲು, ನೀವು ವಿಶೇಷವಾಗಿ ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಕೆಫೀನ್, ಆಲ್ಕೋಹಾಲ್ ಮತ್ತು ಧೂಮಪಾನವನ್ನು ಕಡಿಮೆ ಮಾಡಬೇಕು.

ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡಿ. ನಿಮ್ಮ ಮಲಗುವ ಕೋಣೆಯಲ್ಲಿನ ವಾತಾವರಣವು ಆಹ್ಲಾದಕರವಾಗಿರಬೇಕು. ದೇಹ ಮತ್ತು ಮನಸ್ಸಿಗೆ ಹಿತವಾಗಿರಬೇಕು. ನೀವು ಈ ಸಲಹೆಗಳನ್ನು ಅನುಸರಿಸಿದರೆ, ನೀವು ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡುತ್ತೀರಿ ಮತ್ತು ಬೆಳಿಗ್ಗೆ ತುಂಬಾ ಚಟುವಟಿಕೆಯಿಂದ ಇರುತ್ತೀರಿ.

Share.
Exit mobile version