ನಿದ್ದೆ ಸರಿಯಾಗಿ ಆಗದಿದ್ದಾಗ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ನಿರ್ಧಿಷ್ಟ ಗಂಟೆಗಳ ಕಾಲ ನಿದ್ದೆ ಮಾಡುವುದು ಎಷ್ಟು ಮುಖ್ಯವೋ, ಹಾಗೆಯೇ ರಾತ್ರಿ ಹೇಗೆ ಮಲಗುತ್ತೇವೆ ಎಂಬುದು ಸಹ ತುಂಬಾ ಮುಖ್ಯವಾಗುತ್ತದೆ.
ಹಾಗೆಯೇ ವಿವಿಧ ನಿದ್ದೆಯ ಸ್ಥಾನಗಳು ಕೂಡ ಆರೋಗ್ಯದ ಮೇಲೆ ಅನೇಕ ರೀತಿಯಾಗಿ ಪರಿಣಾಮ ಬೀರಬಹುದು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಲಗುತ್ತಾರೆ. ಕೆಲವೊಬ್ಬರು ಬೆನ್ನಿನ ಮೇಲೆ ಮಲಗಿದರೆ, ಇನ್ನು ಕೆಲವೊಬ್ಬರು ಹೊಟ್ಟೆಯ ಮೇಲೆ ಮಲಗುತ್ತಾರೆ.
ನಿದ್ದೆಯ ಪ್ರತಿಯೊಂದು ಭಂಗಿಯು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿಯೋಣ..
ಬೆನ್ನಿನ ಮೇಲೆ ಮಲಗುವುದು ಇದು ಮಲಗುವ ಒಂದು ಭಂಗಿಯಾಗಿದೆ. ಗುರುತ್ವಾಕರ್ಷಣೆಯು ದೇಹವನ್ನು ಕೇಂದ್ರೀಕರಿಸುವುದರಿಂದ ಬೆನ್ನಿನ ಮೇಲೆ ಮಲಗುವುದು ಸುಲಭವಾಗುತ್ತದೆ ಎನಿಸುತ್ತದೆ. ಈ ರೀತಿ ಮಲಗುವಾಗ ಕುತ್ತಿಗೆ ಕರ್ವ್ ಆಗಿರುತ್ತದೆ. ಇದು ಕೆಲವರಿಗೆ ಸರಿ ಎನಿಸಿದರೆ ಇನ್ನೂ ಕೆಲವರಿಗೆ ನಿದ್ರೆಯಲ್ಲಿ ಉಸಿರುಕಟ್ಟಿದ ಹಾಗೆ ಆಗಬಹುದು ತುಂಬಾ ಬೆನ್ನಿನ ಸಮಸ್ಯೆ ಹೊಂದಿರುವವರು ಈ ರೀತಿಯ ನಿದ್ರಾ ಸ್ಥಾನ ಅನುಸರಿಸುವುದು ಒಳ್ಳೆಯದಲ್ಲ.
ಹೊಟ್ಟೆಯ ಮೇಲೆ ಮಲಗುವುದು ಇದು ತಲೆಯನ್ನು ಒಂದು ದಿಕ್ಕಿಗೆ ತಿರುಗಿಸಿ ಹೊಟ್ಟೆಯ ಮೇಲೆ ಮಲಗುವುದರಿಂದ ತುಂಬಾ ನೋವು ಉಂಟಾಗುವ ಸಾಧ್ಯತೆ ಇದೆ . ಈ ರೀತಿಯ ನಿದ್ರಾ ಭಂಗಿ ಬೆನ್ನುಮೂಳೆಯನ್ನು ಕುಗ್ಗಿಸುವಾಗ ಹೊಟ್ಟೆಯ ಮೇಲೆ ಮಲಗುವುದರಿಂದ ಕುತ್ತಿಗೆಯನ್ನು ಹಿಂದಕ್ಕೆ ವಿಸ್ತರಿಸಬಹುದು. ಇದು ರಕ್ತದ ಹರಿವನ್ನು ನಿರ್ಬಂಧಿಸಬಹುದು ಮತ್ತು ನರಗಳನ್ನು ಸಂಕುಚಿತಗೊಳಿಸುವ ಸಾಧ್ಯತೆ ಹೆಚ್ಚಿದೆ. ದೀರ್ಘಾ ಕಾಲದ ವರೆಗೆ ಈ ರೀತಿಯ ಸ್ಥಾನವನ್ನು ಅನುಸರಿಸುವುದು ಆರೋಗ್ಯಕರವಲ್ಲ.
ಹೊಟ್ಟೆ,ಮುಖ ಕೆಳಗೆ ಮಾಡಿ ಮಲಗುವ ಅಭ್ಯಾಸ ಹೆಚ್ಚಿನವರಿಗೆ ಇರುತ್ತದೆ. ಈ ರೀತಿ ಮಲಗುವ ಅಭ್ಯಾಸ ಗೊರಕೆಗೆ ಕಾರಣವಾಗುವ ಸ್ಲೀಪ್ ಅಪ್ನಿಯದಿಂದ ಉಂಟಾಗುವ ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ. ಸ್ಲೀಪ್ ಅಪ್ನಿಯ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಗೂ ಉತ್ತಮವಾಸುತ್ತದೆ.. ಆದರೆ ಬೆನ್ನು, ಕುತ್ತಿಗೆ ಮತ್ತು ಕೀಲುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.ಇದರಿಂದ ನೋವು ಸಂಭವಿಸಬಹುದು.