ನವದೆಹಲಿ: 2010 ರ ನಂತರ ರಾಜ್ಯದಲ್ಲಿ ನೀಡಲಾದ ಎಲ್ಲಾ ಒಬಿಸಿ ಪ್ರಮಾಣಪತ್ರಗಳನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ದ್ವಾರಕಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, “ಇಂದು, ಕಲ್ಕತ್ತಾ ಹೈಕೋರ್ಟ್ INDI ಮೈತ್ರಿಗೆ ಬಿಗಿಯಾದ ಕಪಾಳಮೋಕ್ಷ ಮಾಡಿದೆ. ಬಂಗಾಳದಲ್ಲಿ 2010 ರ ನಂತರ ನೀಡಲಾದ ಎಲ್ಲಾ OBC ಪ್ರಮಾಣಪತ್ರಗಳನ್ನು ನ್ಯಾಯಾಲಯವು ರದ್ದುಗೊಳಿಸಿದೆ. ಪಶ್ಚಿಮ ಬಂಗಾಳ ಸರ್ಕಾರವು ಮುಸ್ಲಿಮರಿಗೆ ವಿವರಿಸಲಾಗದ ರೀತಿಯಲ್ಲಿ OBC ಪ್ರಮಾಣಪತ್ರಗಳನ್ನು ನೀಡಿದ್ದರಿಂದ ಇದನ್ನು ಮಾಡಲಾಗಿದೆ. ಅವರ ರಾಜಕೀಯ ಮತ್ತು ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣದ ಗೀಳು ಎಲ್ಲಾ ಮಿತಿಗಳನ್ನು ದಾಟಿದೆ ಅಂತ ಹೇಳಿದರು. “ಆಜ್ ಕೋರ್ಟ್ ನೆ ತಮಾಚಾ ಮಾರಾ ಹೈ, ಯಹ್ ಖಾನ್ ಮಾರ್ಕೆಟ್ ಗ್ಯಾಂಗ್ ಪಾಪ್ ಕಾ ಭಾಗಿದರ್ ಹೈ (ಇಂದು ನ್ಯಾಯಾಲಯವು ಭಾರಿ ಹೊಡೆತ ನೀಡಿದೆ, ಪಾಪಕ್ಕೆ ಈ ಖಾನ್ ಮಾರ್ಕೆಟ್ ಹೊಣೆಯಾಗಿದೆ)” ಎಂದು ಪ್ರಧಾನಿ ಮೋದಿ ಹೇಳಿದರು.
Today, the Kolkata High Court has given a tight slap to the INDI Alliance. The court has cancelled all the OBC certificates issued after 2010 in Bengal. It has been done because the West Bengal issued an OBC certificate to the Muslims. Their politics and obsession of vote bank… pic.twitter.com/JFsLK9v1fB
— BJP (@BJP4India) May 22, 2024